ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಶಂಕರ ಪಾಟೀಲ ಕಲಾ ಪ್ರಶಸ್ತಿ ಪ್ರದಾನ.

Last Updated 18 ಫೆಬ್ರುವರಿ 2011, 6:30 IST
ಅಕ್ಷರ ಗಾತ್ರ

ದಾವಣಗೆರೆ:  ಈಬಾರಿಯ ‘ಶಂಕರ ಪಾಟೀಲ ಕಲಾ ಪ್ರಶಸ್ತಿ’ಯನ್ನು ಬೆಂಗಳೂರಿನ ಕಲಾವಿದ ಎಂ.ಬಿ. ಪಾಟೀಲ ಅವರಿಗೆ  ಫೆ. 19ರಂದು ಪ್ರದಾನ ಮಾಡಲಾಗುವುದು.
ನಗರದ ಕಲಾಭವನ ಎಜುಕೇಷನಲ್ ಅಸೋಸಿಯೇಷನ್  ಈ ಸಮಾರಂಭ ರೋಟರಿ ಬಾಲಭವನದಲ್ಲಿ ಅಂದು ಸಂಜೆ 6ಕ್ಕೆ ನಡೆಯಲಿದೆ. ಆಂದೋಲನ ಪತ್ರಿಕೆ, ಬೆಂಗಳೂರಿನ ದಿ ಆರ್ಟ್ ಆಫ್ ಜ್ಯೂವೆಲರಿ, ರೋಟರಿ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಅಂದು ಬೆಳಿಗ್ಗೆ 10ಕ್ಕೆ ಎಂ.ಬಿ. ಪಾಟೀಲ ಅವರ ಚಿತ್ರಕಲಾ ಪ್ರಾತ್ಯಕ್ಷಿಕೆ, ಪ್ರದರ್ಶನ ನಡೆಯಲಿದೆ. ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಗೌರವ ನಿರ್ದೇಶಕ ಡಾ.ಎಸ್. ಶೆಟ್ಟರ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ, ನಾಡೋಜ ಜೆ.ಎಸ್. ಖಂಡೇರಾವ್, ಡಾ.ಎಂ.ಜಿ. ಈಶ್ವರಪ್ಪ, ನಾಡೋಜ ಡಾ.ಚನ್ನವೀರ ಕಣವಿ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

‘ಗೆದ್ದು ಬಾ ಇಂಡಿಯಾ’ ಪ್ರಸಾರ
ದಾವಣಗೆರೆಯ ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ‘ಗೆದ್ದು ಬಾ ಇಂಡಿಯಾ’ ವಿಶ್ವಕಪ್ ಕ್ರಿಕೆಟ್‌ಗಾಗಿ ಸಿದ್ಧಪಡಿಸಿದ ವಿಡಿಯೋ ಅಲ್ಬಂ ಟಿವಿ-9 ವಾರ್ತಾ ವಾಹಿನಿಯಲ್ಲಿ ಫೆ. 18ರಂದು ಸಂಜೆ 6ರಿಂದ 7ರವರೆಗೆ ಪ್ರಸಾರವಾಗಲಿದೆ ಎಂದು ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ಜಸ್ಟಿನ್ ಡಿ’ಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗೆ ಆರ್. ಪ್ರಶಾಂತ್ ಮೊಬೈಲ್ 91643 78772 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT