ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಭಾರತ- ರಷ್ಯಾ ಸೇನೆ ಜಂಟಿ ತಾಲೀಮು

Last Updated 5 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಮಾಸ್ಕೊ (ಪಿಟಿಐ): `ಇಂದಿರಾ~ ಸರಣಿಯ ಜಂಟಿ ಸಮರಾಭ್ಯಾಸ ನಡೆಸುತ್ತಿರುವ ಭಾರತ ಮತ್ತು ರಷ್ಯಾ ಸೇನೆಗಳು, ಮಂಗಳವಾರದಿಂದ ಆರಂಭವಾಗುವ (ಆ.7) ಈ ಸರಣಿಯ ನಾಲ್ಕನೇ ಅವತರಣಿಕೆಯಲ್ಲಿ ಇದೇ ಮೊದಲ ಬಾರಿಗೆ ಭಯೋತ್ಪಾದನೆ ನಿಗ್ರಹದ ಗುರಿ ಇರಿಸಿಕೊಂಡು  ತಾಲೀಮು ನಡೆಸಲಿವೆ.

ರಷ್ಯಾದ ಆಗ್ನೇಯ ಭಾಗದಲ್ಲಿರುವ ಚೀನಾ ಮತ್ತು ಮಂಗೋಲಿಯಾ ಗಡಿಭಾಗದಲ್ಲಿ ಈ ಜಂಟಿ ಸಮರಾಭ್ಯಾಸ ನಡೆಯಲಿದೆ. ಈ ತಾಲೀಮಿನಲ್ಲಿ ಉಭಯ ದೇಶಗಳ ಸೇನೆಯ ಟ್ಯಾಂಕರ್‌ಗಳು, ಶಸಸ್ತ್ರ ಯುದ್ಧ ವಾಹನಗಳು, 250ಕ್ಕೂ ಹೆಚ್ಚು ಸೇನಾ ತುಕಡಿಗಳು ಭಾಗವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

`ಇಂದಿರಾ-2012~ ಜಂಟಿ ಸಮರಾಭ್ಯಾಸವನ್ನು ಭಯೋತ್ಪಾದನೆಯನ್ನು ನಿಗ್ರಹಿಸುವ ಗುರಿ ಇಟ್ಟುಕೊಂಡು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಭಾರತ ಸೇನೆಯ ಹೆಚ್ಚುವರಿ ಮಹಾನಿರ್ದೇಶಕ ಮೇಜರ್ ಜನರಲ್ ಆರ್.ಎಸ್. ಚಾಂದ್ ನೇತೃತ್ವದಲ್ಲಿ ಭಾರತದ ಸೇನಾ ತುಕಡಿಗಳು ಈ ಜಂಟಿ ಸಮರಾಭ್ಯಾಸದಲ್ಲಿ ಭಾಗವಹಿಸಲಿದ್ದು, ವಾಯು ಪಡೆಯ ವಿಮಾನಗಳೂ ಭಾಗಿಯಾಗಲಿವೆ. ಈ ತಾಲೀಮು ಆಗಸ್ಟ್ 16ಕ್ಕೆ ಮುಕ್ತಾಯವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT