ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲುವು ಸ್ಪಷ್ಟವಾಗಲಿ

Last Updated 9 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಚಿಲ್ಲರೆ ಮಾರಾಟದಲ್ಲಿ ನೇರ ವಿದೇಶಿ ಬಂಡವಾಳ ವಿಷಯದ ಬಗೆಗೆ ಸಂಸತ್ತಿನಲ್ಲಿ ತಂತ್ರಗಾರಿಕೆ ಗೆದ್ದಿದೆ. ಎರಡು ರಾಜಕೀಯ ಪಕ್ಷಗಳ ವರ್ತನೆ ಅವುಗಳ ಸಮಗ್ರ ದೃಷ್ಟಿ ಹಾಗೂ ರಾಷ್ಟ್ರೀಯ ಮನೋಭಾವನೆಯ ಬಗೆಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಮಾಯಾವತಿಯವರು ವಿವಾದಿತ ವಿಷಯದ ಬಗೆಗೆ ಮಾತನಾಡುವುದಕ್ಕಿಂತ ಹತ್ತು ವರ್ಷದ ರಾಜಕೀಯ ಹೊಂದಾಣಿಕೆಗಳ ಬಗೆಗೇ ಹೆಚ್ಚು ಪ್ರಸ್ತಾಪಿಸಿದರು. ಮುಲಾಯಂ ವಿರೋಧಿಸಿದಂತೆ ಮಾಡಿ ಮತದಾನದಿಂದ ದೂರ ಉಳಿದರು. ಇವರಿಗೆ ಹೋಲಿಸಿದರೆ ಎಡಪಕ್ಷಗಳೇ ಸೂಕ್ತ ಮನೋಭಾವ, ನಿಲುವು ತಳೆದರೆನ್ನಬಹುದು.

ಕರ್ನಾಟಕದಲ್ಲಿ ಸದ್ಯಕ್ಕೆ ಬಿ.ಜೆ.ಪಿ. ಸರ್ಕಾರ ಇದೆ. ಹತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಎಂಬ ಮಾನದಂಡದಿಂದ ಬೆಂಗಳೂರಿನಲ್ಲಿ ಈ ವಿದೇಶಿ ನೇರ ಬಂಡವಾಳದ ವಹಿವಾಟು ಬರಬಹುದು-ರಾಜ್ಯ ಸರ್ಕಾರ ಕಾಂಗ್ರೆಸ್ ಕೈಗೆ ಬಂದರೆ.ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಈ ವಿಷಯದ ಬಗ್ಗೆ ತಮ್ಮ ನಿಲುವು ಏನೆಂಬುದನ್ನು ಕರ್ನಾಟಕದ ಕಾಂಗ್ರೆಸ್ ಮುಖಂಡರು ಈಗಲೇ (ಕೇಂದ್ರ ಸಚಿವರೂ ಸೇರಿದಂತೆ) ಸ್ಪಷ್ಟಪಡಿಸಬೇಕು.  ನಮ್ಮ ರಾಜ್ಯದಲ್ಲಿ ಸಾವಿರಾರು ಚಿಲ್ಲರೆ ಮಾರಾಟಗಾರರಿದ್ದಾರೆ. ಅದರಲ್ಲಿ ಗಣನೀಯ ಸಂಖ್ಯೆಯವರಿಗೆ ಬದಲಿ ಜೀವನೋಪಾಯ ಕಂಡುಕೊಳ್ಳುವುದು ಕಷ್ಟವಾಗುತ್ತದೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT