ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ವಾರ್ಥ ಸೇವೆಗೆೆ ತಕ್ಕ ಪ್ರತಿಫಲ: ಮುರಿಗೆಪ್ಪ

Last Updated 10 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಹೊಸಪೇಟೆ: `ಅರ್ಜಿ ಹಾಕದೆ,  ಅರಸಿ ಬರುವ ಸನ್ಮಾನ ಹಾಗೂ ಪ್ರಶಸ್ತಿ ಆತ್ಮಗೌರವದ ಜೊತೆ ಜವಾಬ್ದಾರಿಯನ್ನೂ ಹೆಚ್ಚಿಸುತ್ತವೆ. ಇಂತಹ ಸನ್ಮಾನಗಳಿಗೆ ಭಾಜನರಾಗುವುದು ಹೆಮ್ಮೆಯ ವಿಷಯ~  ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಎ. ಮುರಿಗೆಪ್ಪ ಹೇಳಿದರು.

ಸೋಮವಾರ ಇಲ್ಲಿಯ ಮಲ್ಲಿಗೆ ಸಭಾಂಗಣದಲ್ಲಿ ಡಾ.ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಕನ್ನಡ ಸೇನೆ ಸಹಯೋಗದಲ್ಲಿ ರಾಜ್ಯ ಮಟ್ಟದ ಡಾ.ಎಚ್.ಎನ್. ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

`ನಿಸ್ವಾರ್ಥದಿಂದ ನಾವು ಕಾರ್ಯ ನಿರ್ವಹಿಸಿದರೆ ತಕ್ಕ ಪ್ರತಿಫಲ ದೊರೆಯುತ್ತದೆ ಎಂಬುದಕ್ಕೆ ಅರ್ಜಿ ಹಾಕದೇ ಪ್ರತಿಷ್ಠಿತ ಡಾ.ಎಚ್.ಎನ್ ಪ್ರಶಸ್ತಿಗೆ ಭಾಜನರಾದ ನಾವು ಮಾದರಿಯಾಗಿದ್ದು, ಇಂತಹವರ ಆದರ್ಶಗಳನ್ನು ಸದಾ ಎತ್ತಿಹಿಡಿಯಬೇಕು~ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸೇವೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್. ಕುಮಾರ, ರಾಜಕಾರಣಿಗಳು ಸ್ವಾರ್ಥಕ್ಕೆ ಜಾತಿಗಳ ಮಧ್ಯೆ ವೈಷಮ್ಯ ಹುಟ್ಟುಹಾಕುತ್ತಿರುವ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ಒಟ್ಟುಗೂಡಿ ಜನ ಜಾಗೃತಿಕಾರ್ಯ ಮಾಡಬೇಕು ಎಂದರು.

ಮೆಹಬೂಬ್‌ಸಾಬ್, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಕುಮಾರ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ. ಆರ್.ಕೊಟ್ರೇಶ್, ವೇದಿಕೆಯ ಅಧ್ಯಕ್ಷ ಸಿ.ಮಂಜುನಾಥ, ಟಿ.ವೆಂಕಟೇಶ್ ಸೇರಿದಂತೆ ಡಾ.ಎಚ್.ಎನ್ ಪ್ರಶಸ್ತಿಗೆ ಭಾಜನರಾದ 20 ಮಂದಿ ಸಾಧಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT