ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ಯಕ್ಷಗಾನ ಸಪ್ತಾಹ

Last Updated 5 ಅಕ್ಟೋಬರ್ 2012, 5:15 IST
ಅಕ್ಷರ ಗಾತ್ರ

ಶಿವಮೊಗ್ಗ: ಅಭ್ಯುದಯ ಟ್ರಸ್ಟ್‌ಅ. 6ರಿಂದ 12ರವರೆಗೆ ಪ್ರತಿದಿನ ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ `ವಿದೂಷಕ ವಿಜೃಂಭಣೆ~ ಎಂಬ ಯಕ್ಷಗಾನ ಸಪ್ತಾಹ-2012 ಆಯೋಜಿಸಿದೆ.

ದಕ್ಷಿಣಕನ್ನಡದ ಕೀಲಾರು ಗೋಪಾಲಕೃಷ್ಣ ಪ್ರತಿಷ್ಠಾನ, ಆದಿಚುಂಚನಗಿರಿ ಶಾಖಾಮಠ, ಡಾ.ರತ್ನಾಕರ್ ಮತ್ತು ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಯೋಗದೊಂದಿಗೆ ಈ ಸಪ್ತಾಹ ಹಮ್ಮಿಕೊಳ್ಳಲಾಗಿದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ.

6ರಂದು ಹೊಸನಗರದ ರಾಮಚಂದ್ರಪುರ ಮಠದ ಮೇಳದಿಂದ `ಶ್ರೀಕೃಷ್ಣಲೀಲೆ~, 7ಕ್ಕೆ `ಓಂ ನಮಃ ಶಿವಾಯ~, 8ಕ್ಕೆ `ಶಶಿವಂಶ ವಲ್ಲರಿ~ ಹಾಗೂ 9ಕ್ಕೆ `ಶ್ರೀನಿವಾಸ ಕಲ್ಯಾಣ~ ಪ್ರದರ್ಶನಗೊಳ್ಳಲಿವೆ.

10ರಂದು ಕೆರೆಮನೆಯ ಇಡಗುಂಜಿ ಮಹಗಣಪತಿ ಯಕ್ಷಗಾನ ಮಂಡಳಿಯಿಂದ `ಕಾರ್ತ್ಯ ವೀರ‌್ಯಾರ್ಜುನ~, 11ಕ್ಕೆ ಚಪ್ಪರಮನೆ ಶ್ರೀಧರ ಹೆಗಡೆ ಅವರ ನೇತೃತ್ವದಲ್ಲಿ `ಬೇಡರ ಕಣ್ಣಪ್ಪ~ ಹಾಗೂ 12ಕ್ಕೆ ಅನಂತಪದ್ಮನಾಭ ಪಾಟಕ್ ಅವರ ನೇತೃತ್ವದಲ್ಲಿ `ಶ್ರೀಕೃಷ್ಣ ಗಾರುಡಿ~ ಪ್ರದರ್ಶನಗೊಳ್ಳಲಿವೆ.

ಯಕ್ಷಗಾನ ಸಪ್ತಾಹದ ಉದ್ಘಾಟನೆ ಅ. 6ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಪ್ರಸನ್ನನಾಥ ಸ್ವಾಮೀಜಿ, ಬಿಡಿಎ ಆಯುಕ್ತ ಟಿ. ಶ್ಯಾಂಭಟ್  ಉಪಸ್ಥಿತರಿರುವರು. ಸಮಾರೋಪ ಸಮಾರಂಭ ಅ. 12ರಂದು ಸಂಜೆ 5.30ಕ್ಕೆ ನಡೆಯಲಿದ್ದು, ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಉಪಸ್ಥಿತರರಿರುವರು ಎಂದು ಅಭ್ಯುದಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT