ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ಪಗಡೆ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಳಚರಿತ್ರೆಯದೋ, ಮಹಾಭಾರತದ ಧರ್ಮರಾಯ-ದುರ್ಯೋಧನನಿಗೋ ಸಂಬಂಧಿಸಿದ ಪಗಡೆಯಾಟ ಇದಲ್ಲ. ಇದು ಸಿನಿಮಾದ ಪಗಡೆ! ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನೈಜ ಘಟನೆ ಆಧರಿಸಿದ ಸಿನಿಮಾ- `ಪಗಡೆ~. ಆ ಸುದ್ದಿ ಎಂಥದು? ಎಂಬುದನ್ನು ನಿಗೂಢವಾಗಿಯೇ ಇಟ್ಟ ಚಿತ್ರತಂಡ, `ಚಿತ್ರವನ್ನು ಸಂಪೂರ್ಣ ನೋಡಿ ಕುತೂಹಲಕಾರಿ ಕಥನದ ಅನುಭವ ಪಡೆಯಿರಿ~ ಎಂದು ಜಾರಿಕೊಂಡಿತು.

ನಿರ್ದೇಶಕ ಬಿ.ಎ.ಪುರುಷೋತ್ತಮ್ ಈ ಮೊದಲು ಆರು ಭಕ್ತಿ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿದವರು. ಜೊತೆಗೆ ಭಕ್ತಿಗೀತೆಗಳನ್ನು ಬರೆದವರು. ಇದೇ ಮೊದಲ ಬಾರಿಗೆ ಕಮರ್ಷಿಯಲ್ ಸಿನಿಮಾ ನಿರ್ದೇಶಿಸುವ ಹುಮ್ಮಸ್ಸಿನಲ್ಲಿದ್ದ ಅವರಿಗೆ ಕಿರುತೆರೆ ನಟ ಹರ್ಷವರ್ಧನ್ ಕತೆ ಒದಗಿಸಿದ್ದಾರೆ. ಚಿತ್ರಕತೆ, ಸಂಭಾಷಣೆ ಬರೆದಿರುವವರು ಕ್ರಿಶ್ ಜೋಶಿ.

ನಾಯಕ ವಿಶ್ವಾಸ್ ಭಾರದ್ವಾಜ್ ತಮಗೆ ನಿರ್ಮಾಪಕರನ್ನು ಪರಿಚಯಿಸಿದ್ದು, ನಂತರ ಸಿನಿಮಾ ಆರಂಭವಾಗಿದ್ದನ್ನು ವಿವರಿಸಿದ ನಿರ್ದೇಶಕರಿಗೆ, ಆಟದ ಫಲಿತಾಂಶದಂತೆ ತಮ್ಮ ಕತೆಯನ್ನು ನಿಗೂಢವಾಗಿ ಇಡುವಾಸೆ. `ಸಿನಿಮಾ ಮಾಡೋದೇನೋ ಸುಲಭ. ಅದನ್ನು ಬಿಡುಗಡೆ ಮಾಡುವುದೇ ಕಷ್ಟ. ಆದರೆ ತಮ್ಮ ಸಿನಿಮಾದ ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ವಿತರಣೆ ಹಕ್ಕುಗಳನ್ನು ಈಗಾಗಲೇ ಒಬ್ಬರು ಖರೀದಿಸಿದ್ದಾರೆ. ಅದರಿಂದ ಸಿನಿಮಾ ಗೆದ್ದೇ ಗೆಲ್ಲುವ ಭರವಸೆ ಸಿಕ್ಕಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಿರುತೆರೆ ನಟ ವಿಶ್ವಾಸ್ ಭಾರದ್ವಾಜ್ `ದತ್ತ, `ತಂಗಿಗಾಗಿ~, `ಓ ಪ್ರಿಯತಮ~, `ಮದನ~, `ವರ್ಷ~, `ಗಿರಿ~ ಚಿತ್ರಗಳಲ್ಲಿ ನಟಿಸಿದ್ದವರು. `ದೇವಿ ಬಾರಮ್ಮ~ ಚಿತ್ರದ ನಾಯಕನಾಗಿದ್ದವರು. ಇದೀಗ ನಾಯಕರಾಗಿ ಮತ್ತೊಮ್ಮೆ ಬಣ್ಣ ಹಚ್ಚುತ್ತಿದ್ದಾರೆ.

`ಒಳ್ಳೆಯ ಚಿತ್ರ ಮಾಡ್ತಿದ್ದೀನಿ. ತಂಡ ಚೆನ್ನಾಗಿದೆ. ಗೆಲ್ಲುವ ಛಲ ಇದೆ. ಬಜೆಟ್ ಯೋಚಿಸದೇ ನಿರ್ಮಾಪಕರು ಹಣ ನೀಡುತ್ತಿದ್ದಾರೆ. ಪಾತ್ರಕ್ಕೆ ನ್ಯಾಯ ಸಲ್ಲಿಸುವೆ. ಈ ಚಿತ್ರದ ವಿಶಿಷ್ಟ ಪಾತ್ರಕ್ಕೆ ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವೆ~ ಎಂದು ಸಸ್ಪೆನ್ಸ್ ಕಾಯ್ದುಕೊಂಡರು.

ನಾಯಕಿ ಗಮ್ಯಾ ಈಗಾಗಲೇ ಸೆಂಟ್ರಲ್ ಜೈಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವವರು. ರೂಪದರ್ಶಿಯಾಗಿದ್ದ ತಮಗೆ ಅವಕಾಶಗಳು ಸಿಗುತ್ತಿರುವುದರಿಂದ ನಟನೆಯಲ್ಲೂ ಒಂದು ಕೈ ನೋಡುವಾ ಎಂದು ಬಂದಿರುವೆ ಎಂದ ಅವರಿಗೆ, `ಪಗಡೆ~ಯಲ್ಲಿ ದಾಳವಾಗಿದ್ದಕ್ಕೆ ಖುಷಿಯಾಗಿದೆ.

ಕರ್ನಾಟಕ ಮತ್ತು ಗುಜರಾತ್‌ನಲ್ಲಿ ಏಕಕಾಲದಲ್ಲಿ ನಡೆದ ಸಮಕಾಲೀನ ಸಮಸ್ಯೆಯೊಂದರ ವರದಿ ಇಟ್ಟುಕೊಂಡು ಕತೆಯನ್ನು ರೂಪಿಸಿರುವುದಾಗಿ ಕತೆ ಬರೆದಿರುವ ಹರ್ಷವರ್ಧನ್ ಹೇಳಿದರು. 2009ರ ಆಗಸ್ಟ್‌ನಲ್ಲಿ `ಇಂಡಿಯಾ ಟುಡೇ~ ಪತ್ರಿಕೆಯಲ್ಲಿ ಪ್ರಕಟವಾದ ಕತೆಯನ್ನು ಇಂದಿನ ದಿನಮಾನಕ್ಕೆ ಬದಲಾಯಿಸಿಕೊಳ್ಳಲಾಗಿದೆ. ಅದರಲ್ಲಿ ನಾಯಕ ವಿಶ್ವಾಸ್ ಅವರ ನೆರವೂ ಇದೆ ಎಂದರು.
 
ಹರ್ಷವರ್ಧನ ಅವರು ಕೊಟ್ಟ ಕತೆಗೆ ಚೇಸ್, ಫೈಟ್, ಕಾಮಿಡಿ, ಥ್ರಿಲ್, ಲವ್, ಸೇರಿಸಿ ಚಿತ್ರಕತೆ ಹೆಣೆದು ಅದಕ್ಕೆ ಸಂಭಾಷಣೆಯನ್ನು ಬರೆದಿರುವವರು ಕ್ರಿಶ್ ಜೋಶಿ. `ಇದು ಮಾಸ್ ಜನರಿಗೆ ಇಷ್ಟವಾಗುವ ಸಿನಿಮಾ. ನಿರೂಪಣೆ ಆಸಕ್ತಿಕರವಾಗಿದೆ. ಫ್ಲ್ಯಾಶ್‌ಬ್ಯಾಕ್, ಇಂಟರ್‌ಕಟ್ಸ್ ಇದೆ. ಹಾಗೆಂದು ಎಲ್ಲಿಯೂ ಗೊಂದಲ ಕಾಡುವುದಿಲ್ಲ. ಇದನ್ನು ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು~ ಎಂದರು.

ಹಿರಿಯ ಛಾಯಾಗ್ರಾಹಕ ಗೌರಿಶಂಕರ್ ಅವರ ಜೊತೆ ಕೆಲಸ ಮಾಡಿರುವ ಗೌರಿ ವೆಂಕಟೇಶ್ ಈ ಚಿತ್ರಕ್ಕೆ ಕ್ಯಾಮೆರಾ ಕೆಲಸ ಮಾಡುವ ಮೂಲಕ ತಮ್ಮ 50ನೇ ಚಿತ್ರ ಪೂರ್ಣಗೊಳಿಸಲಿದ್ದಾರೆ. ಲೈಟ್‌ಮ್ಯಾನ್ ಆಗಿ ಬಂದು ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿದ್ದಾಗಿ ಹೇಳಿಕೊಂಡ ಅವರು ಹೆಚ್ಚು ಮಾತನಾಡಲು ಸಂಕೋಚಪಟ್ಟರು.

`ಸಿನಿಮಾಗಳು ಮತ್ತು ಕಲಾವಿದರ ಬಗ್ಗೆ ಅಭಿಮಾನ ಇದ್ದ ಕಾರಣ ಸಿನಿಮಾ ನಿರ್ಮಿಸುವ ಕೆಲಸಕ್ಕೆ ಮುಂದಾದೆ~ ಎಂದರು ನಿರ್ಮಾಪಕ ಎಚ್.ವಿ.ಅಣ್ಣಪ್ಪ. ಅವರು ಮಂಚನಾಯ್ಕನಹಳ್ಳಿ ಪಂಚಾಯ್ತಿ ಉಪಾಧ್ಯಕ್ಷರು. ಹಿರಿಯ ನಟ ಶ್ರೀನಿವಾಸ್ ಪ್ರಭು, ಸಂಗೀತ ನಿರ್ದೇಶಕ ಸಾಗರ್ ಭೂಷಣ್ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT