ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಕಡ್ಡಾಯವಾಗಿ ಪಾಲಿಸಲು ಸೂಚನೆ

Last Updated 5 ಏಪ್ರಿಲ್ 2013, 7:02 IST
ಅಕ್ಷರ ಗಾತ್ರ

ಹುಣಸಗಿ: ವಿಧಾನಸಭೆಯ ಚುನಾವಣೆಯನ್ನು ಶಾಂತಿರೀತಿಯಿಂದ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಈಗಾಗಲೇ ಜಿಲ್ಲಾಡಳಿತ ಸಜ್ಜುಗೊಂಡಿದೆ. ಆದ್ದರಿಂದ ಎಲ್ಲ ಪಕ್ಷದ ಮುಖಂಡರೂ ಚುನಾವಣೆ ನೀತಿಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಹುಣಸಗಿ ಸರ್ಕಲ್ ಇನ್‌ಸ್ಪೆಕ್ಟರ್ ಸತ್ಯನಾರಾಯಣರಾವ ತಿಳಿಸಿದರು.

ಹುಣಸಗಿ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ಸರ್ವಪಕ್ಷಗಳ ಮತ್ತು ಮುಖಂಡರ ಸಭೆಯಲ್ಲಿ ಚುನಾವಣೆ ನೀತಿ ಸಂಹಿತೆ ಕುರಿತು ಮಾತನಾಡಿದರು.

ಚುನಾವಣೆಗೆ ಸಂಭಂಧಿಸಿದಂತೆ ಯಾವದೇ ಸಭೆ ಸಮಾರಂಭಗಳನ್ನು ನಡೆಸುವಾಗ ಅಧಿಕಾರಿಗಳ ಪೂರ್ವಾನುಮತಿ ಪಡೆದುಕೊಳ್ಳುವದು ಕಡ್ಡಾಯವಾಗಿದೆ. ಅದರಂತೆ ಕಾರ್ಯಕ್ರಮಗಳನ್ನು ನಿಗದಿತ ಸಮಯಕ್ಕೆ ಪ್ರಾರಂಭಿಸಿ ನಿಗದಿತ ಸಮಯಕ್ಕೆ ಮುಕ್ತಾಯ ಮಾಡಬೇಕು. 

ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಸಾರ್ವಜನಿಕರು ಹೆಚ್ಚಿನ ಪ್ರಮಾಣದ ಹಣ, ಆಭರಣ ತೆಗೆದುಕೊಂಡು ಹೋಗುವದಾದರೇ ಅದಕ್ಕೆ ತಕ್ಕ ರಸೀದಿ, ಬ್ಯಾಂಕ್ ಪಾಸಬುಕ್ ಹೊಂದಿರಬೇಕು ಎಂದು ತಿಳಿಸಿದರು.

ಹುಣಸಗಿ ಸಬ್‌ಇನ್‌ಸ್ಪೆಕ್ಟರ್ ವೀರಣ್ಣ ಹಳ್ಳಿ ಮಾತನಾಡಿ ಚುನಾವಣೆ ಸಂದರ್ಭದಲ್ಲಿ ಯಾರೇ ಒತ್ತಾಯ ಪೂರ್ವಕವಾಗಿ ಮತಚಲಾಯಿಸಲು ಒತ್ತಡ ಹೇರುವದು ಸೇರಿದಂತೆ ಯಾವದೇ ಅಕ್ರಮಗಳು ಕಂಡು ಬಂದಲ್ಲಿ ಅಂತಹ ವ್ಯಕ್ತಿ ಮತ್ತು ಗುಂಪುಗಳ ವಿರುದ್ಧ ಪ್ರಕರಣ ದಾಖಲಿಸಲಾಗುವದು. ಹುಣಸಗಿ ವ್ಯಾಪ್ತಿಯಲ್ಲಿ ಚುನಾವಣೆ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು 9480803586ಗೆ ಸಂಪರ್ಕಿಸಲು ತಿಳಿಸಿದ್ದಾರೆ.

ಈ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಸಿದ್ದಣ್ಣ ಮಲಗಲದಿನ್ನಿ, ಚಂದ್ರಶೇಖರ ದಂಡಿನ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ನೀರಲಗಿ, ವಿರೇಶಚಿಂಚೋಳಿ, ಬಸವರಾಜ ಸ್ಥಾವರಮಠ, ಸೂಗಪ್ಪ ಚಂದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT