ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ, ಉದ್ಯೋಗಕ್ಕೆ ಆಗ್ರಹ: ಪ್ರತಿಭಟನೆ

Last Updated 2 ಜುಲೈ 2013, 6:04 IST
ಅಕ್ಷರ ಗಾತ್ರ

ಕಾರಟಗಿ: ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರಿಗೆ ನಿವೇಶನ ನೀಡಬೇಕು. ಜಾಬಕಾರ್ಡ್ ಹೊಂದಿದವರಿಗೆ ಉದ್ಯೋಗ ನೀಡಬೇಕು. ಅರ್ಹರಿಗೆ ಜಾಬಕಾರ್ಡ್ ನೀಡಬೇಕು ಎಮದು ಆಗ್ರಹಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗೂ ಎಐಸಿಟಿಯು ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಗ್ರಾಮ ಪಂಚಾಯ್ತಿವರೆಗೆ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾ ನಿರತರು ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯತನ ಖಂಡಿಸಿ ಘೋಷಣೆ ಹಾಕಿ, ಗ್ರಾಮ ಪಂಚಾಯ್ತಿ ಮುಂದೆ ಧರಣಿ ನಡೆಸಿದರು.

ಅನೇಕ ಅರ್ಹರಿಗೆ ಜಾಬಕಾರ್ಡ್ ಇಲ್ಲದೆ, ಉದ್ಯೋಗ ಮಾಡಲು ಅವಕಾಶವಿರದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನೂ ಕೆಲವರಿಗೆ ಜಾಬಕಾರ್ಡ್ ಇದ್ದರೂ ಉದ್ಯೋಗ ಇಲ್ಲದೇ ಬದುಕುವುದು ದುಸ್ತರಾವಗಿದೆ. ನಿವೇಶನ ನೀಡುವುದಾಗಿ ಕಳೆದ 7 ತಿಮಗಳ ಹಿಂದೆ ಅರ್ಜಿ ಪಡೆದಿದ್ದರೂ, ನಿವೇಶನ ನೀಡುತ್ತಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಅನೇಕ ಬಾರಿ ಮನವಿ ಮಾಡಿಕೊಂಡರೂ ಸ್ಪಂದನೆ ದೊರೆಯದಿರುವುದರಿಂದ ಪ್ರತಿಭಟನೆ ನಡೆಸಲಾಯಿತು ಎಂದು ಪ್ರತಿಭಟನಾ ನಿರತರು ಹೇಳಿದರು.

ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ್ ಚಲವಾದಿ (ನಿರ್ಗಮಿತ), ವಿದ್ಯಾವತಿ ಸಿ. ಪ್ರತಿಭಟನಾ ನಿರತರಿಗೆ ಸೂಕ್ತ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತರು ನಿರ್ಗಮಿಸಿದರು. ಎ.ಎಲ್. ತಿಮ್ಮಣ್ನ, ಜಿ. ಬಸವರಾಜ್, ಸುನೀತಾ, ಪ್ರೇಮಾ, ಯಮನೂರಪ್ಪ, ಕರಿಯಪ್ಪ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT