ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಪಾಲಿಸದ ಸರ್ಕಾರಿ ಕಂಪೆನಿಗಳ ವಿರುದ್ಧ ಕಠಿಣ ಕ್ರಮ

Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಒಟ್ಟಾರೆ ಷೇರು ಪಾಲಿನಲ್ಲಿ  ಶೇ 10ರಷ್ಟು ಕನಿಷ್ಠ ಸಾರ್ವಜನಿಕ ಪಾಲು ಹೊಂದದ ಸರ್ಕಾರಿ ಸ್ವಾಮ್ಯದ ಕಂಪೆನಿಗಳು(ಪಿಎಸ್‌ಯು) ಗಂಭೀರ ಕ್ರಮ ಎದುರಿಸಬೇಕಾಗುತ್ತದೆ ಎಂದು `ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ'(ಸೆಬಿ) ಎಚ್ಚರಿಕೆ  ನೀಡಿದೆ.

ಶೇ 10ರಷ್ಟು ಸಾರ್ವಜನಿಕ ಭಾಗಿತ್ವ ಹೊಂದಲು ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗೆ ನೀಡಿರುವ ಗಡುವು ಆಗಸ್ಟ್ 8ಕ್ಕೆ ಮುಗಿಯಲಿದೆ. ಹಲವು ಕಂಪೆನಿಗಳು ಇನ್ನೂ ಈ ಗುರಿ ಈಡೇರಿಸುವಂತಹ ಪ್ರಯತ್ನವನ್ನೇ ಮಾಡಿಲ್ಲ ಎಂದು `ಸೆಬಿ' ಅಸಮಾಧಾನ ವ್ಯಕ್ತಪಡಿಸಿದೆ.

ಸರ್ಕಾರಿ ಸ್ವಾಮ್ಯದ 10 ಕಂಪೆನಿಗಳು ಈ ಗುರಿ ತಲುಪಲು ್ಙ3 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಬೇಕಿದೆ. ಆದರೆ, ನಷ್ಟದಲ್ಲಿರುವ `ಪಿಎಸ್‌ಯು'ಗಳಿಗೆ ಈ ಮಿತಿಯಲ್ಲಿ ಸಡಿಲಿಕೆ ನೀಡಬೇಕು ಎಂದೂ ಸರ್ಕಾರ `ಸೆಬಿ'ಗೆ  ಕೋರಿದೆ.

ಖಾಸಗಿ ವಲಯದ ಕಂಪೆನಿಗಳು ಶೇ 25ರಷ್ಟು ಕನಿಷ್ಠ ಸಾರ್ವಜನಿಕ ಪಾಲು ಹೊಂದಲು ನಿಗದಿಪಡಿಸಿದ್ದ ಗಡುವು ಜೂನ್ 3ಕ್ಕೆ ಕೊನೆಗೊಂಡಿತ್ತು. ನಿಯಮ ಪಾಲಿಸದ 105 ಕಂಪೆನಿಗಳ ಪ್ರವರ್ತಕರ ಮೇಲೆ `ಸೆಬಿ' ಕಠಿಣ ಕ್ರಮ ಕೈಗೊಂಡಿದೆ.

ಸಾರ್ವಜನಿಕ ಭಾಗಿತ್ವಕ್ಕೆ ಸಂಬಂಧಿಸಿದಂತೆ `ಪಿಎಸ್‌ಯು'ಗಳು ನಿಗದಿಪಡಿಸಿರುವ ಗುರಿ ಸಾಧಿಸಲಿವೆ ಎಂದು ಸರ್ಕಾರವೇ ಪತ್ರದ ಮೂಲಕ ಭರವಸೆ  ನೀಡಿದೆ ಎಂಬುದನ್ನು ಇದೇ ಸಂದರ್ಭದಲ್ಲಿ `ಸೆಬಿ' ಅಧ್ಯಕ್ಷ ಯು.ಕೆ.ಸಿನ್ಹಾ ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT