ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ಆಡಳಿತ ಯಂತ್ರ ನೀರಿಳಿಸಿದ ಸದಸ್ಯರು

Last Updated 7 ಡಿಸೆಂಬರ್ 2012, 6:00 IST
ಅಕ್ಷರ ಗಾತ್ರ

ರಾಯಚೂರು: ನೆನೆಗುದಿಗೆ ಬಿದ್ದ ಕುಡಿಯುವ ನೀರು ಪೂರೈಕೆ ಯೋಜನೆ ಅಧೋಗತಿ, ಕೋಟ್ಯಂತರ ಹಣ ಕರ್ಚಾದರೂ ಹನಿ ನೀರು, ಕೆರೆ, ಟ್ಯಾಂಕ್, ಊರಿಗೆ ಬಾರದೇ ಇರುವುದರ ಬಗ್ಗೆ ಗುರುವಾರ ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಞಾತೀತವಾಗಿ ವಿಷಯ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತ ಯಂತ್ರ ಅಸಡ್ಡೆ ಧೋರಣೆ, ವರ್ಷ, ಎರಡು ವರ್ಷವಾದರೂ ಕುಡಿಯುವ ನೀರು ಪೂರೈಕೆ ಯೋಜನೆ ಕಣ್ಣೆತ್ತಿ ನೋಡಿಲ್ಲ. ಹಣ ಕರ್ಚು ಮಾಡುವುದಕ್ಕಷ್ಟೇ ನಿಗಾವಹಿಸಿ ನೀರು ಪೂರೈಕೆ ಬಗ್ಗೆ ಬೇಜವಾಬ್ದಾರಿವಹಿಸಿದರೆ ಹೇಗೆ? ಈಗಲೇ ನೀರಿನ ಸಮಸ್ಯೆ ಎದುರಾಗಿದೆ. ಭವಿಷ್ಯದ ಬೇಸಿಗೆ ದಿನಗಳಲ್ಲಿ ಜನತೆಯ ಗತಿ ಏನು ಎಂದು ತರಾಟೆಗೆ ತೆಗೆದುಕೊಂಡರು.

ಸಿರವಾರ ಸದಸ್ಯ ಅಸ್ಲಂ ಪಾಷಾ ಮಾತನಾಡಿ, ಅನುಪಾಲನಾ ವರದಿ ಬಗ್ಗೆ ಆ ಮೇಲೆ ಚರ್ಚೆ ಮಾಡೋಣ. ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ, ಆಸ್ಪತ್ರೆ, ಶಿಕ್ಷಣ ಇಲಾಖೆ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕೊಡಬೇಕು ಎಂದು ಸಭೆ ಒಪ್ಪಿಗೆ ಸೂಚಿಸಿತು.
ಕುಡಿಯುವ ನೀರು ಪೂರೈಕೆಗೆ ಸುಮಾರು 70 ಕೋಟಿ ಹಣ ದೊರಕಿಸಿದೆ. 6 ತಿಂಗಳಾದರೂ ಕರ್ಚು ಮಾಡಿರುವುದು ಕೇವಲ 10 ಕೋಟಿ ಮಾತ್ರ. ಇನ್ನು ಮೂರು ತಿಂಗಳಲ್ಲಿ ಹಣ ಹೇಗೆ ಖರ್ಚು ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಸದಸ್ಯರಾದ ಎಚ್.ಬಿ ಮುರಾರಿ, ಪ್ರಕಾಶ ಜೇರಬಂಡಿ, ಡಿ ಅಚ್ಯುತರೆಡ್ಡಿ,ಭೂಪನಗೌಡ, ಬಸಮ್ಮ ಕುಂಟೋಜಿ ಹಾಗೂ ಇತರರು ಸಭೆ ಗಮನಕ್ಕೆ ತಂದು ಅಸಮಾಧಾನ ವ್ಯಕ್ತಪಡಿಸಿದರು. ತಮ್ಮ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದ ಯೋಜನೆ ಬಗ್ಗೆ ಗಮನ ಸೆಳೆದರು.
ಕೋಟ್ಯಂತರ ಹಣ ಹರಿದು ಬಂದರೂ ನೀರು ಬಾರದೇ ಕ್ಷೇತ್ರ ಜನತೆ ಸ್ಥಿತಿ ಗಂಭೀರ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕ ವಿಷಯಗಳ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೇ ಸಾಮಾನ್ಯ ಸಭೆ ಕಳೆಯಬೇಕಾಗಿ ಬಂದಿರುವುದು ದುರಂತ ಎಂದರು.

ಭೂ ಸೇನಾ ನಿಗಮಕ್ಕೆ ನೀರು ಪೂರೈಕೆ ಕಾಮಗಾರಿ ವಹಿಸಿಕೊಡಬಾರದು. ಸಣ್ಣ ಪುಟ್ಟ ಕೆಲಸ ಕೊಡಬಹುದು. ಅವರಿಗೆ ಕೊಟ್ಟ ಕೆಲಸ ಆಮೆ ವೇಗದಲ್ಲಿ ನಡೆಯುತ್ತವೆ ಎಂದು ಸದಸ್ಯ ವಿಶ್ವನಾಥ್ ಹೇಳಿದರು.

ಅನೇಕ ಸಭೆಯಲ್ಲಿ ಅಧಿಕಾರಿಗಳ ಲೋಪ, ಅಕ್ರಮ, ನಿಯಮಬಾಹಿರದ ಬಗ್ಗೆ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಸದಸ್ಯ ದಾನಪ್ಪ, ಜಾಫರ್ ಪಟೇಲ್ ಆಕ್ರೋಶ ವ್ಯಕ್ತಪಡಿಸಿದರು.

ಸಿಇಓ ನಿರ್ದೇಶನ: ಈಗಲೇ ನೀರಿನ ಸಮಸ್ಯೆ ಇದೆ. ಮುಂದೆ ಬೇಸಿಗೆ ದಿನ ಇದೆ. ಆಗಬೇಕಾದಷ್ಟು ಕೆಲಸ ಆಗಿಲ್ಲ. ಸದಸ್ಯರ ಭಾವನೆಗೆ ಸ್ಪಂದಿಸಿ ಆಡಳಿತ ವರ್ಗ ಕೆಲಸ ಮಾಡಬೇಕು. ಕಾಮಗಾರಿ, ಯೋಜನೆ, ಅದರ ಸ್ವರೂಪದ ಬಗ್ಗೆ ಲಿಖಿತವಾಗಿಯೇ ಸದಸ್ಯರ ಗಮನಕ್ಕೆ ತಂದು ಮುಂದುವರಿಯಬೇಕು. ತಮ್ಮ ಗಮನಕ್ಕೆ ಬಂದಿಲ್ಲ ಎಂಬ ದೂರು ಸದಸ್ಯರಿಂದ ಬರಕೂಡದು ಎಂದು ಆಡಳಿತ ವರ್ಗಕ್ಕೆ ಜಿಪಂ ಸಿಇಓ ಅಧಿಕಾರಿಗಳಿಗೆ ಆದೇಶ ನೀಡಿದರು.

ಇನ್ನ ಮುಂದೆ ಆಡಳಿತ ಯಂತ್ರ ಚುರುಕಾಗಿ ಕೆಲಸ ಮಾಡುತ್ತದೆ. ನಾನೂ ಪ್ರವಾಸ ಕೈಗೊಳ್ಳುತ್ತೇನೆ. ಆದ್ಯತೆ ಮೇರೆಗೆ ನೀರಿನ ಸಮಸ್ಯೆ ತುರ್ತು ಪರಿಹಾರಕ್ಕೆ ಮುಂದಾಗುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT