ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗಮಾನಂದರನ್ನೇಕೆ ಬೆಂಬಲಿಸಲಿಲ್ಲ?

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಬಾಬಾ ರಾಮ್‌ದೇವ್ ಜನಹಿತ ಕಾರ್ಯಕ್ಕೆ ಆರೆಸ್ಸೆಸ್ ಬೆಂಬಲ ಕೊಡುವುದರಲ್ಲಿ ತಪ್ಪೇನಿದೆ ಎಂದು ಶಿವಮೊಗ್ಗದ ಪ್ರಹ್ಲಾದ ಜೋಷಿ ಎಂಬುವವರು ಪ್ರಶ್ನೆ ಎತ್ತಿದ್ದಾರೆ.

ನಿಜ. ಆರೆಸ್ಸೆಸ್ ಬೆಂಬಲದಲ್ಲಿ ತಪ್ಪಿಲ್ಲದೇ ಇರಬಹುದು. ಆದರೆ ಉತ್ತರಾಖಂಡದಲ್ಲಿ ಗಂಗಾನದಿಯ ರಕ್ಷಣೆಗಾಗಿ ನಿರಂತರ ಉಪವಾಸ ಮಾಡಿ ಸಾವನ್ನಪ್ಪಿದ ನಿಗಮಾನಂದರನ್ನು ಆರೆಸ್ಸೆಸ್ ಬೆಂಬಲಿಸಲಿಲ್ಲವೇಕೆ?

ಇಲ್ಲಿ ಅಡಗಿರುವ ಸತ್ಯಾಂಶವೇನೆಂಬುದು ಎಂಥವರಿಗೂ ತಿಳಿದುಬಿಡುತ್ತದೆ. ಉತ್ತರಾಖಂಡದಲ್ಲಿ ಒಂದುವೇಳೆ ಬಿಜೆಪಿಯೇತರ ಪಕ್ಷವೊಂದು ಆಡಳಿತದಲ್ಲಿದ್ದಿದ್ದರೆ ಆರೆಸ್ಸೆಸ್ ಖಂಡಿತ ಬೆಂಬಲಿಸುತ್ತಿತ್ತು. ಕರ್ನಾಟಕದಲ್ಲೂ ಅಷ್ಟೇ.

ಬಿಜೇಪಿಯೇತರ ಪಕ್ಷವೊಂದು ಆಡಳಿತದಲ್ಲಿದ್ದಿದ್ದರೆ ಇಲ್ಲೂ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಭಾಗಿಯಾಗಿರುತ್ತಿತ್ತು ಎಂಬುದಂತೂ ಸತ್ಯ. ಇಂಥ ಹಿತಾಸಕ್ತಿಗಳು ಇವರುವವರೆಗೂ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT