ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೆಂದಿಗೂ ಯುಪಿಎ ಭಾಗ: ಎನ್‌ಸಿಪಿ ಮುಖಂಡರ ಹೊಸ ರಾಗ

Last Updated 21 ಜುಲೈ 2012, 8:15 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಕೇಂದ್ರ ಸಂಪುಟದಲ್ಲಿ ಎರಡನೇಯ ಸ್ಥಾನ ನೀಡುವ ವಿಚಾರದಲ್ಲಿ ಕಾಂಗ್ರೆಸ್‌ನೊಂದಿಗೆ  ಮುನಿಸಿಕೊಂಡಿದ್ದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡರು ಶನಿವಾರ `ನಾವು ಯಪಿಎ ಮೈತ್ರಿಕೂಟದಲ್ಲಿಯೇ ಇದ್ದೇವೆ~ ಎಂದು ಹೇಳುವ ಮೂಲಕ ಬಿರುಕು ಮುಚ್ಚುವ ಮಾತು ಆಡಿದ್ದಾರೆ.

ಎನ್‌ಸಿಪಿ ಮುಖ್ಯಸ್ಥರೂ ಆಗಿರುವ ಕೃಷಿ ಸಚಿವ ಶರದ್ ಪವಾರ್ ಅವರೊಂದಿಗೆ ದೆಹಲಿಯಿಂದ ಆಗಮಿಸಿದ  ಬಹೃತ್ ಕೈಗಾರಿಕಾ ಖಾತೆ ಸಚಿವ ಪ್ರಫುಲ್ ಪಟೇಲ್ ಅವರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ `ನಾವು ಯುಪಿಎಯಲ್ಲೇ ಇದ್ದೇವೆ. ಮುಂದೆಯೂ ಈ ಮೈತ್ರಿಕೂಟದ ಪಾಲುದಾರರಾಗಿರುತ್ತೇವೆ. ಎಲ್ಲ ಕಾಲದಲ್ಲೂ ನಮ್ಮ ಬೆಂಬಲ ಪಡೆದಿರುವ ಕೇಂದ್ರ ಸರ್ಕಾರಕ್ಕೆ ನಮ್ಮ ಸಹಾಯ ನಿರಂತರವಾಗಿ ಭವಿಷ್ಯದಲ್ಲೂ ಮುಂದುವರಿಯಲಿದೆ~ ಎಂದು ಹೇಳಿದರು.
 
ಇದೇ ವೇಳೆ ಸರ್ಕಾರದಿಂದ ಹೊರ ಬಂದು ಕಾರ್ಯ ತಂತ್ರ ರಚಿಸುವ ನಿರ್ಧಾರದ ವಿಷಯವನ್ನು ತಳ್ಳಿ ಹಾಕಿದ ಅವರು ಕಾಂಗ್ರೆಸ್ ಮೈತ್ರಿಕೂಟದೊಂದಿಗೆ ಎನ್‌ಸಿಪಿಯು ಎಂಟು ವರ್ಷದ ಸ್ಥಿರ ಮೈತ್ರಿ ಹೊಂದಿದೆ ಎಂದು ಹೇಳಿದರು.

ಸರ್ಕಾರದಿಂದ ಹೊರ ಬರುವುದಾಗಿ `ಎನ್‌ಸಿಪಿ~ ಗುರುವಾರ ಪತ್ರ ಕಳುಹಿಸಿದ ನಂತರ ಹೊಸ ಬಿಕ್ಕಟ್ಟಿಗೆ ಸಿಲುಕಿದ ಕೇಂದ್ರ ಆಡಳಿತಾರೂಢ ಯುಪಿಎ ಮಿತ್ರ ಪಕ್ಷದ ಮನ ಒಲಿಸುವ ಪ್ರಯತ್ನ ನಡೆಸಿತ್ತು. ಕಾಂಗ್ರೆಸ್‌ನ ಕಸರತ್ತು ಪಟೇಲ್ ಅವರ ಹೇಳಿಕೆ ಗಮನಿಸಿದರೆ ಫಲಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT