ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಯೋಜನೆಗೆ 150 ಕೋಟಿ

Last Updated 6 ಫೆಬ್ರುವರಿ 2012, 7:55 IST
ಅಕ್ಷರ ಗಾತ್ರ

ಯಳಂದೂರು: `ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುಖ್ಯ ಕಾಲುವೆ, ಉಪ ಕಾಲುವೆಗಳು, ಕೆರೆಗಳ ಪುನಶ್ಚೇತನಕ್ಕೆ ಪ್ರಸಕ್ತ ಸಾಲಿನಲ್ಲಿ 150 ಕೋಟಿ ವಿನಿಯೋಗಿಸುವುದಾಗಿ~ ಶಾಸಕ ಜಿ.ಎನ್. ನಂಜುಂಡಸ್ವಾಮಿ ತಿಳಿಸಿದರು.

ತಾಲ್ಲೂಕಿನ ರಂಗನಾಥನಪುರದ ಬಳಿ ಇರುವ ಕಬಿನಿ ಮುಖ್ಯ ಕಾಲುವೆಯ ಸುಧಾರಣಾ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

30 ವರ್ಷಗಳಿಂದ ಈ ಭಾಗದ ರೈತರ ಜೀವನಾಡಿಯಾಗಿರುವ ಕಬಿನಿ ನಾಲೆಯ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಆದ್ಯತೆ ನೀಡಲಾಗಿದೆ. ತಾಲ್ಲೂಕಿನ ಗಂಗವಾಡಿ ಯಿಂದ ಕೊಳ್ಳೇಗಾಲದ ಕುಣಗಳ್ಳಿ ಗ್ರಾಮದ ವರೆಗಿನ 10 ಕಿ.ಮಿ ನಾಲಾ ದುರಸ್ತಿಗೆ 11 ಕೋಟಿ ವೆಚ್ಚದಲ್ಲಿ ದುರಸ್ತಿಗೊಳಿಸಲಾಗುವುದು. ಇದರಿಂದ ಈ ಭಾಗದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ ಎಂದರು.

ತಾಲ್ಲೂಕಿನಲ್ಲಿರುವ 7 ಕೆರೆಗಳ ಹೂಳೆತ್ತುವ ಕಾಮಗಾರಿ ಈಗಾಗಲೇ ಮುಗಿದಿದೆ. ಬರುವ ಮಾರ್ಚ್ ವೇಳೆಗೆ ಇದು ಬಳಕೆಗೆ ಬರಲಿದೆ. ಇನ್ನುಳಿದ ಕೆರೆಗಳನ್ನೂ ಹಂತಹಂತವಾಗಿ ಅಭಿವೃ ದ್ಧಿಪಡಿಸಲಾಗುವುದು. 150 ಕೋಟಿಗಳ ಯೋಜನೆಯಲ್ಲಿ 100 ರಿಂದ 150 ಕಿ,ಮಿ. ರವೆಗಿನ ಮುಖ್ಯ ಕಾಲುವೆ, ಉಪ ಕಾಲುವೆಗಳನ್ನು ದುರಸ್ತಿಗೊಳಿ ಸಲಾಗುವುದು ಎಂದರು.

ತಾ.ಪಂ. ಸದಸ್ಯರಾದ ಮಹೇಶ್‌ಕುಮಾರ್, ಕೆ.ಪಿ. ಶಿವಣ್ಣ, ಕಾವೇರಿ ನೀರಾವರಿ ನಿಗಮದ ದಕ್ಷಿಣ ಭಾಗದ ಅಧೀಕ್ಷಕ ಅಭಿಯಂತರ ವರದರಾಜ್, ಎಇಇ ರವಿ, ಹೇಮಂತ್‌ರಾಜ್, ಜೆಇ ರವಿ, ಮುರುಳೀಧರ್, ಗುತ್ತಿಗೆದಾರ ಕೃಷ್ಣಾರೆಡ್ಡಿ, ಮುಖಂಡರಾದ ಪ್ರಭುಪ್ರಸಾದ್, ಕೆ.ಕೆ. ರಂಗರಾಜ್, ಮದ್ದೂರು ವಿರೂಪಾಕ್ಷ, ನಾಗೇಶ್, ಗೋವಿಂದ ಇತರರು ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT