ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾ ಬಜೆಟ್ ಸ್ಥಗಿತ: ಒಬಾಮ ಸಲಹೆ

Last Updated 15 ಫೆಬ್ರುವರಿ 2011, 16:50 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಮುಂದಿನ ಐದು ವರ್ಷ ಕಾಲ ನಾಸಾದ ಬಜೆಟ್ ಸ್ಥಗಿತಗೊಳಿಸುವ ಸಲಹೆಯನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ನೀಡಿದ್ದಾರೆ. ಇದು ಜಾರಿಗೆ ಬಂದರೆ 2016ರವರೆಗೆ ಸಂಸ್ಥೆಯ ವಾರ್ಷಿಕ ಆಯವ್ಯಯ ಈಗಿರುವ 18.7 ಶತಕೋಟಿ ಡಾಲರ್ ಮಟ್ಟದಲ್ಲೇ ಮುಂದುವರಿಯಲಿದೆ.

‘ಆದರೆ ಮಾನವ ಸಹಿತ ಬಾಹ್ಯಾಕಾಶ ನೌಕೆ ಮತ್ತು ಸಂಶೋಧನೆಗೆ ಸಂಬಂಧಿಸಿದ ಬದ್ಧತೆಗೆ ಇದರಿಂದ ಯಾವುದೇ ತೊಡಕಾಗದು. ಉನ್ನತ ವಿಜ್ಞಾನ, ವೈಮಾನಿಕ ವಿಜ್ಞಾನ, ಶಿಕ್ಷಣದಂತಹ ಭವಿಷ್ಯದ ಯೋಜನೆಗಳಿಗೆ ಹಣ ತೊಡಗಿಸಲಾಗುತ್ತದೆ. ಪರಿವರ್ತನೆ, ತಾಂತ್ರಿಕ ಅಭಿವೃದ್ಧಿ, ವೈಜ್ಞಾನಿಕ ಸಂಶೋಧನೆಯ ಪುನಶ್ಚೇತನಕ್ಕೆ ಬಜೆಟ್ ಬೆಂಬಲ ನೀಡುತ್ತದೆ’ ಎಂದು ನಾಸಾದ ಆಡಳಿತಗಾರ ಚಾರ್ಲ್ಸ್ ಬೋಲ್ಡನ್ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT