ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಖಾಲಿ ಕೊಡ ಪ್ರದರ್ಶಿಸಿ ಪ್ರತಿಭಟನೆ

Last Updated 26 ಏಪ್ರಿಲ್ 2013, 6:41 IST
ಅಕ್ಷರ ಗಾತ್ರ

ರೋಣ: ಕೆಲಸ ಬಿಟ್ಟು ಸೈಕಲ್, ಬೈಕ್ ಮೇಲೆ ದೂರದ ತೋಟಗಳಿಗೆ ತೆರಳಿ ನೀರು ತರುವ ವಾತಾವರಣ ಸೃಷ್ಟಿಯಾಗಿದ್ದು ಕಳೆದ 10 ದಿನಗಳಿಂದ ನೀರಿಲ್ಲದೇ ನಿತ್ಯ ಪರದಾಡುವಂತಾಗಿದೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ತಡೆದು ಪ್ರತಿಭಟಿಸುತ್ತಿದ್ದರಿಂದ ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕಾಗಮಿಸಿದ ಪಿಎಸ್‌ಐ  ಎಸ್.ಎನ್. ಹತ್ತಿಕಟಗಿ ಪುರಸಭೆ ಮುಖ್ಯಾ ಧಿಕಾರಿ  ರಾಮಸ್ವಾಮಿಯರನ್ನು ಕರೆಸಿ ಚುನಾವಣೆ ಸಮಯವಿರುವದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಸಮ್ಮ ರೋಣದ ಅನ್ನಕ್ಕ ಬಳಗೋಡ, ಸಂಗಮ್ಮ ಕೊಪ್ಪದ, ಕೋಮಾಬಾಯಿ ಮದುಕರ, ಶೋಭಾ ಗುಡಿ, ಅಶೋಕ ಸಾತನೂರಮ ಹನ ಮಂತ ಬಾಗಲೇ, ಇಮಾಮಸಾಬ್ ನದಾಫ್, ನಾಗರಾಜ ಒಡೆಯರ, ಪಾಂಡಪ್ಪ ಬಳಗೋಡಮ ಚೆನ್ನಪ್ಪ ಬಂದಿಕೇರಿ. ಕುಮಾರ ಕೊಪ್ಪದಮ ಬಸಪ್ಪ ಮುಗಳಿ ಸೇರಿದಂತೆ  ಮೊದಲಾದವರಿದ್ದರು.

ನೀರು ಸರಬರಾಜು ಮಾಡುವ ಮೂರು ಮೋಟಾರ್ ಸುಟ್ಟಿದ್ದು ಅವುಗಳನ್ನು ದುರಸ್ಥಿಗೆ ಕಳುಹಿಸಲಾಗಿದೆ. ಅಲ್ಲದೆ ಹೊಸ ಪೈಪ್ ಲೈನ್ ಅಳವಡಿ ಸಲಾಗಿದ್ದು ನೀರಿನ ಒತ್ತಡಕ್ಕೆ ಪೈಪ್ ಸೋರಿ ಒಂದು ವಾರದಿಂದ ನೀರಿನ ಸರಬರಾಜು ಮಾಡುವಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಯವಾಗಿದೆ. ತಕ್ಷಣ ಅವುಗಳನ್ನು ಸರಿಪಡಿಸಿ ನಾಳೆ ನೀರು ಬಿಡಲಾಗುವುದು ಎಂದು ರೋಣ ಪುರಸಭೆ ಮುಖ್ಯಾಧಿಕಾರಿ ರಾಮ ಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT