ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಬಿಎಂಟಿಸಿ ಬಸ್ ದಿನ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ ಇದೇ ತಿಂಗಳ 4ರಂದು ಬಸ್ ದಿನ ಹಮ್ಮಿಕೊಳ್ಳಲಾಗಿದೆ.

ಹಳೆ ವಿಮಾನ ನಿಲ್ದಾಣ ರಸ್ತೆ(ಐಟಿಪಿಎಲ್), ಸರ್ಜಾಪುರ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ, ಥಣಿಸಂದ್ರ ರಸ್ತೆ, ಹೆಣ್ಣೂರು ರಸ್ತೆ ಹಾಗೂ ಹಳೆ ಮದ್ರಾಸ್ ರಸ್ತೆ ಮಾರ್ಗಗಳನ್ನು ಬಸ್ ದಿನಕ್ಕೆ ಆಯ್ದುಕೊಳ್ಳಲಾಗಿದೆ.

ಸಂಸ್ಥೆಯು ಪ್ರತಿ ದಿನ 6,120 ಅನುಸೂಚಿ (ಷೆಡ್ಯೂಲ್)ಗಳೊಂದಿಗೆ 84,000 ಸುತ್ತುವಳಿ (ಟ್ರಿಪ್)ಗಳ ಆಚರಣೆ ಮಾಡುತ್ತಿದೆ. ಬಸ್ ದಿನದಂದು ಈಗಿರುವ 1500ಕ್ಕಿಂತಲೂ ಹೆಚ್ಚು ಸಾಮಾನ್ಯ ಪಾಳಿ ಅನುಸೂಚಿಗಳನ್ನು ರಾತ್ರಿ 7 ಗಂಟೆಯಿಂದ 10 ಗಂಟೆಯವರೆಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಸುಮಾರು 3000 ಹೆಚ್ಚುವರಿ ಸುತ್ತುವಳಿಗಳು ಲಭ್ಯವಾಗಲಿವೆ. ಅಲ್ಲದೆ, ಘಟಕಗಳಲ್ಲಿ ಲಭ್ಯವಿರುವ ಸುಮಾರು 100 ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲು ನಿಯೋಜಿಸಲಾಗುವುದು. ಇದರಿಂದ 800 ರಷ್ಟು ಸುತ್ತುವಳಿಗಳನ್ನು ಹೆಚ್ಚುವರಿಯಾಗಿ ದೊರಕಲಿದೆ.

ಹೊಸ ಬಸ್‌ಗಳು:
ಕೆಂಪೇಗೌಡ ಬಸ್ ನಿಲ್ದಾಣದಿಂದ ಕಾರ್ಪೊರೇಷನ್, ಕೃ.ರಾ.ಮಾರುಕಟ್ಟೆ, ಬನಶಂಕರಿ, ಕೋಣನಕುಂಟೆ ಕ್ರಾಸ್ ಮಾರ್ಗವಾಗಿ ಸತ್ಯಮ್ಮನ ಕುಂಟೆಗೆ ಹೊಸ ಬಸ್, ಕೃ.ರಾ.ಮಾರುಕಟ್ಟೆ ಬಸ್ ನಿಲ್ದಾಣದಿಂದ ಚಾಮರಾಜಪೇಟೆ, ಹನುಮಂತನಗರ ಮಾರ್ಗವಾಗಿ ದತ್ತಾತ್ರೇಯ ನಗರಕ್ಕೆ ಹೊಸ ಬಸ್, ಕೃ.ರಾ.ಮಾರುಕಟ್ಟೆ ಬಸ್ ನಿಲ್ದಾಣದಿಂದ ಚಾಮರಾಜಪೇಟೆ, ಹನುಮಂತನಗರ ಮಾರ್ಗವಾಗಿ ಮೂಕಾಂಬಿಕಾ ನಗರಕ್ಕೆ ಹೊಸದಾಗಿ ಸಾರಿಗೆ ಸೇವೆಯನ್ನು ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT