ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಟ್ಟೂರು: ದತ್ತಿ ಉಪನ್ಯಾಸ ಕಾರ್ಯಕ್ರಮ.

Last Updated 15 ಫೆಬ್ರುವರಿ 2011, 9:10 IST
ಅಕ್ಷರ ಗಾತ್ರ

ಹೊಸನಗರ: ಸ್ವಾತಂತ್ರ್ಯದ ತಪ್ಪು ಗ್ರಹಿಕೆ, ವಿದೇಶಿ ಸಂಸ್ಕೃತಿಗೆ ತಮ್ಮನ್ನು ಮಾರಿಕೊಂಡ ವಿದ್ಯಾವಂತ ಸ್ತ್ರೀಯರ ಚಿತ್ರಣವೇ ಭೈರಪ್ಪ ಅವರ ‘ಕವಲು’ ಕಾದಂಬರಿಯ ಹೂರಣ’ ಎಂದು ಸಾಹಿತಿ ಕೆ.ಎನ್. ಅಂಜಲಿ ಅಶ್ವಿನ್‌ಕುಮಾರ್ ಅಭಿಪ್ರಾಯಪಟ್ಟರು. ಈಚೆಗೆ ತಾಲ್ಲೂಕಿನ ನಿಟ್ಟೂರಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾರ್ಗಡಿ ಮಹಾಬಲ ಐತಾಳ್ ನೆನಪಿನ ದತ್ತಿನಿಧಿ ಕಾರ್ಯಕ್ರಮದ ಸರಮಾಲಿಕೆಯಲ್ಲಿ ಉಪನ್ಯಾಸ ನೀಡಿದರು.

ಐಟಿ-ಬಿಟಿ ಯುವತಿಯರು ಸಮಾನತೆಯ ಗುಂಗಿನಲ್ಲಿ ತಮಗೆ ಅರಿವಿಲ್ಲದೇ ಮತ್ತೆ ಪುರುಷ ಪ್ರಧಾನ ಸಮಾಜ ವ್ಯವಸ್ಥೆಗೆ ಜಾರುತ್ತಿರುದನ್ನು ಸಾಹಿತಿ ಎಸ್.ಎಲ್. ಭೈರಪ್ಪ ಬಿಂಬಿಸಿದ್ದಾರೆ ಎಂದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಶಾಂತಾರಾಮ ಪ್ರಭು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ದತ್ತಿನಿಧಿ ದಾನಿ ಉಪನ್ಯಾಸಕ ಕಾರಣಗಿರಿ ಗಣೇಶ್ ಐತಾಳ್, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಹನುಮಂತಪ್ಪ, ವೇದಿಕೆಯಲ್ಲಿ ಹಾಜರಿದ್ದರು. ಪೂರ್ಣಿಮಾ ಪ್ರಾರ್ಥಿಸಿದರು. ಅಂಬರೀಷ್ ಭಾರದ್ವಾಜ್  ಕಾರ್ಯಕ್ರಮ ನಿರೂಪಿಸಿದರು. ಕಸಾಪ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಪ್ರಕಾಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT