ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಪಾಲನೆಗೆ ಸೂಚನೆ

Last Updated 12 ಡಿಸೆಂಬರ್ 2013, 5:56 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿಯ ನಗರಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಪಾಲನೆ ಮಾಡುವಂತೆ ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಸೂಚಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಗರಸಭೆ ಚುನಾವಣೆಗೆ ಸಂಬಂಧಿಸಿ ಇದುವರೆಗಿನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು.

ನಾಮಪತ್ರ ಸಲ್ಲಿಕೆಯಾದ ನಂತರ ಮಾಡಬೇಕಾದ ಕರ್ತವ್ಯಗಳು, ರಾಜಕೀಯ ಪಕ್ಷಗಳು ಚುನಾವಣಾ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳು, ಅಭ್ಯರ್ಥಿಗಳ ಚುನಾವಣಾ ವೆಚ್ಚ ಹೀಗೆ ಪ್ರತಿಯೊಂದನ್ನು ಸಂಬಂಧಿಸಿದ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕಿದೆ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಮತಗಟ್ಟೆ ಕೇಂದ್ರಗಳ ಸುಸ್ಥಿತಿ ಬಗ್ಗೆ ಗಮನಹರಿಸಬೇಕು. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ದಿನದಿಂದ ವೆಚ್ಚ ಅನ್ವಯವಾಗಲಿದ್ದು, ಈ ಬಗ್ಗೆ ನಿಗಾ ವಹಿಸಬೇಕಿದೆ. 

ಚುನಾವಣಾ ವೀಕ್ಷಕರಾದ ಪಿ.ಐ. ಶ್ರೀವಿದ್ಯಾ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ವಿ. ರಾಜು, ಚುನಾವಣಾಧಿಕಾರಿಗಳಾದ ಎಸ್. ಶ್ರೀಧರ ಮತ್ತು ತಿರುಮಲೇಶ್,  ತಹಶೀಲ್ದಾರರಾದ ಕುಂಞಮ್ಮ, ಸೆಕ್ಟರ್ ಅಧಿಕಾರಿಗಳಾದ ಗೋವಿಂದರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಜಯಲಕ್ಷ್ಮಿಬಾಯಿ, ಪ್ರಮೋದ್, ಚುನಾವಣಾ ವೀಕ್ಷಕರ ಮಾಹಿತಿ ಅಧಿಕಾರಿ ಸಿ. ಜಗನ್ನಾಥ್ ಇದ್ದರು. 

ಅಧಿಕಾರಿಗಳ ನೇಮಕ
ನಗರಸಭೆ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ನೀತಿಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಯಾವುದೇ ರೀತಿಯಲ್ಲಿ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಚುನಾವಣಾ ವೀಕ್ಷಕರು, ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ.

ಚುನಾವಣಾ ವೀಕ್ಷಕರಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ (9448933972), ಚುನಾವಣಾ ವೀಕ್ಷಕರ ಸಂಪರ್ಕಾಧಿಕಾರಿ ಸಿ. ಜಗನ್ನಾಥ್ (94482 20647), 1 ರಿಂದ 11ನೇ ವಾರ್ಡ್‌ ವರೆಗೆ ಚುನಾವಣಾಧಿಕಾರಿಯಾಗಿ ಎಸ್. ಶ್ರೀಧರ (97312 01637), ಸಹಾಯಕ ಚುನಾವಣಾಧಿಕಾರಿಯಾಗಿ ಜಯಲಕ್ಷಿ ಬಾಯಿ (94808 86559), 12 ರಿಂದ 23ನೇ ವಾರ್ಡ್‌ ವರೆಗೆ ಚುನಾವಣಾಧಿಕಾರಿಯಾಗಿ ತಿರುಮಲೇಶ್ (9945647847), ಪ್ರಮೋದ್ (99453 03149). 

1 ರಿಂದ 11 ನೇ ವಾರ್ಡ್‌ ವರೆಗೆ ಅಬಕಾರಿ ಉಪ ನಿರೀಕ್ಷಕರಾದ ಶ್ರೀನಿವಾಸ ಎಚ್.ಜಿ.(9449657722), ನಗರ ಪೊಲೀಸ್ ಠಾಣೆಯ ಎ.ಎಸ್.ಐ. ಬಿ.ಸಿ.ಆನಂದ್, (94802 51773), 12 ರಿಂದ 23ನೇ ವಾರ್ಡ್‌ ವರೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗೋವಿಂದರಾಜು (94486 56954), ಅಬಕಾರಿ ಉಪ ನಿರೀಕ್ಷಕರಾದ ಗೋವಿಂದಯ್ಯ ( 96117 17590), ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ. ಎನ್.ಎಸ್.ಕಾರ್ಯಪ್ಪ (94490 24404) ಅವರನ್ನು ನೇಮಕ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT