ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬಸ್ ದಿನ- ಬಿಎಂಟಿಸಿಯಿಂದ ಹೆಚ್ಚು ವಾಹನ

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಸ್‌ದಿನದ ಅಂಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಯು ಇದೇ 4ರ ಬುಧವಾರದಿಂದ ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸಂಚಾರ ಸೇವೆಯನ್ನು ಆರಂಭಿಸಲಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಪೊರೇಷನ್, ಮೆಯೋಹಾಲ್, ದೊಮ್ಮಲೂರು, ಎಚ್. ಎ.ಎಲ್ ಮುಖ್ಯದ್ವಾರ, ಹೋಪ್ ಫಾರಂ, ಕಾಡುಗೋಡಿ, ಸೀಗೆಹಳ್ಳಿ, ಮಾರ್ಗವಾಗಿ ಹೊಸಕೋಟೆಗೆ 335ಇ ಕೆ ಮಾರ್ಗ ಸಂಖ್ಯೆಯ 10 ವೋಲ್ವೊ ಬಸ್‌ಗಳು ಸಂಚರಿಸಲಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಪೊರೇಷನ್, ಕೆ.ಆರ್.ಮಾರುಕಟ್ಟೆ, ಚಾಮರಾಜಪೇಟೆ, ಕತ್ರಿಗುಪ್ಪೆ, ಪದ್ಮನಾಭ ನಗರ, ಮಾರ್ಗವಾಗಿ ಉತ್ತರಹಳ್ಳಿ ಬಸ್ ನಿಲ್ದಾಣಕ್ಕೆ ಹೊಸದಾಗಿ 210 ಎ ಸಿ ಮಾರ್ಗ ಸಂಖ್ಯೆಯ 10 ವೋಲ್ವೊ ಬಸ್‌ಗಳು ಸಂಚರಿಸಲಿವೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಪೊರೇಷನ್, ಡೇರಿ ಸರ್ಕಲ್, ಸೇಂಟ್ ಜಾನ್ ಆಸ್ಪತ್ರೆ, ಕೋರಮಂಗಲ, ಜಕ್ಕಸಂದ್ರ, ಎಚ್.ಎಸ್.ಆರ್ ಬಿಡಿಎ ಕಾಂಪ್ಲೆಕ್ಸ್, ಎಚ್.ಎಸ್.ಆರ್ ಕ್ಲಬ್ ಮಾರ್ಗವಾಗಿ ಸಿ.ಪಿ.ಡಬ್ಲ್ಯೂ.ಡಿ ಕ್ವಾಟ್ರಸ್‌ಗೆ ಹೊಸದಾಗಿ 340 ಇ ಮಾರ್ಗ ಸಂಖ್ಯೆಯ ನಾಲ್ಕು ವೋಲ್ವೊ ಬಸ್‌ಗಳು ಸಂಚರಿಸಲಿವೆ.

ಬಿಇಎಲ್ ಸರ್ಕಲ್ ನಿಂದ ಹೆಬ್ಬಾಳ, ನಾಗವಾರ, ಬಾಬುಸಾಪಾಳ್ಯ, ಕಸ್ತೂರಿನಗರ, ಮಾರತ್‌ಹಳ್ಳಿ ಮೇಲ್ಸೇತುವೆ, ಸರ್ಜಾಪುರ, ಅಗರ, ಬಿಟಿಎಂ ಬಡಾವಣೆ ಮಾರ್ಗವಾಗಿ ಬನಶಂಕರಿಗೆ 500 ಎ ಎಲ್ ಮಾರ್ಗ ಸಂಖ್ಯೆಯ ನಾಲ್ಕು ವೋಲ್ವೊ ಬಸ್‌ಗಳು ಸಂಚರಿಸಲಿವೆ.

ವಸಂತಪುರದಿಂದ ಉತ್ತರಹಳ್ಳಿ, ಪದ್ಮನಾಭನಗರ, ಮಾರತ್‌ಹಳ್ಳಿ, ತ್ಯಾಗರಾಜನಗರ, ಎನ್.ಆರ್. ಕಾಲೊನಿ, ಸೌತ್ ಎಂಡ್ ವೃತ್ತ, ಜಯನಗರ ಬಸ್ ನಿಲ್ದಾಣ, ಬಿಟಿಎಂ ಲೇಔಟ್ ಮಾರ್ಗವಾಗಿ ಸಿಲ್ಕ್ ಬೋರ್ಡ್‌ಗೆ 384 ಕೆ ಮಾರ್ಗ ಸಂಖ್ಯೆಯ ಮೂರು ಬಸ್‌ಗಳು ಸಂಚರಿಸಲಿವೆ.

ಬನಶಂಕರಿಯಿಂದ ಕೋಣನಕುಂಟೆ ಕ್ರಾಸ್ ಕೊತ್ತನೂರು, ಜಂಬೂಸವಾರಿ ದಿಣ್ಣೆ, ಮೀನಾಕ್ಷಿ ದೇವಾಲಯ, ಹುಳಿಮಾವು ಮಾರ್ಗವಾಗಿ ಜಯನಗರಕ್ಕೆ 215 ಎ ಸಿ ಮಾರ್ಗ ಸಂಖ್ಯೆಯ ಎರಡು ಬಸ್‌ಗಳು ಸಂಚರಿಸಲಿವೆ.
ಕೆ.ಆರ್.ಮಾರುಕಟ್ಟೆಯಿಂದ ಕಾರ್ಪೊರೇಷನ್, ಹಲಸೂರು, ಹೂಡಿ, ಡಿ.ಹೊಸಹಳ್ಳಿ ಮಾರ್ಗವಾಗಿ ಬಾಣರಹಳ್ಳಿಗೆ 306 ಟಿ ಮಾರ್ಗ ಸಂಖ್ಯೆಯ ಒಂದು ಬಸ್ ಸಂಚರಿಲಿದೆ.

ವೇಳೆ ವಿಸ್ತರಣೆ

ಸಂಸ್ಥೆಯ 6,069 ಬಸ್‌ಗಳ 80 ಸಾವಿರ ಓಡಾಟ (ಟ್ರಿಪ್) ಗಳಲ್ಲಿ ಈ ತಿಂಗಳ ಬಸ್‌ದಿನದ ಪ್ರಯುಕ್ತ ಸುಮಾರು 1500ಕ್ಕಿಂತಲೂ ಹೆಚ್ಚು ಸಾಮಾನ್ಯ ಮಾರ್ಗಗಳಲ್ಲಿ ರಾತ್ರಿ 7 ರಿಂದ 10ಗಂಟೆಯವರೆಗೂ ಬಸ್ ಸಂಚಾರ ವೇಳೆ ವಿಸ್ತರಿಸಲಾಗಿದೆ.

ಅಲ್ಲದೇ ಬುಧವಾರದಿಂದ ಹೊಸದಾಗಿ ಸುಮಾರು 3 ಸಾವಿರ ಹೆಚ್ಚುವರಿ ಮಾರ್ಗಗಳ ಸಂಚಾರ ಆರಂಭವಾಗಲಿದೆ. ಬಸ್ ಘಟಕಗಳಲ್ಲಿ ಲಭ್ಯವಿರುವ ಸುಮಾರು 100 ಹೆಚ್ಚುವರಿ ಬಸ್‌ಗಳನ್ನು ಈಗಾಗಲೇ ಸಂಚರಿಸುತ್ತಿರುವ ಮಾರ್ಗಗಳಲ್ಲಿ ಹೆಚ್ಚಿನ ಸಂಚಾರಕ್ಕೆ ನಿಯೋಜಿಸಲಾಗುತ್ತಿದೆ. ಇದರಿಂದ ಸುಮಾರು 800 ರಷ್ಟು ಹೆಚ್ಚುವರಿ ಓಡಾಟಗಳು ಜಾರಿಗೆ ಬರಲಿವೆ.
 

ಹೊಸ ಬಸ್‌ಗಳು

ಸಂಸ್ಥೆಯಲ್ಲಿ ಈ ವರ್ಷ ಹೊಸದಾಗಿ 374 ಪರಿಸರ ಸ್ನೇಹಿ ಬಿಎಸ್-4 ಸಾಮಾನ್ಯ, 74 ಪುಷ್ಪಕ್ ಪ್ಲಸ್, 100 ವೋಲ್ವೊ ಮತ್ತು 25 ಕರೋನ ಬಸ್‌ಗಳ ಸಂಚಾರ ಆರಂಭವಾಗಿದೆ.

ಬಸ್‌ದಿನದ ಅಂಗವಾಗಿ ನಗರದ ಹಳೆ ವಿಮಾನ ನಿಲ್ದಾಣ ರಸ್ತೆ (ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆಗಳಲ್ಲಿ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT