ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೇಶನ ಹಂಚಿಕೆ: ಅಧಿಕಾರಿಗಳಿಂದ ಪರಿಶೀಲನೆ

Last Updated 7 ಅಕ್ಟೋಬರ್ 2012, 8:30 IST
ಅಕ್ಷರ ಗಾತ್ರ

ಕಂಪ್ಲಿ: ಸ್ಥಳೀಯ ಪುರಸಭೆ ವ್ಯಾಪ್ತಿಯ ಶಿಬಿರದಿನ್ನಿ ಪ್ರದೇಶದಲ್ಲಿ ವಾಸಕ್ಕಾಗಿ ಪ.ಜಾತಿ, ಪ.ಪಂಗಡದ 84 ಫಲಾನು ಭವಿಗಳು 24 ವರ್ಷಗಳ ಹಿಂದೆ ಹಣ ಪಾವತಿಸಿದ್ದು, ಇಲ್ಲಿಯವರೆಗೆ ನಿವೇಶನ ವಿತರಿಸಿಲ್ಲ ಎನ್ನುವ ದೂರಿನ ಹಿನ್ನೆಲೆಯಲ್ಲಿ ದಾವಣಗೆರೆ ನಾಗರೀಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶನಿವಾರ ಪುರಸಭೆಗೆ ಭೇಟಿ ನೀಡಿ ಕಡತ ಪರಿಶೀಲಿಸಿದರು.

ಕಂಪ್ಲಿ ವಿಧಾನಸಭಾಕ್ಷೇತ್ರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಾಜಿ ಶಾಸಕ ಎಚ್.ಡಿ. ಬಸವರಾಜ ಶಿಬಿರ ದಿನ್ನಿ ಪ್ರದೇಶದಲ್ಲಿ ವಾಸಕ್ಕಾಗಿ ಪ.ಜಾತಿ, ಪ.ಪಂಗಡದ 84 ಫಲಾನುಭವಿಗಳು 24ವರ್ಷಗಳ ಹಿಂದೆ ರೂ. 350 ಪಾವತಿಸ್ದ್ದಿದರೂ ನಿವೇಶನ ವಿತರಿಸಿಲ್ಲ ಎಂದು ದಾವಣಗೆರೆ ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಚಿಕ್ಕೇರೂರು, ದಾವಣಗೆರೆ ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ ಡಿವೈಎಸ್ಪಿ ಟಿ.ಆರ್. ಕೃಷ್ಣಮೂರ್ತಿ ಮತ್ತು ಎಸ್.ಐ ಗಳಾದ ಜಯಸಿಂಹ, ರಾಮಕೃಷ್ಣ ಅವರಿಗೆ ಕಂಪ್ಲಿ ಪುರಸಭೆಗೆ ಭೇಟಿ ನೀಡಿ ಸಮಗ್ರ ವರದಿ ಸಿದ್ದಪಡಿಸುವಂತೆ ಆದೇಶಿಸಿದ್ದರು.
ಶನಿವಾರ ಕಚೇರಿಗೆ ಭೇಟಿ ನೀಡಿದ ನಿರ್ದೇನಾಲಯ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಕಡತ ಗಳನ್ನು  ಪರಿಶೀಲಿಸಿದರು.

ಶಿಬಿರದಿನ್ನಿ 15.84 ಎಕರೆಯಲ್ಲಿ 516 ನಿವೇಶನಗಳನ್ನು ಸಿದ್ಧಪಡಿಸಿ ಈಗಾಗಲೇ 250 ಫಲಾನುವಿಗಳಿಗೆ ಹಂಚಿಕೆ ಮಾಡಲಾಗಿದೆ.

ಇದರಲ್ಲಿ 1988-89ರಲ್ಲಿ ವಾಸಕ್ಕಾಗಿ ಪ.ಜಾತಿ, ಪ.ಪಂಗಡದ 84 ಫಲಾನುಭವಿಗಳು ರೂ. 350 ಪಾವತಿಸಿದ್ದು, ಇವರಿಗೆ ಪ್ರಥಮ ಆದ್ಯತೆ ನೀಡುವಂತೆ ತಿಳಿಸಿದರು.

ಇದೇ ಪರಿಶೀಲನಾ ವರದಿಯನ್ನು ಮುಂದಿನ ಕ್ರಮಕ್ಕಾಗಿ ಎಡಿಜಿಪಿ ಅವರಿಗೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎಚ್.ಎನ್. ಗುರುಪ್ರಸಾದ, ನಜೀರ್, ಕಂಪ್ಲಿ ಫಿರ್ಕಾ ವಾಲ್ಮೀಕಿ ನಾಯಕ ಸಂಘ ಅಧ್ಯಕ್ಷ ಎಚ್. ಪೂರ್ಣಚಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT