ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಕೊಲಸ್ ಮಡ್ಯುರೊ ವೆನಿಜುವೆಲಾ ಅಧ್ಯಕ್ಷ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕರಾಕಸ್ (ಎಎಫ್‌ಪಿ): ವೆನಿಜುವೆಲಾ ಅಧ್ಯಕ್ಷ  ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಂಗಾಮಿ ಅಧ್ಯಕ್ಷ  ನಿಕೊಲಸ್ ಮಡ್ಯುರೊ ಅವರು ಅತ್ಯಲ್ಪ  ಮತಗಳ ಅಂತರದಲ್ಲಿ ಆಯ್ಕೆ ಆಗಿದ್ದಾರೆ.

ಆದರೆ ಮಡ್ಯುರೊ ಅವರ ಆಯ್ಕೆಯನ್ನು ತಳ್ಳಿಹಾಕಿರುವ ವಿರೋಧಿಗಳು ಇದರಲ್ಲಿ ಭಾರಿ ಪ್ರಮಾಣದ ಮೋಸ ನಡೆದಿದೆ ಎಂದು ದೂರಿದ್ದಾರೆ.ಮಡ್ಯುರೊ ಅವರ ವಿರುದ್ಧ ಸ್ಪರ್ಧಿಸಿದ್ದ ಹೆನ್ರಿಕ್  ಕ್ಯಾಪ್ರಿಲ್ಸ್ ಅವರು ಮತಗಳ ಪುನರ್ ಎಣಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಹ್ಯೂಗೊ ಷಾವೇಜ್  ಕಳೆದ  ತಿಂಗಳು ನಿಧನ ಹೊಂದಿದ ನಂತರ ಅಧ್ಯಕ್ಷ  ಸ್ಥಾನಕ್ಕೆ ಚುನಾವಣೆ ನಡೆದಿತ್ತು.ಮಡ್ಯುರೊ ಅವರು ಶೇ 50.66 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಕ್ಯಾಪ್ರಿಲ್ಸ್ ಅವರು ಶೇ 49.1ರಷ್ಟು ಮತಗಳನ್ನು ಗಳಿಸಿದ್ದಾರೆ.

ಸಮೃದ್ಧ ತೈಲ ನಿಕ್ಷೇಪ ಹೊಂದಿರುವ ದಕ್ಷಿಣ ಅಮೆರಿಕದ ರಾಷ್ಟ್ರವಾದ ವೆನಿಜುವೆಲಾ ಕಳೆದ ಸುಮಾರು ಎರಡು ದಶಕಗಳ ಕಾಲ ಷಾವೇಜ್ ಅವರ ಆಡಳಿತಕ್ಕೆ ಒಳಪಟ್ಟಿತ್ತು. ಷಾವೇಜ್ ಆಡಳಿತದಲ್ಲಿ ಮಡ್ಯುರೊ ಉಪಾಧ್ಯಕ್ಷರಾಗಿದ್ದರು.

ಬಸ್ ಚಾಲಕ: ಇಂದು ಅಧ್ಯಕ್ಷರಾಗಿರುವ ಮಡ್ಯುರೊ ಅವರು ಒಂದು ಕಾಲದಲ್ಲಿ ಬಸ್ ಚಾಲಕರಾಗಿದ್ದು,  ನಂತರ ಕಾರ್ಮಿಕ ಸಂಘಟನೆಯ ಸದಸ್ಯರಾಗಿದ್ದರು. ಎರಡು ದಶಕಗಳಿಂದ ಷಾವೇಜ್ ಅವರ ಜತೆಗಾರರಾಗಿದ್ದರು..

ಶಿಕ್ಷಣ ಸಚಿವ ಹಾಗೂ ವಿದೇಶಾಂಗ ಸಚಿವಾರಾಗಿ ಕರ್ತವ್ಯ ನಿರ್ವಹಿಸಿರುವ  ಮಡ್ಯುರೊ ಅವರನ್ನು ಷಾವೇಜ್ ಅವರ  `ದತ್ತು ಪುತ್ರ'  ಎಂದೇ ಕರೆಯಲಾಗುತ್ತಿತ್ತು.

ಸಾಯಿಬಾಬಾ ಭಕ್ತ
(ನವದೆಹಲಿ ವರದಿ):  ಮಡ್ಯುರೊ ಅವರು ಸತ್ಯ ಸಾಯಿಬಾಬಾ ಅವರ ಭಕ್ತರಾಗಿದ್ದರು.2005ರಲ್ಲಿ  ಪುಟ್ಟಪರ್ತಿಗೆ ಪತ್ನಿ ಸಿಲಿಯಾ ಪೊರ್ಸ್ ಜತೆ ಬಂದು ಸಾಯಿಬಾಬಾ ಅವರ ಆಶೀರ್ವಾದ ಪಡೆದಿದ್ದರು. ಆ ಸಂದರ್ಭದಲ್ಲಿ ಶಿಕ್ಷಣ ಸಚಿವರಾಗ್ದ್ದಿದ ಮಡ್ಯುರೊ ಅವರಿಗೆ ಸಾಯಿಬಾಬಾ ಭೇಟಿ ಮಾಡಿದ ನಂತರ ವಿದೇಶಾಂಗ ಸಚಿವರಾಗಿ ಬಡ್ತಿ ದೊರಕಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT