ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗದಿತ ವೇಳೆಗೆ ಬಸ್ಸು ಓಡಲಿ

Last Updated 6 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ದೇವನಹಳ್ಳಿ ಹೊಸಕೋಟೆ ಮಾರ್ಗದಲ್ಲಿ ಹೊಸ ನಲ್ಲೂರು, ಬಾಲೆಪುರ, ಚೆನ್ನಹಳ್ಳಿ, ಅರಳೂರು ಮೂಲಕ ಸಂಚರಿಸುವ ನಗರ ಸಾರಿಗೆ ವಾಹನಗಳು ಸಮಯಕ್ಕೆ ಸರಿಯಾಗಿ ಸಂಚರಿಸುವುದಿಲ್ಲ.

ಬೆಳಿಗ್ಗೆ 8 ಗಂಟೆಯ ಬಸ್ಸು ಹೊರಟುಹೋದರೆ ಮತ್ತೆ ಸರ್ಕಾರಿ ಬಸ್ಸು ಬರುವುದು 9 ಗಂಟೆಗೆ. ಇದರಿಂದ ಕಾರ್ಮಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರೈತಾಪಿ ಜನರಿಗೆ ಬಹಳ ತೊಂದರೆಯಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಆಟೊಗಳು ಜನರನ್ನು ಕುರಿಗಳಂತೆ ತುಂಬಿ ಸಂಚರಿಸುತ್ತವೆ. ತತ್ಪರಿಣಾಮ ನಗರ ಸಾರಿಗೆ ವಾಹನಗಳಲ್ಲಿ ಜನರ ಸಂಚಾರ ವಿರಳವಾಗಿರುತ್ತದೆ.

ಆದ್ದರಿಂದ ಬಿಎಂಟಿಸಿ ಅಧಿಕಾರಿಗಳು ಕೂಡಲೇ ಈ ಮಾರ್ಗದಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚಿಸುವ ಜೊತೆಗೆ ನಿಗದಿತ ವೇಳೆಗೆ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಮಾಸಿಕ ಹಾಗೂ ದೈನಿಕ ಪಾಸುಗಳಿಗೂ ಅನುಮತಿ ನೀಡಬೇಕು. ಈ  ಮೂಲಕ ಆಟೊಗಳಿಗೆ ಕಡಿವಾಣ ಹಾಕಬೇಕು ಎಂದು ವಿನಂತಿ.
-ಡಿ.ಎ. ಮಾರುತಿರಾಜ್

ಪೊಲೀಸ್ ಬೀಟ್ ತಪ್ಪದಿರಲಿ
ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡುವ ಕೆಲವು ಬಡಾವಣೆಗಳಿಗೆ ರಾತ್ರಿ ವೇಳೆಯಲ್ಲಿ ಬೀಟ್ ಪೊಲೀಸಿನವರು ಬರುವುದಿಲ್ಲ, ಹೊಯ್ಸಳ ವಾಹನವೂ ಸಹ ರಾತ್ರಿ ವೇಳೆ ಗಸ್ತು ತಿರುಗುತ್ತಿಲ್ಲ.

ಜೆ.ಪಿ.ನಗರದ 2, 3 ಹಾಗೂ 4ನೇ ಹಂತಗಳಲ್ಲಿ ಪೊಲೀಸ್ ಬೀಟ್ ಇಲ್ಲದೆ ಬಹಳ ದಿನಗಳೇ ಆದುವು. ಕೆಲವು ಕಡೆ `ಪಾಯಿಂಟ್ ಬುಕ್~ ಇಟ್ಟಿದ್ದರೂ ಅವರು ಸಹಿ ಮಾಡುತ್ತಿಲ್ಲ. ಒಂದು ದಿನ ಬಂದರೆ 15 ದಿವಸ ನಾಪತ್ತೆಯಾಗುತ್ತಾರೆ.

ಕಳ್ಳಕಾಕರು, ಬೀದಿ ಕಾಮಣ್ಣರ ಕಾಟ, ಸರಗಳ್ಳರು ಹಾಗೂ ಪಿಕ್‌ಪಾಕೆಟ್ ಸಮಸ್ಯೆ ಇದರಿಂದಾಗಿ ಜಾಸ್ತಿಯಾಗಿದೆ. ಆದ್ದರಿಂದ ಈ ಭಾಗಗಳಲ್ಲಿ ಪೊಲೀಸರನ್ನು ನಿಯೋಜಿಸಲು ಸೂಕ್ತ ಕ್ರಮಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಲ್ಲಿ ವಿನಂತಿಸಿಕೊಳ್ಳುತ್ತೇನೆ.
-ಸುಕಾರಾಂ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT