ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ

Last Updated 7 ಸೆಪ್ಟೆಂಬರ್ 2011, 9:40 IST
ಅಕ್ಷರ ಗಾತ್ರ

ರಾಣೆಬೆನ್ನೂರು: ಸರ್ಕಾರದ ಯೋಜನೆ ಗಳನ್ನು ಪಡೆಯಲು ನಿವೇಶನದ ಹಕ್ಕು ಪತ್ರ ಅವಶ್ಯಕವಾಗಿದೆ, ಹಕ್ಕು ಪತ್ರ ಲಭ್ಯವಾಗದಿದ್ದರೆ ಯಾವುದೇ ರೀತಿ ಪ್ರಯೋಜನವಾಗುವದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ. ಉದಾಸಿ ಹೇಳಿದರು.

ತಾಲ್ಲೂಕಿನ ಹಿರೇಬಿದರಿ ಗ್ರಾಮದಲ್ಲಿ ಜಿಪಂ ಹಾವೇರಿ, ತಾಪಂ, ಗ್ರಾಪಂ (ಶಿವಾನಂದ ಬಡಾವಣೆ) ನಿವಾಸಿಗಳಿಗೆ  ಪುನರ್ವಸತಿ ಕೇಂದ್ರದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪುನರ್ವಸತಿ ಕೇಂದ್ರದ ಹಕ್ಕು ಪತ್ರ ವಿತರಣೆ ಬಿಜೆಪಿ ಸರ್ಕಾರ ಮಾಡಿದೆ, ಬಿಜೆಪಿ ಬರುವ ಮುನ್ನ ಅಧಿ ಕಾರ ನಡೆಸಿದ ಸರ್ಕಾರಗಳಲ್ಲಿ ರಾಜ ಕೀಯ ಇಚ್ಚಾಶಕ್ತಿಯ ಕೊರತೆಯಿಂದಾಗಿ ರೈತರ ಅಭಿವೃದ್ದಿ ಸಾಧ್ಯವಾಗಿರಲಿಲ್ಲ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರು ಜಾರಿಗೊಳಿಸಿದ ಎಲ್ಲ ಯೋಜನೆಗಳನ್ನು ಮುಂದುವರೆಸಿ ಕೊಂಡು ಹೋಗುತ್ತೇನೆ ಎಂದು ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡರು ಹನುಮನಮಟ್ಟಿಯಲ್ಲಿ ತಿಳಿಸಿದ್ದಾರೆ ಎಂದರು. 

ತಹಸೀಲ್ದಾರ ಮಹ್ಮದ್ ಝುಬೈರ್ ಅವರು 1992-93ನೇ ಸಾಲಿನಲ್ಲಿ ತುಂಗಭದ್ರಾ ನದಿಯ ಪ್ರವಾಹದಿಂದ ಹಿರೇಬಿದರಿ ಗ್ರಾಮವನ್ನು ಸ್ಥಳಾಂತರ ಮಾಡುವ ಯೋಜನೆ ಇದಾಗಿದ್ದು, 27 ಎಕರೆ ಭೂಮಿ ಸರ್ಕಾರಿ ಜಮೀನು, 690 ಕುಟುಂಬಗಳ ಸಂಖ್ಯೆ, ವಾಸ ವಿರುವ ಕಟುಂಬಗಳ ಸಂಖ್ಯೆ 276, ಹಂಚಿಕೆಯಾಗಿ ಖಾಲಿ ಇರುವ ನಿವೇಶನ ಗಳ ಸಂಖ್ಯೆ 49, ಹಂಚಿಕೆಯಾಗದೇ ಖಾಲಿ ಇರುವ ನಿವೇಶನಗಳ ಸಂಖ್ಯೆ 365, ವಿತರಣೆ ನಿವೇಶನಗಳ ಸಂಖ್ಯೆ 325 ಹಂಚಿಕೆ ಮಾಡಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಶಿವಣ್ಣ  ಮಾತನಾಡಿ,  ಶಿವಾನಂದ ಬಡಾವಣೆಯವರು ರಾಜಕೀಯವಾಗಿ ಮುಂದುವರೆದಿದ್ದರೂ ಪಟ್ಟಾ ಪಡೆಯಲು ತಡವಾಯಿತು, ಪಟ್ಟಾ ಇದ್ದರೆ ನಿಮ್ಮ ಗ್ರಾಮದ ಅಭಿ ವೃದ್ಧಿಗೆ ಮತ್ತು ನೆಮ್ಮದಿಯ ಜೀವನ ನಡೆಸಲು ಉಪಯೋಗವಾಗುತ್ತದೆ ಎಂದರು.

ಜಿಪಂ ಅಧ್ಯಕ್ಷ ಮಂಜುನಾಥ ಓಲೇ ಕಾರ, ಜಿಪಂ ಸದಸ್ಯರಾದ ಸಂತೋಷ ಪಾಟೀಲ, ಶಿವಕುಮಾರ ಮುದ್ದಪ್ಪಳ ವರ, ತಾಪಂ ಅಧ್ಯಕ್ಷ ಗುಡ್ಡಪ್ಪ ಓಲೇಕಾರ, ನಗರಸಭಾ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ,  ಹೊಳಬಸನಗೌಡ್ರ ಎಂ. ಪಾಟೀಲ, ರೇಣುಕವ್ವ ಜಾಲಗಾರ, ಛತ್ರೆಪ್ಪ ದಿಬ್ಬದ, ಕರಿಯಪ್ಪ ಬೀರಾಳ, ಮಮತಾ ಸಾವಕ್ಕಳವರ, ಶಾಂತವ್ವ ಸಂಗಾನವರ, ಸುರೇಶ ಬೀರಾಳ, ಮರಿಯಪ್ಪ ಕೊಟ್ರಪ್ಪನವರ, ಸಿದ್ದಪ್ಪ ಗಸ್ತೇರ, ಮಹದೇವಪ್ಪ, ಹಾಲವ್ವ ಬಾರ್ಕಿ, ವಿರುಪಾಕ್ಷ ಹರಪನಹಳ್ಳಿ, ಸಿದ್ದನಗೌಡ ಪಾಟೀಲ, ಕಾರ್ಯನಿರ್ವಾ ಹಕ ಅಧಿಕಾರಿ ಎಸ್.ಎಸ್.ಸಜ್ಜನ, ಅಭಿ ವೃದ್ದಿ ಅಧಿಕಾರಿ ಎಸ್.ಎಸ್. ಹಲ ವಾಗಿಲ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT