ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಲಕ್ಷ್ಯಕ್ಕೆ ಒಳಗಾದ ರುದ್ರಭೂಮಿಗಳು

Last Updated 30 ಸೆಪ್ಟೆಂಬರ್ 2013, 8:07 IST
ಅಕ್ಷರ ಗಾತ್ರ

ಬಾಗಲಕೋಟೆ: ನಗರ  ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಇರುವ ರುದ್ರಭೂಮಿಗಳ ಅಭಿವೃದ್ಧಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕುಡಿಯುವ ನೀರು ಹಾಗೂ ವಿದ್ಯುತ್ ಬೆಳಕಿನ ಕೊರತೆ ಎಲ್ಲ ಕಡೆ ಎದ್ದು ಕಾಣುತ್ತಿದೆ.

ನವನಗರದ ಐಟಿಐ ಕಾಲೇಜ್ ಸಮೀಪದ ನವನಗರದ ನಿವಾಸಿಗಳಿಗೆ ಸಂಬಂಧಪಟ್ಟ ರುದ್ರಭೂಮಿಯಲ್ಲಿ ಮುಳ್ಳಿನ ಕಂಟೆಗಳು ಬೆಳೆದು ನಿಂತಿವೆ. ಅಲ್ಲದೆ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮರೀಚಿಕೆಯಾಗಿದೆ.

ರಾತ್ರಿ ವೇಳೆ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಹೋಗುವ ಜನತೆಗೆ ಬೆಳಕಿನ ವ್ಯವಸ್ಥೆ ಕೂಡ ಇಲ್ಲಿ ಸಿಗುವು­ದಿಲ್ಲ. ಅಂತ್ಯಸಂಸ್ಕಾರಕ್ಕೆ ಹೋಗುವ ರಸ್ತೆ ಕೂಡಾ ಅಭಿವೃದ್ಧಿ ಹೊಂದಿಲ್ಲ. ರಸ್ತೆಯ ಬದಿ ಮುಳ್ಳಿನ ಕಂಟೆಗಳು ಬೆಳೆದು ನಿಂತಿವೆ.

ನವನಗರದ ಐಟಿಐ ಕಾಲೇಜ್ ಹಿಂಭಾಗದಲ್ಲಿರುವ ಈ ರುದ್ರಭೂಮಿ ಸುಮಾರು 1 ಎಕರೆಗೂ ಹೆಚ್ಚು ಜಾಗ ಇದೆ. ಬೆಳಕಿನ ವ್ಯವಸ್ಥೆ ಇಲ್ಲದಿರುವು­ದರಿಂದ ಇಲ್ಲಿ ಭಯದ ವಾತಾವರಣ ಉಂಟಾಗಿದೆ.

10 ಸೆಕ್ಟರ್‌ನಲ್ಲಿರುವ ಜನತೆಗೆ ಈ ರುದ್ರಭೂಮಿ ಸಮೀಪವಾಗ­ಲಿದೆ. ನೂತನವಾಗಿ ಆಯ್ಕೆಯಾದ ನಗರಸಭೆ ಅಧ್ಯಕ್ಷರು ಈ ಬಗ್ಗೆ ಗಮನ­ಹರಿಸಿ  ಸ್ವಚ್ಛತೆಗೆ ಕ್ರಮ ಕೈಗೊಳ್ಳುವುದು ಅವಶ್ಯ­ವಿದೆ. ನಗರಸಭೆ ಮತ್ತು ಬಿಟಿಡಿಎ ಜಂಟಿಯಾಗಿ ರುದ್ರಭೂಮಿಗಳ ಸ್ವಚ್ಛತಾ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸ­ಬೇಕಾಗಿದೆ.

ನವನಗರದ ನಿರ್ಮಾಣಕ್ಕೆ ತಮ್ಮ ಭೂಮಿಯನ್ನು ತ್ಯಾಗ ಮಾಡಿದ ಮುಚಖಂಡಿ ಗ್ರಾಮಕ್ಕೆ ಇರುವ ರುದ್ರಭೂಮಿಯು ಇದರಿಂದ ಹೊರತಾ­ಗಿಲ್ಲ. ಇಲ್ಲಿಯೂ ಬೆಳಕಿನ ವ್ಯವಸ್ಥೆ ಸಿಗುವು­ದಿಲ್ಲ. ರುದ್ರಭೂಮಿ­ಯಲ್ಲಿ ಅಲ್ಪಸ್ವಲ್ಪ ಹೂವಿನ ಗಿಡಗಳನ್ನು ಹೊರತು­ಪಡಿಸಿದರೆ ಅಂತ್ಯಸಂಸ್ಕಾರಕ್ಕೆ ಬರುವ ಜನರಿಗೆ ನೆರಳಿನ ವ್ಯವಸ್ಥೆಗೆ ಬೃಹತ್ ಮರಗಳ ಸಸಿಗಳನ್ನು ಬೆಳೆಸದೇ ಇರುವುದು ಕಾಣುತ್ತದೆ.

ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಮುಚಖಂಡಿ ಗ್ರಾಮದ ರುದ್ರಭೂಮಿ ಸ್ವಚ್ಛತೆ ಹಾಗೂ ಗಿಡಗಳನ್ನು ಬೆಳೆಸುವ ಕಾಮಗಾರಿ­ಯನ್ನು ಇಲ್ಲಿಯ ಗ್ರಾಮ ಪಂಚಾಯ್ತಿ ಸದಸ್ಯರು ಕೈ ಹಾಕದೇ ಇರುವುದರಿಂದ ರುದ್ರಭೂಮಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಎಲ್ಲೋ ಒಂದು ಸ್ಥಳದಲ್ಲಿ ಸರ್ಕಾರದ ಕಾರ್ಯಕ್ರಮದಡಿ ಸಸಿಗಳನ್ನು ನೆಟ್ಟು ಬೆಳವಣಿಗೆ ಮಾಡದೇ ಪಾಳುಬಿದ್ದ ದೃಶ್ಯ ಸಾಕಷ್ಟು ಕಡೆ ಕಂಡುಬರುತ್ತದೆ.

ಆದರೆ ಇಂತಹ ಜನೋಪಯೋಗಿ ಸ್ಥಳದಲ್ಲಿ ಹತ್ತಾರು ಬೃಹತ್ ಮರಗಳನ್ನು ಬೆಳೆಸಿದರೆ ಜನರಿಗೆ ಅನುಕೂಲವಾಗ­ಲಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.

ತಾಲ್ಲೂಕು ಪಂಚಾಯ್ತಿ ಸಭಾ­ಭವನದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ, ಗ್ರಾಮೀಣ ಪ್ರದೇಶ­ದಲ್ಲಿರುವ ರುದ್ರ­ಭೂಮಿ­ಗಳ ಸ್ಥಳದಲ್ಲಿ ಜನರಿಗೆ ಅನುಕೂಲ­ವಾಗುವ ರೀತಿಯಲ್ಲಿ ಗಿಡಗಳನ್ನು ಬೆಳೆಸಬೇಕು ಎಂದು ಶಾಸಕ ಎಚ್.ವೈ. ಮೇಟಿ­ಯವರು ಅರಣ್ಯ ಇಲಾಖೆಯವರಿಗೆ ಸೂಚಿಸಿದ್ದಾರೆ.

ಎಷ್ಟರಮಟ್ಟಿಗೆ ರುದ್ರಭೂಮಿಯಲ್ಲಿ ಅರಣ್ಯ ಇಲಾಖೆ  ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮುಚಖಂಡಿ, ನವನಗರ ಅಷ್ಟೇ ಅಲ್ಲದೇ ಇನ್ನೂ ಹಲವಾರು ಗ್ರಾಮೀಣ ಪ್ರದೇಶದಲ್ಲಿ ರುದ್ರಭೂಮಿಗಳ  ಸ್ವಚ್ಛತೆ ಹಾಗೂ ಅರಣ್ಯ ಇಲಾಖೆಯಿಂದ ಗಿಡಗಳನ್ನು ಬೆಳೆಸಲು ಕಾರ್ಯಕ್ರಮ ರೂಪಿಸಲಾಗುತ್ತಿಲ್ಲ ಎಂದು ಶಂಕರ ಡಿ ತಿಳಿಸುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT