ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಫ್ಟಿ ಕುಸಿತ-ಸಿಬಿಐ ತನಿಖೆಗೆ ಆಗ್ರಹ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಶುಕ್ರವಾರ ಬೆಳಗಿನ ವಹಿವಾಟಿನಲ್ಲಿ ದಿಢೀರನೆ 900 ಅಂಶಗಳಷ್ಟು ಕುಸಿದ ಕುರಿತು `ಸಿಬಿಐ~ ತನಿಖೆ ನಡೆಸಬೇಕು ಎಂದು `ಎನ್‌ಸಿಪಿ~ ಆಗ್ರಹಿಸಿದೆ. 

ಎಂಕೆ ಗ್ಲೋಬಲ್ಸ್ ಎನ್ನುವ ಷೇರು ದಲ್ಲಾಳಿ ಸಂಸ್ಥೆ ರೂ650 ಕೋಟಿ ಮೊತ್ತದ ದೋಷಪೂರಿತ ವಹಿವಾಟು ದಾಖಲಿಸಿದ ಕಾರಣ `ನಿಫ್ಟಿ~ ದಿಢೀರನೆ ಕುಸಿದಿತ್ತು. ಇದರಿಂದ 15 ನಿಮಿಷಗಳಷ್ಟು ಕಾಲ ವಹಿವಾಟು ಸ್ಥಗಿತಗೊಂಡಿತ್ತು. ಹೂಡಿಕೆದಾರರ 10 ಲಕ್ಷ ಕೋಟಿಗಳಷ್ಟು ಸಂಪತ್ತು ಕ್ಷಣಾರ್ಧದಲ್ಲಿ ಕರಗಿ ಹೋಗಿತ್ತು.  ಈ ಅಕ್ರಮ ವಹಿವಾಟಿನ ಹಿಂದಿರುವ ರಹಸ್ಯ ಪತ್ತೆ ಹಚ್ಚಲು `ಸಿಬಿಐ~ ತನಿಖೆ ನಡೆಸಬೇಕು ಎಂದು `ಎನ್‌ಸಿಪಿ~ ವಕ್ತಾರ ನವಾಬ್ ಮಲಿಕ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT