ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗಾಗಿ ಪುರಸಭೆಗೆ ಮುತ್ತಿಗೆ

Last Updated 8 ಜನವರಿ 2013, 8:28 IST
ಅಕ್ಷರ ಗಾತ್ರ

ಗುಳೇದಗುಡ್ಡ: ಕಳೆದ ಹದಿನೈದು ದಿನಗಳಿಂದ ಕುಡಿಯುವ ನೀರು ಪೂರೈಸಿಲ್ಲ, ಕೈಪಂಪು ಕೂಡಾ ದುರಸ್ತಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಇಲ್ಲಿನ ನೇಕಾರ ನಗರದ ನಿವಾಸಿಗಳು ಸೋಮವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕಳೆದ 15 ದಿನಗಳಿಂದ ಕುಡಿಯುವ ನೀರು ಪೂರೈಸಲಾರದಕ್ಕಾಗಿ ಅಲ್ಲಲ್ಲಿ ಸುತ್ತಾಡಿ ನೀರು ತರುವಂತಾಗಿದೆ. ಇದ್ದ ಕೈಪಂಪು ದುರಸ್ತಿ ಮಾಡಿಲ್ಲ, ನೀರಿಗಾಗಿ ಮಹಿಳೆಯರು, ಮಕ್ಕಳು ಪರದಾಡು ವಂತಾಗಿದೆ ಎಂದು ತಮ್ಮ ಸಂಕಟ ಹೇಳಿಕೊಂಡರು.

`ರಸ್ತೆ ದುರಸ್ತಿ ಮಾಡಿಲ್ಲ, ಸ್ವಚ್ಛತೆ ಮಾಡಲು ಪೌರಕಾರ್ಮಿಕರು ಬರುವುದಿಲ್ಲ, ಹೀಗಾಗಿ ಈ ವಾರ್ಡಿನ ಅಭಿವೃದ್ಧಿ ಮತ್ತು ಸಮಸ್ಯೆಗಳ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಸಾಕಷ್ಟು ಸಲ ಮನವಿ ಮಾಡಿದರು ಏನು ಪ್ರಯೋಜನ ವಾಗಿಲ್ಲ. ಪುರಸಭೆಯವರು ಇತ್ತ ಗಮನ ಹರಿಸುತ್ತಿಲ್ಲ' ಎಂದು ಮಹಿಳೆಯರು ದೂರಿದರು.

ಪುರಸಭೆ ಮುಖ್ಯಾಧಿಕಾರಿ ಬಿ.ಟಿ. ಬಂಡಿವಡ್ಡರ ಅವರು ಮಲಪ್ರಭಾ ನದಿಯಲ್ಲಿ ನೀರು ಬಂದಿಲ್ಲ. ಇವತ್ತೆ ನಿಮ್ಮ ವಾರ್ಡಿಗೆ ನೀರು ಪೂರೈಸುವ ವ್ಯವಸ್ಥೆ ಮಾಡುತ್ತೇನೆ ಎಂದು ಭರವಸೆ ನೀಡಿದ ಬಳಿಕ ಹಿಂತಿರುಗಿದರು.

ಪ್ರತಿಭಟನೆಯಲ್ಲಿ ಸುಜಾತಾ ಅಲದಿ, ಶಂಕರ ಐಹೊಳ್ಳಿ, ದೊಡ್ಡಬಸಪ್ಪ ಉಂಕಿ, ಚಿನ್ನಪ್ಪ ಲೋಪ್ಸ್, ಡಿ.ಎಫ್. ಪವಾರ, ನೀಲವ್ವ ಚಾರಕಾನಿ, ಚನ್ನಮ್ಮ ಉಂಕಿ, ಜುಬೇದಾ ವಂದಾಲ, ಸಂಗವ್ವ, ಪರ್ವಿನ ವಂದಾಲ, ನಾಗಪ್ಪ ಅಣಿ, ಬಸವರಾಜ ಉಂಕಿ, ಗಣಪತೆಪ್ಪ ದಾಡಮೊಡೆ, ಈರಪ್ಪ ಮಲಗಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT