ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀ ಇಟ್ಟಂತೆ ಇರುವೆನು ಚಾಮುಂಡಮ್ಮ - ಧ್ವನಿಸುರುಳಿ ಬಿಡುಗಡೆ ನಾಳೆ

Last Updated 9 ಅಕ್ಟೋಬರ್ 2011, 4:45 IST
ಅಕ್ಷರ ಗಾತ್ರ

ಮೈಸೂರು: `ಕಲಾಧಾರೆ ಕಲ್ಚರಲ್ ಟ್ರಸ್ಟ್ ಮಾಸ್ಟರ್ ಎನ್ ಬ್ಲಾಸ್ಟರ್ ಡ್ಯಾನ್ಸ್ ಗ್ರೂಪ್ ವತಿಯಿಂದ `ನೀ ಇಟ್ಟಂತೆ ಇರುವೆನು ಚಾಮುಂಡಮ್ಮ~ ಭಕ್ತಿಗೀತೆಗಳ ಸಿಡಿ ಹಾಗೂ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಅ.10 ರಂದು ಸಂಜೆ 6 ಗಂಟೆಗೆ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ~ ಎಂದು ಶ್ರೀಕಂಠ ಗುಂಡಪ್ಪ ಹೇಳಿದರು.

`ಈ ಧ್ವನಿ ಸುರುಳಿಯ ಪರಿಕಲ್ಪನೆ, ಸಾಹಿತ್ಯ, ನೃತ್ಯ ನಿರ್ದೇಶನವನ್ನು ಚಾಮರಾಜ್ ನಿರ್ವಹಿಸಿದ್ದು, ಎ.ಎಸ್.ಪ್ರಸನ್ನಕುಮಾರ್ ಹಾಗೂ ಎ.ವಿ.ಆನಂದ್ ಸಂಗೀತ ನೀಡಿದ್ದಾರೆ. ಪ್ರೊ. ಪಿ.ವಿ.ನಂಜರಾಜ ಅರಸ್, ಪ್ರೊ. ಕೆ.ಆರ್.ಪ್ರೇಮಲೀಲಾ ಮಲ್ಲಣ್ಣ, ಪ್ರೇಮಾತನಯ ಶ್ರೀನಿವಾಸ್ ಸಾಹಿತ್ಯ ರಚನೆ ಮಾಡಿದ್ದಾರೆ~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

`ಪ್ರಸಿದ್ಧ ಗಾಯಕರಾದ ಮಂಜುಳಾ ಗುರುರಾಜ್, ಎಂ.ಡಿ.ಪಲ್ಲವಿ, ಎಲ್.ಎನ್.ಶಾಸ್ತ್ರಿ, ರಾಜೇಶ್ ಕೃಷ್ಣನ್, ಹೇಮಂತ್, ನಂದಿತಾ ಹಾಗೂ ನಾಗಲಕ್ಷ್ಮಿ ಅವರ ಕಂಠದಲ್ಲಿ ಧ್ವನಿಸುರುಳಿ ಮೂಡಿಬಂದಿದೆ~ ಎಂದರು.

ಅಧ್ಯಕ್ಷ ಸಿ.ಚಾಮರಾಜ್ ಮಾತನಾಡಿ, `ರಾಷ್ಟ್ರೀಯ ಸಮಾಜ ಸೇವಕ ರತ್ನ ಪ್ರಶಸ್ತಿ ಪುರಸ್ಕೃತ ಎಸ್.ವೆಂಕಟೇಶ್ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಮತ್ತು ಸಹಕಾರ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಟ್ರಸ್ಟ್ ವತಿಯಿಂದ 2011-12ನೇ ಸಾಲಿನ ಆಟೋ ರಾಜ ಪ್ರಶಸ್ತಿಯನ್ನು ಘೋಷಿಸಿ, ಆಟೋ ಚಾಲಕರನ್ನು ಸನ್ಮಾನಿಸಲಾಗುವುದು.
 
ನೃತ್ಯಗಿರಿ ಸಂಸ್ಥೆಯ ನಿರ್ದೇಶಕಿ ಕೃಪಾ ಫಡ್ಕೆ ಅವರಿಂದ ಚಾಮುಂಡೇಶ್ವರಿ ನೃತ್ಯರೂಪಕ ಪ್ರದರ್ಶನ ನಡೆಯಲಿದೆ~ ಎಂದು ಹೇಳಿದರು. ಟ್ರಸ್ಟ್‌ನ ಕಾರ್ಯದರ್ಶಿ ಪಿ.ಶ್ರೀನಿವಾಸ್ ಪ್ರಸಾದ್ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT