ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನಿಸಾನ್'ನಿಂದ ಸುಧಾರಿತ ಮೈಕ್ರಾ ಆ್ಯಕ್ಟಿವ್

Last Updated 10 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲಿ 2010ರಿಂದ ಈವರೆಗೆ 43,000ಕ್ಕೂ ಅಧಿಕ `ಮೈಕ್ರಾ' ಕಾರು ಮಾರಾಟವಾಗಿವೆ. 30 ವರ್ಷಗಳಿಂದ ಒಟ್ಟು 56 ಲಕ್ಷ ಮೈಕ್ರಾ ಸರಣಿ ಕಾರುಗಳು ವಿವಿಧ ದೇಶಗಳಲ್ಲಿ ರಸ್ತೆಗಿಳಿದಿವೆ ಎಂದು `ನಿಸಾನ್ ಮೋಟಾರ್ ಇಂಡಿಯಾ' ಅಧ್ಯಕ್ಷ ಕೆನಿಚಿರೋ ಯೊಮುರಾ ಹೇಳಿದರು.

ಹೊಸ ನಿಸಾನ್ ಮೈಕ್ರಾ ಮತ್ತು ಮೈಕ್ರಾ ಆ್ಯಕ್ಟಿವ್ ಕಾರುಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟ ಆಕಾರದ `ಮೈಕ್ರಾ' ಕಾರು ನಗರ ಮಿತಿಯಲ್ಲಿ ಸಂಚರಿಸಲು ಹೇಳಿ ಮಾಡಿಸಿದಂತಹ ವಾಹನ. 1.2ಎಲ್ ಪೆಟ್ರೋಲ್‌ಎಂಜಿನ್ ಮೈಕ್ರಾ ಲೀಟರ್‌ಗೆ  18.44 ಕಿ.ಮೀ, 1.5ಎಲ್ ಡೀಸೆಲ್ ಎಂಜಿನ್ ಮಾದರಿ ಲೀಟರ್‌ಗೆ 23.08 ಕಿ.ಮೀ ಚಲಿಸುತ್ತದೆ ಎಂದು ಹೇಳಿದರು.

ಹೆಚ್ಚುವರಿ ಸೌಲಭ್ಯಗಳನ್ನು ಒಳ ಗೊಂಡಿರುವ `ಮೈಕ್ರಾ ಆ್ಯಕ್ಟಿವ್' (ಎಕ್ಸ್‌ಷೋ ರೂಂ) ರೂ 3.56 ಲಕ್ಷ, ಹೊಸ `ಮೈಕ್ರಾ' ಮಾದರಿಗೆ ್ಙ4.88 ಲಕ್ಷ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT