ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಮೆಟಾಲಿಕಾ ಮೋಡಿ

Last Updated 28 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಾಸ್ ಏಂಜಲೀಸ್ ಮೂಲದ `ಮೆಟಾಲಿಕಾ~ ವಿಶ್ವವಿಖ್ಯಾತ ರಾಕ್ ಬ್ಯಾಂಡ್. ಜಗತ್ತಿನಾದ್ಯಂತ 10 ಕೋಟಿ ಆಲ್ಬಂ ಮಾರಿದ ದಾಖಲೆ ಹೊಂದಿದೆ. 80ರ ದಶಕದ ಅತಿ ಪ್ರಭಾವಿ ಬ್ಯಾಂಡ್ ಎಂಬ ಹೆಗ್ಗಳಿಕೆ, ಅಬ್ಬರದ ಸಂಗೀತಕ್ಕೆ ಅಸ್ತಿತ್ವ ತಂದುಕೊಟ್ಟ ಕೀರ್ತಿ ಮೆಟಾಲಿಕಾದ್ದು.

1981ರಲ್ಲಿ ಡ್ರಮ್ಮರ್ ಲಾರ್ಸ್‌ ಉಲ್‌ರಿಚ್ ಸ್ಥಳೀಯ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿದಾಗ ಜೇಮ್ಸ ಹೆಟ್‌ಫೀಲ್ಡ್ ಅದಕ್ಕೆ ಸ್ಪಂದಿಸಿದರು. ಆಗ ಆರಂಭವಾದುದ್ದು ಮೆಟಾಲಿಕಾ. 1983ರಲ್ಲಿ ಮೆಟಾಲಿಕಾ ಸೇರಿಕೊಂಡ ಗಿಟಾರ್ ಕಲಾವಿದ ಕಿರ್ಕ್ ಹ್ಯಾಮೆಟ್ ಮತ್ತು 2003ರಲ್ಲಿ ಸೇರ್ಪಡೆಯಾದ ಬಾಸ್ ಕಲಾವಿದ ರಾಬರ್ಟ್ ತ್ರೂಜಿಲೊ ಈಗ ಮೆಟಾಲಿಕಾದ ಅವಿಭಾಜ್ಯ ಅಂಗವಾಗಿದ್ದಾರೆ.

ಮೆಟಾಲಿಕಾ ಈಗ `ವ್ಲಾಡಿವರ್ ರಾಕ್ ಇನ್ ಇಂಡಿಯಾ~ ಅಂಗವಾಗಿ ಬೆಂಗಳೂರಿಗೆ ಬರುತ್ತಿದೆ. ಭಾನುವಾರ `ಮೆಟಾಲಿಕಾ~ ಬ್ಯಾಂಡ್ ತಂಡ ನಗರದ ಯುವ ಜನತೆಯನ್ನು, ರಾಕ್ ಸಂಗೀತ ಪ್ರಿಯರನ್ನು ಹುಚ್ಚೆಬ್ಬಿಸಲಿದೆ.

ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ. ಸಂಜೆ 6. ಟಿಕೆಟ್ ವಿವರಗಳಿಗೆ: ಠಿಜ್ಚಿಛಿಠಿಜಛ್ಞಿಜಿಛಿ.ಜ್ಞಿ

ಇನ್ನರ್ ಸ್ಯಾಂಕ್ಟಮ್ ಸಂಗೀತ
ರೇಡಿಯೊ ಇಂಡಿಗೊ ಏರ್ಪಡಿಸಿದ್ದ ವ್ಲಾಡಿವರ್ ರಾಕ್ `ಎನ್~ ಇಂಡಿಯಾ ಸ್ಪರ್ಧೆಯಲ್ಲಿ ವಿಜಯಶಾಲಿಯಾದ ಬೆಂಗಳೂರು ಮೂಲದ `ಇನ್ನರ್ ಸ್ಯಾಂಕ್ಟಮ್~ ಬ್ಯಾಂಡ್ ಮೆಟಾಲಿಕಾ ಪ್ರದರ್ಶನಕ್ಕೆ ಮುನ್ನುಡಿಯಾಗಿ ಅದೇ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.

ದೇಶದ ಇತರ ರಾಕ್ ಬ್ಯಾಂಡ್‌ಗಳ ಜತೆ ನಡೆದ ಕಠಿಣ ಸ್ಪರ್ಧೆಯಲ್ಲಿ `ಇನ್ನರ್ ಸ್ಯಾಂಕ್ಟಮ್~ ಮೊದಲ ಸ್ಥಾನ ಪಡೆದು ಈ ಐತಿಹಾಸಿಕ ಅವಕಾಶ ಗಿಟ್ಟಿಸಿಕೊಂಡಿದೆ. 

ಪೆಪ್ಸಿ ಸ್ಪರ್ಧೆ
ಇದೇ ಸಂದರ್ಭದಲ್ಲಿ ಪೆಪ್ಸಿ ಮೆಟಾಲಿಕಾ ಅಭಿಮಾನಿಗಳಿಗಾಗಿ `ಎಫ್1 ಮೆಟಾಲಿಕಾ~ ಸ್ಪರ್ಧೆ ಏರ್ಪಡಿಸಿದೆ. ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿ, ಟ್ವಿಟರ್‌ನಲ್ಲಿ ಟ್ವಿಟ್ ಮಾಡಿ ಮೆಟಾಲಿಕಾ ಸಂಗೀತಗಾರರ ಸ್ನೇಹ ಗಿಟ್ಟಿಸಿ ಎಂದು ಪೆಪ್ಸಿ ಹೇಳುತ್ತಿದೆ. ಸ್ಪರ್ಧೆಯ ವಿಜೇತ ಅಭಿಮಾನಿ ಮೆಟಾಲಿಕಾದ ಸಂಗೀತಗಾರರನ್ನು ವೈಯಕ್ತಿಕವಾಗಿ ಭೇಟಿ ಮಾಡಬಹುದು. ಅವರು ಇಳಿದುಕೊಂಡ ಹೋಟೆಲ್‌ನಲ್ಲೇ ಇಳಿದುಕೊಳ್ಳಬಹುದು. ಸಂಗೀತ ಕಾರ್ಯಕ್ರಮಕ್ಕೆ ಉಚಿತ ಪಾಸ್ ಗಿಟ್ಟಿಸಬಹುದು. ಇದಷ್ಟೇ ಅಲ್ಲ, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವಿಜೇತರಾದ 30 ಅದೃಷ್ಟಶಾಲಿಗಳಿಗೆ ಪೆಪ್ಸಿ ಸಮಾಧಾನಕರ ಬಹುಮಾನಗಳನ್ನೂ ನೀಡುತ್ತಿದೆ.

ಫೇಸ್‌ಬುಕ್‌ನಲ್ಲಿ ಅತಿಹೆಚ್ಚು ಸಂಖ್ಯೆಯ ಸ್ನೇಹಿತರಿಗೆ ಈ ಸ್ಪರ್ಧೆಯ ಕುರಿತು ಮಾಹಿತಿ ನೀಡಲು ಟ್ಯಾಗ್ ಮಾಡಿದ ಅಥವಾ ಅತಿಹೆಚ್ಚು ಜನರಿಂದ ಟ್ಯಾಗ್ ಮಾಡಲ್ಪಟ್ಟ ಅಭಿಮಾನಿ ವಿಜೇತರಾಗುತ್ತಾರೆ. ಟ್ವಿಟರ್‌ನಲ್ಲಿ, ಅತ್ಯಂತ ಚುರುಕಾಗಿ ಟ್ವಿಟ್ ಮಾಡಿ ಮೆಟಾಲಿಕಾದ ಸಂಗೀತಗಾರರಿಂದ ಖುದ್ದು ಉತ್ತರ ಪಡೆದ ವ್ಯಕ್ತಿ ವಿಜೇತರಾಗುತ್ತಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಡಿಡಿಡಿ.್ಛಚ್ಚಛಿಚಿಟಟ.್ಚಟಞ/ಛಿಜಿಐ್ಞಜಿ ಅಥವಾ ಠಿಡಿಜಿಠಿಠಿಛ್ಟಿ.್ಚಟಞ/ಛಿಜ್ಚಿಠಿಜ ಪ್ರವೇಶಿಸಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT