ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಶಿವಮೊಗ್ಗ ದಸರಾ ಆರಂಭ

Last Updated 27 ಸೆಪ್ಟೆಂಬರ್ 2011, 6:15 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರಸಭೆಯ `ಶಿವಮೊಗ್ಗ ದಸರಾ~ ಈ ಬಾರಿ ಸೆ. 28ರಿಂದಅ. 6ರವರೆಗೆ ವಿಜೃಂಭಣೆಯಿಂದ ನೆರವೇರಲಿದೆ.

`ಶಿವಮೊಗ್ಗ ದಸರಾ~ದಲ್ಲಿ `ಮಹಿಳಾ ದಸರಾ~, `ದಸರಾ ಚಲನಚಿತ್ರೋತ್ಸವ~, `ಯುವ ದಸರಾ~, `ಮಕ್ಕಳ ದಸರಾ~, `ಸಾಂಸ್ಕೃತಿಕ ದಸರಾ~, `ಛಾಯಾಚಿತ್ರ- ಚಿತ್ರಕಲಾ ಪ್ರದರ್ಶನ~ ಹಾಗೂ `ದಸರಾ ಚಿತ್ರಕಲಾ ಸಂತೆ~ ಹಮ್ಮಿಕೊಳ್ಳಲಾಗಿದೆ ಎಂದು  ನಗರಸಭಾ ಅಧ್ಯಕ್ಷ ಕೆ.ಎಸ್. ಗಂಗಾಧರಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರಸಭೆ ಮತ್ತು ಬೆಳ್ಳಿಮಂಡಲದ ಸಹಯೋಗದೊಂದಿಗೆ ಹಮ್ಮಿಕೊಂಡ ದಸರಾ ಚಲನಚಿತ್ರೋತ್ಸವವನ್ನು 28ರಂದು ಬೆಳಿಗ್ಗೆ 10.30ಕ್ಕೆ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ನಟಿ ಭಾವನಾ ಉದ್ಘಾಟಿಸುವರು. ಅಲ್ಲದೇ, ಅಂದಿನಿಂದ ಅಕ್ಟೋಬರ್ 3ರವರೆಗೆ ಪ್ರತಿ ಬೆಳಿಗ್ಗೆ 10.30ಕ್ಕೆ ನಗರದ ವಿವಿಧ ಸಿನಿಮಾ ಮಂದಿರಗಳಲ್ಲಿ ಉಚಿತ ಚಲನಚಿತ್ರ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಹಾಗೆಯೇ, ಅಂದು ಸಂಜೆ ಅಂಬೇಡ್ಕರ್ ಭವನದಲ್ಲಿ ಮಹಿಳಾ ದಸರಾದ ಅಂಗವಾಗಿ ನಡೆಯುವ ನೃತ್ಯವೈಭವ ಕಾರ್ಯಕ್ರಮಕ್ಕೂ ನಟಿ ಭಾವನಾ ಚಾಲನೆ ನೀಡುವರು. ವಿವಿಧ ತಂಡಗಳು ನೃತ್ಯ ಪ್ರದರ್ಶನ ನೀಡಲಿವೆ ಎಂದರು.

29ರಂದು ಅಂಬೇಡ್ಕರ್ ಭವನದಲ್ಲಿ ಸಂಜೆ 5ಕ್ಕೆ `ಮಹಿಳಾ ದಸರಾ~ದಲ್ಲಿ `ಗಾನವೈಭವ~ದಲ್ಲಿ ಪ್ರಸಿದ್ಧ ತಂಡಗಳು ಗಾನ ಪ್ರದರ್ಶನ ನೀಡಲಿವೆ. 30ರಂದು ಗೋಪಾಳದ ಕೆಎಚ್‌ಬಿ ಕಾಲೊನಿಯ ಸರ್ಕಾರಿ ಶಾಲೆಯಲ್ಲಿ ಸಂಜೆ 6ಕ್ಕೆ ನಡೆಯುವ `ಯುವ ದಸರಾ~ವನ್ನು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಉದ್ಘಾಟಿಸುವರು.

ಅಲ್ಲದೇ, ಸಂಜೆ 6ಕ್ಕೆ ಆರಕೆರೆ ಗ್ರಾಮದ ರಾಮೇಶ್ವರ ದೇವಸ್ಥಾನದಿಂದ `ಯುವ ದಸರಾ ಜ್ಯೋತಿ ಯಾತ್ರೆ~ ಏರ್ಪಡಿಸಲಾಗಿದೆ. ಅಕ್ಟೋಬರ್ 1ರಂದು ಸಂಜೆ 6ಕ್ಕೆ ಗೋಪಾಳದ ಕೆಎಚ್‌ಬಿ ಕಾಲೊನಿಯ ಸರ್ಕಾರಿ ಶಾಲೆಯಲ್ಲಿ ಮಂಜುಳಾ ಗುರುರಾಜ್ ಅವರಿಂದ ಸುಗಮ ಸಂಗೀತ ಆಯೋಜಿಸಲಾಗಿದೆ ಎಂದು ವಿವರಿಸಿದರು.

`ಮಕ್ಕಳ ದಸರಾ~ ಬಿ.ಎಚ್. ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಅ. 1ರಿಂದ ಮೂರು ದಿವಸಗಳವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ, `ಬೆಳ್ಳಿಮಂಡಲ~ದ ಸಹಕಾರದೊಂದಿಗೆ ಮಕ್ಕಳ ಚಲನಚಿತ್ರೋತ್ಸವವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಫ್ರೆಂಡ್ಸ್‌ಶಟಲ್ ಕ್ಲಬ್‌ನಲ್ಲಿ ಪ್ರತಿ ಸಂಜೆ 4ಕ್ಕೆ ಏರ್ಪಡಿಸಲಾಗಿದೆ.   ಅ. 1ರಂದು ಬೆಳಿಗ್ಗೆ 9ಕ್ಕೆ ಶಿವಪ್ಪನಾಯಕ ಪ್ರತಿಮೆ ವೃತ್ತದಲ್ಲಿ `ಮಕ್ಕಳ ಬೃಹತ್ ಜಾಥಾ~ ಹಮ್ಮಿಕೊಳ್ಳಲಾಗಿದೆ. `ಮಕ್ಕಳ ದಸರಾ~ವನ್ನು ಅಂದು ಮಧ್ಯಾಹ್ನ 12ಕ್ಕೆ ವಾಲಿಬಾಲ್ ಪಟು ಮೇಘನಾ ಉದ್ಘಾಟಿಸುವರು. 2ರಂದು ಬೆಳಿಗ್ಗೆ 11ಕ್ಕೆ ವಿವಿಧ ಶಾಲಾ ಮಕ್ಕಳಿಂದ ಪ್ರದರ್ಶನ, ಮನರಂಜನೆ ಕಾರ್ಯಕ್ರಮ, ಮಕ್ಕಳ ಆಟಿಕೆಗಳು, ಪ್ರತಿಭಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

3 ರಂದು ಕುವೆಂಪು ರಂಗಮಂದಿರದಲ್ಲಿ ಸಂಜೆ 5ರಿಂದ ರಾತ್ರಿ 9ವರೆಗೆ `ಮಕ್ಕಳ ದಸರಾ~ದ ಸಮಾರೋಪ ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.      ಅ. 2ರಂದು ಬೆಳಿಗ್ಗೆ 10.30ಕ್ಕೆ ಕೋಟೆ ರಸ್ತೆಯ ಶಿವಪ್ಪನಾಯಕ ಅರಮನೆಯಲ್ಲಿ ಹಮ್ಮಿಕೊಂಡಿರುವ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತ ಉದ್ಘಾಟಿಸುವರು.

ಅಂದು ಸಂಜೆ 5.30ಕ್ಕೆ ಸಾಂಸ್ಕೃತಿಕ ದಸರಾವನ್ನು ಗಾಯಕ ಶಿವಮೊಗ್ಗ ಸುಬ್ಬಣ್ಣ ಉದ್ಘಾಟಿಸುವರು. ತದನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅ. 3ರಂದು ಸಂಜೆ 5.30ಕ್ಕೆ ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 4ರಂದು ಬೆಳಿಗ್ಗೆ 10ಕ್ಕೆ ಕೋಟೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ ಖ್ಯಾತ ಚಿತ್ರಕಲಾವಿದರುಗಳಿಂದ ದಸರಾ ಚಿತ್ರಕಲಾ ಸಂತೆಯನ್ನು ಚಿತ್ರಕಲಾವಿದ ಚಿ.ಸು. ಕೃಷ್ಣಶೆಟ್ಟಿ ಉದ್ಘಾಟಿಸುವರು.ಅಂದು ಸಂಜೆ 5.30ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ಶಂಕರ್ ಶಾನುಭೋಗ್ ಮತ್ತು ತಂಡದಿಂದ `ಸುಗಮ ಸಂಗೀತ~ ಕಾರ್ಯಕ್ರಮವಿದೆ ಎಂದು ಹೇಳಿದರು.

5ರಂದು ಸಂಜೆ 5.30ಕ್ಕೆ ವಿವಿಧ ತಂಡಗಳಿಂದ `ಸಾಂಸ್ಕೃತಿಕ ಕಾರ್ಯಕ್ರಮ~ ಏರ್ಪಡಿಸಲಾಗಿದೆ. 6ರಂದು ಮಧ್ಯಾಹ್ನ 3ಕ್ಕೆ ಚಾಮುಂಡೇಶ್ವರಿ ದೇವಿಯ ವೈಭವದ ಮೆರವಣಿಗೆ ನಡೆಯಲಿದೆ. ಸಂಜೆ 6.15ಕ್ಕೆ ನೆಹರೂ ಕ್ರೀಡಾಂಗಣದಲ್ಲಿ ತಹಶೀಲ್ದಾರ್ ಪಿ.ಎನ್. ಮಂಜುನಾಥ ಅವರಿಂದ `ಬನ್ನಿ ಮುಡಿಯುವ ಉತ್ಸವ~ ನಡೆಯಲಿದೆ. ಬನ್ನಿ ಮುಡಿದ ನಂತರ ಅತ್ಯಾಕರ್ಷಕ ಪಟಾಕಿ ಸಿಡಿತ ಹಾಗೂ ರಾವಣ ದಹನ ಏರ್ಪಡಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪ್ರತಿಪಕ್ಷದ ನಾಯಕ ಎಸ್.ಕೆ. ಮರಿಯಪ್ಪ, ನಗರಸಭಾ ಆಯುಕ್ತ ಪಿ.ಜಿ. ರಮೇಶ್, ವಿವಿಧ ಸಮಿತಿ ಅಧ್ಯಕ್ಷರಾದ ಕೆ. ಶಂಕರ್ (ಗನ್ನಿ), ಎನ್. ಪರಂಧಾಮರೆಡ್ಡಿ, ಸುವರ್ಣ ಶಂಕರ್, ಎಸ್. ರಮೇಶ್ (ರಾಮು), ಎಸ್.ಎನ್. ಚನ್ನಬಸಪ್ಪ, ಎನ್.ಜೆ. ರಾಜಶೇಖರ್, ವಿಶ್ವನಾಥ ಕಾಶಿ, ಸುನೀತಾ ಅಣ್ಣಪ್ಪ, ವಿಜಯಲಕ್ಷ್ಮೀ ಸಿ. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT