ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲ ಗ್ರಾಮಕ್ಕೂ ಸೌಕರ್ಯಗಳ ಕೊರತೆ

Last Updated 23 ಆಗಸ್ಟ್ 2012, 4:35 IST
ಅಕ್ಷರ ಗಾತ್ರ

ಸಂಡೂರು: ಇಲ್ಲಿನ ಭುಜಂಗನಗರ ಗ್ರಾಮ ಪಂಚಾಯಿತಿಗೆ ಕೇಂದ್ರ ಸರ್ಕಾರ ನೀಡುವ 2011ನೇ ಸಾಲಿನ `ನಿರ್ಮಲ ಗ್ರಾಮ ಪುರಸ್ಕಾರ~  ಪ್ರಶಸ್ತಿ ಸಿಕ್ಕಿದೆಯಾದರೂ, ಜನರು  ಕೆಲ ಮೂಲ ಸೌಕರ‌್ಯಗಳ ಕೊರತೆಯಲ್ಲಿದ್ದಾರೆ.

ಭುಜಂಗನಗರ ಗ್ರಾಮದ ಜನಸಂಖ್ಯೆ ಅಂದಾಜು ಎಂಟು ಸಾವಿರ ಮೀರುತ್ತಿದ್ದು, ಲಿಂಗಾಯಿತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಆಗಾಗ ಕಾಣಿಸಿಕೊಳ್ಳುತ್ತಿದ್ದು ಗ್ರಾಮ ಪಂಚಾಯಿತಿಯವರ ಲೆಕ್ಕದಲ್ಲಿ 11 ಪಂಪ್‌ಸೆಟ್‌ಗಳು, 1 ಕಿರಿಯ ಮಹಿಳಾ ಆರೋಗ್ಯ ಕೇಂದ್ರ, 1 ಸರ್ಕಾರಿ ಶಾಲೆ ಮತ್ತು 2 ಖಾಸಗಿ ಶಾಲೆಗಳಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಒಂದು ರೈತ ಸೇವಾ ಸಹಕಾರ ಕೇಂದ್ರ, 4 ಅಂಗನವಾಡಿ ಕೇಂದ್ರ, 1 ಪಶು ಚಿಕಿತ್ಸಾಲಯ ಕಾರ್ಯ ನಿರ್ವಹಿಸುತ್ತಿವೆ.

ಗ್ರಾಮದ ಸುತ್ತಮುತ್ತ ನಡೆಯತ್ತಿದ್ದ  ಗಣಿಗಾರಿಕೆಯಿಂದ ದೂಳು, ಶಬ್ದ ಮಾಲಿನ್ಯದ  ತೊಂದರೆ ಅನುಭವಿಸು ತ್ತಿದ್ದ ಜಾನುವಾರು, ರೈತಾಪಿಗಳು ಕಳೆದ ಎರಡು ವರ್ಷದಿಂದ ಮುಕ್ತಿ ಪಡೆದಿದ್ದಾರೆ. ಡಿಗ್ಗಿಂಗ್ (ಹೊಲದಲ್ಲಿನ ಕಬ್ಬಿಣದ ಕಲ್ಲು, ಮಣ್ಣು ಹೆಕ್ಕುವ)ಗೆ ಬಳಕೆಯಾಗುತ್ತಿದ್ದ ನೂರಾರು ಎಕರೆ ಪ್ರದೇಶದ ಭೂಮಿ ಈಗ ಕೃಷಿಗೆ ಬಳಕೆಯಾಗುತ್ತಿದೆ. ಈ ಭಾಗದಲ್ಲಿ ಬೆಳೆಯುವ ಈರುಳ್ಳಿಗೆ ರಾಜ್ಯ ಮಟ್ಟದಲ್ಲಿ ಬೇಡಿಕೆಯೂ ಇದೆ.

2010ರಲ್ಲಿ ಅತಿವೃಷ್ಟಿಯಿಂದ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್‌ಎಂಡಿಸಿ)ಯವರು ನಿರ್ಮಿಸಿದ್ದ ಚೆಕ್ ಡ್ಯಾಂ ಒಡೆದು ಸಾವಿರಾರು ಎಕರೆ ಪ್ರದೇಶದ ಬೆಳೆಹಾನಿಯಾಗಿ ರೈತರು ಕಣ್ಣೀರು ಹಾಕಿದ್ದರು. ಈವರೆಗೆ ಸಿಗಬೇಕಾದ ನ್ಯಾಯ ಎನ್‌ಎಂಡಿಸಿ ಯಿಂದ ಸಿಕ್ಕಿಲ್ಲ ಎನ್ನುತ್ತಾರೆ ರೈತರು.

ಜಿಂದಾಲ್ ಕಂಪೆನಿಗೆ ಅದಿರು ಸಾಗಿಸಲು ಅನುಕೂಲವಾಗುವಂತೆ ರೈಲುಹಳಿ ಕಾಮಗಾರಿಗೆ ಫಲವತ್ತಾದ ಭೂಮಿ ಹೋಗಿದೆ, ಕಂಪೆನಿ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿದೆ  ಎನ್ನುವ ಅಭಿಪ್ರಾಯ ಕೆಲ ರೈತರದ್ದಾಗಿದೆ.
ಗ್ರಾಮದ ಇನ್ನೂ ಬಹುತೇಕರು ಬಯಲು ಮಲ ವಿಸರ್ಜನೆ ಮುಂದುವರಿ ಸಿದ್ದಾರೆ, ಮಹಿಳೆಯರಿಗೆ ಅನುಕೂಲ ವಾಗಲು ಹೆಚ್ಚು ಸಾಮೂಹಿಕ ಶೌಚಾಲಯಗಳ ನಿರ್ಮಾಣವಾಗಬೇಕು, ಒಳಚರಂಡಿ ವ್ಯವಸ್ಥೆಯನ್ನು ಉನ್ನತೀ ಕರಿಸಬೇಕು ಎಂಬ ಅಭಿಪ್ರಾಯ ಯುವ ರೈತ ಮುಖಂಡ ಜಗದೀಶ್ ಅವರದ್ದು.

ಇ-ಟೆಂಡರ್ ಅದಿರು ಸಾಗಿಸುವ ಗಣಿ ಲಾರಿಗಳ ಸಂಚಾರದಿಂದ ಹದಗೆಟ್ಟಿದೆ. ಶಾಲಾ ಮಕ್ಕಳು ಸಾರ್ವಜನಿಕರು ಪಡಬಾರದ ಕಷ್ಟಪಡುತ್ತಿದ್ದಾರೆ. ಎನ್‌ಎಂಡಿಸಿ ಯಿಂದ ಪ್ರತಿದಿನ ಸಾವಿರಾರು ಲಾರಿಗಳು  ಜಿಂದಾಲ್‌ಗೆ  ಸಂಚರಿಸು ತ್ತಿವೆ, `ರೋಡ್ ಕೆಟ್ಟಾತಿ  ರಿಪೇರಿನ ಮಾಡ್ವಲ್ರು ..... ಎಂಬ ಆತಂಕದ ನುಡಿಗಳು  ಕುಮಾರಸ್ವಾಮಿ, ವೀರೇಶ್ ಕುಮಾರ್ ಅವರದ್ದಾಗಿವೆ.

ನಿರ್ಮಲ ಗ್ರಾಮ ಪುರಸ್ಕಾರ ಸಿಕ್ಕಿದ್ದು ಕೆಲಸ ಮಾಡಲು ಸ್ಫೂರ್ತಿ ನೀಡಿದೆ ಎನ್ನುತ್ತಾರೆ ಗ್ರಾ.ಪಂ .ಅಧ್ಯಕ್ಷ ತಾಯಪ್ಪ ಎಚ್. ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಗಳು ಹೆಚ್ಚಿನ ಅನುದಾನವನ್ನು ತೆಗೆದಿರಿ ಸುವುದು ಒಳಿತು.

ಕುಟುಂಬವೊಂದು ಶೌಚಾಲಯ ನಿರ್ಮಿಸಿಕೊಂಡರೆ ಗ್ರಾ.ಪಂ. ವತಿಯಿಂದ 10ಸಾವಿರದ ಇನ್ನೂರು ರೂ.ಗಳನ್ನು ನೀಡುವ ಯೋಜನೆ ಇದೆ, ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಕೇಂದ್ರ ಸರ್ಕಾರ 5ಲಕ್ಷ ಹಣವನ್ನು ಗ್ರಾ.ಪಂ.ಗೆ ನೀಡಲಿದೆ ಎಂದು ಹಾಗೂ ತಾ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ್ ಪ್ರಸಾದ್ `ಪ್ರಜಾವಾಣಿ~ ಗೆ ತಿಳಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT