ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ

Last Updated 21 ಡಿಸೆಂಬರ್ 2013, 9:23 IST
ಅಕ್ಷರ ಗಾತ್ರ

ಹುಣಸಗಿ: ಪಟ್ಟಣದ 4 ನೇ ವಾರ್ಡ್‌ನ ನಿವಾಸಿಗಳು ಸರಿಯಾದ ನೀರಿನ ಪೂರೈಕೆಗೆ ಆಗ್ರಹಿಸಿ ನಿವಾಸಿಗಳು ಗ್ರಾಮ ಪಂಚಾಯಿತಿಗೆ ಆಗಮಿಸಿ ಖಾಲಿ ಕೊಡಗಳೊಂದಿಗೆ ಗುರುವಾರ ಪ್ರತಿ ಭಟನೆ ನಡೆಸಿದರು.

50 ವರ್ಷಗಳ ಹಳೆಯದಾಗಿರುವ ಇಲ್ಲಿನ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತದೆ. ಇತ್ತೀಚಿನ ವರ್ಷ­ಗಳಲ್ಲಿ ಮನೆಗಳ ಸಂಖ್ಯೆಯೂ ಹೆಚ್ಚಾ­ಗಿವೆ. ನೀರು ಸಮರ್ಪಕವಾಗಿ ಸಿಗುತ್ತಿಲ್ಲ. ವಾರ್ಡ್‌ ನಂ. 4 ರ ನೀಲಕಂಠೇಶ್ವರ ದೇವ­ಸ್ಥಾನದಿಂದ ಅಗಸಿವರೆಗಿನ ಮನೆ­ಗಳಿಗೆ ನೀರು ಸರಿಯಾಗಿ ಪೂರೈಕೆಯಾ­ಗುತ್ತಿಲ್ಲ. ನಸುಕಿನ 3–4 ಗಂಟೆಗೆ ನೀರು ಬಿಡುತ್ತಾರೆ  ಎಂದು ಆರೋಪಿಸಿದರು. 

ಚಳಿಯಲ್ಲಿ ನೀರಿಗಾಗಿ ಕಾಯ್ಕೊಂಡು ಕೂಡುವಂತಾಗಿದೆ ಎಂದು ನಿವಾಸಿ ಬಸಮ್ಮ ಮರಾಠಿ, ಇತರರು ಆರೋಪಿಸಿದರು.

ನೀರಿನ ಮೋಟರ್ ಅಳವಡಿಸಿ­ಕೊಂಡವರು ಮಾತ್ರ ನೀರು ಪಡೆಯು­ವಂತಹ ಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲ ಎಂದು ಪ್ರತಿಭಟಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ನೀರಲಗಿ ಮಾತನಾಡಿ, ನೀರು ಸರಿಯಾಗಿ ಪೂರೈಕೆ ಮಾಡಿಸಲಾ ಗುವುದು ಎಂದು ತಿಳಿಸಿದರು.
ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾ­ಯಿತು. ಅನ್ನಮ್ಮ ಬಂಡೋಳಿ, ನಿರ್ಮಲಾ ರಂಗಂಪೇಠ, ಬಸಮ್ಮ ಮರಾಠಿ, ನೀಲಮ್ಮ ಮರಾಠಿ, ಫಾತೀಮಾ ಬೇಗಂ, ಮಮ್ತಾಜ್‌­ಬೇಗಂ, ಶಿವನಗೌಡ ಪಾಟೀಲ್, ಬಸವರಾಜ ಆಲ್ದಾಳ, ಪ್ರಭು ಪಡಶೆಟ್ಟಿ, ಸುಭಾಸ ದೇಸಾಯಿ, ಪರಮಣ್ಣ ಮಲಗಲದಿನ್ನಿ, ರಾಜಶೇಖರ ಖಾನಾ­ಪುರ, ಚೇತನ ಬಾಗೇವಾಡಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT