ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಟ್ಟುಸಿರು ಬಿಟ್ಟ ದೋನಿ ಪಡೆ

ಕ್ರಿಕೆಟ್‌: ಟೆಸ್ಟ್‌ ಡ್ರಾ, ದಕ್ಷಿಣ ಆಫ್ರಿಕಾ ಜಯದ ಕನಸು ಭಗ್ನ
Last Updated 23 ಡಿಸೆಂಬರ್ 2013, 10:29 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌:  ಭಾರತದ ಕ್ರಿಕೆಟ್‌ ಪ್ರೇಮಿಗಳ ಮೊಗದ ಮೇಲೆ ಮೂಡಿದ್ದ ಆತಂಕ ದೂರ ಮಾಡಿದ್ದು ಮೊಹಮ್ಮದ್‌ ಶಮಿ. ದಕ್ಷಿಣ ಆಫ್ರಿಕಾ ತಂಡಕ್ಕೆ ಕೊನೆಯ ಓವರ್‌ನಲ್ಲಿ ಗೆಲು­ವಿಗೆ ಅಗತ್ಯವಿದ್ದ 16 ರನ್‌ ನೀಡದೆ  ಶಮಿ ‘ಹೀರೋ’ ಆಗಿ ಮೆರೆದರು. ಇದರಿಂದ ಮೊದಲ ಟೆಸ್ಟ್‌ ಪಂದ್ಯ ರೋಚಕ ಡ್ರಾದಲ್ಲಿ  ಅಂತ್ಯಕಂಡಿತು.

ಶನಿವಾರ ಎರಡನೇ ಇನಿಂಗ್ಸ್‌ನಲ್ಲಿ ಆತಿ­ಥೇಯ ತಂಡದ ಎರಡು ವಿಕೆಟ್‌­ಗಳನ್ನು ಉರುಳಿಸಿದ್ದ ಮಹೇಂದ್ರ ಸಿಂಗ್‌ ದೋನಿ ಬಳಗ ಈ ಟೆಸ್ಟ್‌ನಲ್ಲಿ ಗೆಲುವು ಕಾಣುವ ಆಸೆ ಹೊಂದಿತ್ತು. ಆದರೆ, ಭಾನುವಾರ ಡ್ರಾ ಸಾಧಿಸಿದರೆ ಸಾಕು ಎನ್ನುವಂಥ ಸ್ಥಿತಿ ಎದುರಾಯಿತು.

ಫಾಫ್‌ ಡು ಪ್ಲೇಸಿಸ್‌ (134) ಮತ್ತು ಎ.ಬಿ. ಡಿವಿಲಿಯರ್ಸ್‌್ (103) ಶತಕ ಗಳಿಸಿ ಪ್ರವಾಸಿ ತಂಡದ ಕೈಯಿಂದ ಪಂದ್ಯ ಕಿತ್ತುಕೊಳ್ಳುವ ಪ್ರಯತ್ನ ನಡೆಸಿದ­ರಾದರೂ,  ಭಾರತದ ವೇಗಿಗಳು ಇದಕ್ಕೆ ಅವಕಾಶ ನೀಡಲಿಲ್ಲ.

ಆತಿಥೇಯ ತಂಡ ಗೆಲುವು ಪಡೆ­ಯಲು ದ್ವಿತೀಯ ಇನಿಂಗ್ಸ್‌ನಲ್ಲಿ 458 ರನ್‌ ಗಳಿಸಬೇಕಿತ್ತು. ಆದರೆ, 136 ಓವರ್‌­ಗಳಲ್ಲಿ 7 ವಿಕೆಟ್‌ ಕಳೆದು­ಕೊಂಡು 450 ರನ್‌ ಕಲೆ ಹಾಕಿ ಗೆಲುವಿ­ನಂಚಿನಲ್ಲಿ ಎಡ­ವಿತು. ಇದರಿಂದ ಭಾರತ ನಿಟ್ಟುಸಿರು ಬಿಟ್ಟಿತು.135ನೇ ಓವರ್‌ ಬೌಲ್‌ ಮಾಡಿದ ವೇಗಿ ಜಹೀರ್‌ ಖಾನ್‌ ಒಂದೂ ರನ್‌ ನೀಡದ ಕಾರಣ ಪಂದ್ಯ ಡ್ರಾ ಹಾದಿ ಹಿಡಿಯಿತು.

ಹರಿಣಗಳ ನಾಡಿನಲ್ಲಿ ಭಾರತ ತಂಡ ಇದುವರೆಗೆ ಒಮ್ಮೆಯೂ ಟೆಸ್ಟ್‌್ ಸರಣಿ ಜಯಿಸಿಲ್ಲ. 21 ವರ್ಷಗಳ ಅವಧಿ­ಯಲ್ಲಿ ಗೆದ್ದಿರುವುದು ಎರಡು ಟೆಸ್ಟ್‌ ಪಂದ್ಯಗಳನ್ನು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT