ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಕ್ಷೇಪಣಾ ಪತ್ರ ವಾಪಸ್‌ಗೆ ಮನವಿ

ಎತ್ತಿನಹೊಳೆ ಯೋಜನೆ
Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಂಗಳೂರು: ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯು ಎತ್ತಿನಹೊಳೆ ಯೋಜನೆಗೆ ನೀಡಿರುವ ನಿರಾಕ್ಷೇಪಣಾ (ಎನ್‌ಒಸಿ) ಪತ್ರ  ವಾಪಸ್‌ ಪಡೆಯಲು ಕೇಂದ್ರಕ್ಕೆ ಮನವಿ ಮಾಡಿ  ಕೊಳ್ಳಲಾಗಿದೆ.

ಪರಿಸರ ಪರಿಣಾಮ ಅಧ್ಯಯನ (ಇಐಎ)ವಾಗಲೀ, ತಜ್ಞ ಪರಿಶೀಲನಾ ಸಮಿತಿಯ (ಇಎಸಿ) ವರದಿಯಾಗಲೀ ಅಗತ್ಯವಿಲ್ಲ ಎಂದು ನೀಡಿರುವ ಆದೇಶ ದೋಷಪೂರಿತ. ಆದ್ದರಿಂದ ಕರ್ನಾಟಕ ಸರ್ಕಾರಕ್ಕೆ ನೀಡಿರುವ ನಿರಾಕ್ಷೇಪಣಾ (ಎನ್‌ಒಸಿ) ಪತ್ರವನ್ನು ವಾಪಸ್‌ ಪಡೆ ಯಬೇಕು ಎಂದು ಪುಣೆಯ ‘ಅಣೆಕಟ್ಟು, ನದಿ ಮತ್ತು ಜನರನ್ನು ಸಂಪರ್ಕಿಸುವ ದಕ್ಷಿಣ ಏಷ್ಯಾ ವಲಯದ ಸಂಘ ಟನೆ’ಯುಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ರಾಜ್ಯ ಸಚಿವೆ ಜಯಂತಿ ನಟರಾಜನ್‌ ಅವರಿಗೆ ಪತ್ರ ಬರೆದಿದೆ.

ಎತ್ತಿನ ಹೊಳೆ ಯೋಜನೆಯು ಕುಡಿ­ಯುವ ನೀರಿನ ಉದ್ದೇಶ ಹೊಂದಿರು­ವುದರಿಂದ ಪರಿಸರ ಪರಿಣಾಮ ಅಧ್ಯಯನವಾಗಲೀ, ತಜ್ಞ ಪರಿಶೀಲನಾ ವರದಿಯಾಗಲೀ ಬೇಕಿಲ್ಲ ಎಂದು ಕೇಂದ್ರದ ಪರಿಸರ ಮತ್ತು ಅರಣ್ಯ ಇಲಾಖೆ ರಾಜ್ಯ ಸರ್ಕಾರಕ್ಕೆ ನಿರಾ ಕ್ಷೇಪಣಾ ಪತ್ರ ನೀಡಿತ್ತು. ಆದರೆ, ಸಂಘ ಟನೆಯು ಎತ್ತಿನ ಹೊಳೆ ಯೋಜನೆಯ ಎಲ್ಲ ಪ್ರದೇಶಗಳಿಗೆ ಭೇಟಿ ನೀಡಿ  ನೀರಾವರಿ ನಿಗಮ ತಯಾರಿಸಿದ ವರದಿ ಗಮನಿಸಿ ಈ ಯೋಜನೆಗೆ ಇಐಎ ಮತ್ತು ಇಎಸಿ ವರದಿ ಅಗತ್ಯ ಎಂದು ಹೇಳಿದೆ.

ಅಲ್ಲದೆ ನೀರಾವರಿ ಕ್ಷೇತ್ರದಡಿ ಬರುವ ನಿಯಮಗಳು, ವಿದ್ಯುತ್‌ ಉತ್ಪಾದನಾ ಉದ್ದೇಶಕ್ಕೆ ಬೇಕಾಗುವ ಅನುಮತಿ ಹಾಗೂ ಸಾಮಾಜಿಕ, ಜೈವಿಕ ಪರಿಣಾ ಮಗಳನ್ನು ಉಲ್ಲೇಖಿಸಿ ಪತ್ರ ವನ್ನು ಸಿದ್ಧಪಡಿಸಿದ್ದು ಈ ಯೋಜನೆಗೆ ಪರಿಸರ ಪರಿಣಾ ಮ ಅಧ್ಯಯನ ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.

ನೀರಾವರಿ ಅಂಶ: ನೀರಾವರಿ ನಿಗಮ ತಯಾರಿಸಿದ ಯೋಜನಾ ವರದಿಯ ಪ್ರಕಾರ ಎತ್ತಿನ ಹೊಳೆ ಯೋಜನೆ ಕೋಲಾರ ಮತ್ತು ಚಿಕ್ಕಬಳ್ಳಾಪುರದ ನೀರಾವರಿ ಕೆರೆಗಳು, ಜಿಲ್ಲಾ ಪರಿಷತ್‌ನ 337 ಸಣ್ಣ ನೀರಾವರಿ ಕೆರೆಗಳಿಗೆ  ನೀರು ಣಿಸುವ ಉದ್ದೇಶ ಹೊಂದಿದೆ. ಅಂದರೆ ಈ ಸಣ್ಣ ನೀರಾವರಿ ಕೆರೆಗಳ ಒಟ್ಟು ವಿಸ್ತಾರ 29,182 ಹೆಕ್ಟೇರ್‌. ಇದು 10 ಸಾವಿರ ಹೆಕ್ಟೇರ್‌ ಪ್ರದೇಶಕ್ಕಿಂತ ಹೆಚ್ಚಾಗಿ ರುವುದರಿಂದ ಇಐಎ 2006ನ್ನು ಪಡೆಯುವುದು ಅನಿವಾ ರ್ಯವಾಗಿ­ರುತ್ತದೆ.

ಜಲ ವಿದ್ಯುತ್‌ ಉತ್ಪಾದನೆ ಬಗ್ಗೆ:  ಯೋಜನೆಯ ಮೂಲಕ 125ರಿಂದ 150 ಮೆಗಾವಾಟ್‌ ವಿದ್ಯುತ್‌ ಉತ್ಪಾ  ದನೆಯ ಉದ್ದೇಶವಿದೆ. ಜಲ­ವಿದ್ಯುತ್‌ ಉತ್ಪಾದನಾ ಪ್ರಮಾಣ 25 ಮೆಗಾ­ವಾಟ್‌ಗಿಂತ ಅಧಿಕವಾಗಿದ್ದಲ್ಲಿ ಪರಿಸರ ಪರಿಣಾಮ ಕಡ್ಡಾಯ ಎಂಬ ನಿಯಮ ಈಗಾಗಲೇ ಜಾರಿಯಲ್ಲಿ­ರು­ವುದರಿಂದ 125 ಮೆಗಾವಾಟ್‌ ವಿದ್ಯುತ್‌ ಉತ್ಪಾ ದನೆಗೆ ಇಐಎ–2006 ಕಡ್ಡಾಯ ವಾಗಿದೆ.

ಸಾಮಾಜಿಕ ಮತ್ತು ಜೈವಿಕ ಪರಿ­ಣಾಮ­ಗಳ ವಿಭಾಗದಲ್ಲಿ ಸಂಘಟನೆಯು ಐದು ಆಕ್ಷೇಪಗಳನ್ನು ಎತ್ತಿದ್ದು ಈ ಕ್ಷೇತ್ರದಲ್ಲಿಯೂ ಇಐಎ ಮತ್ತು ಇಎಸಿ ಅತ್ಯಗತ್ಯವಾಗಿದೆ ಎಂದು ವಿವರಿಸಿದೆ.

ಕುಡಿಯುವ ನೀರು ಕೋಲಾರ ತಲುಪಲಿದೆಯೇ?
2401 ಟಿಎಂಸಿ ನೀರು ಹರಿಸುವ ಉದ್ದೇಶ­ವಿದ್ದರೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೇವಲ 2.81 ಟಿಎಂಸಿ ನೀರನ್ನು ಅಂದರೆ ಶೇ 10ರಷ್ಟು ನೀರನ್ನು ನೀಡಲಾಗು­ವುದು. ಉಳಿದ ಎಲ್ಲ ನೀರನ್ನು ನೀರಾವರಿ, ಕೆರೆ ತುಂಬಿಸಲು, ಕೈಗಾರಿಕೆಗೆ ಬಳಸಲಾಗು­ವುದು ಎಂಬ ಆಕ್ಷೇಪಗಳು ಪತ್ರದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT