ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ತತ್ವಾರ: ಗ್ರಾ.ಪಂ.ಗೆ ಬೀಗ...

Last Updated 16 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

ಸೊರಬ: ಎಂಟು ದಿನಗಳಿಂದ ಕುಡಿಯುವ ನೀರು, ವಿದ್ಯುತ್ ಪೂರೈಕೆ ಸಮಸ್ಯೆಯಿಂದ ಉದ್ರಿ-ವಡ್ಡಿಗೆರೆ ಗ್ರಾಮ ಬಳಲುತ್ತಿದ್ದರೂ ಗ್ರಾಮ ಪಂಚಾಯ್ತಿ ಆಡಳಿತ ಹಾಗೂ ಮೆಸ್ಕಾಂ ಇಲಾಖೆ ಕಣ್ಮುಚ್ಚಿ ಕುಳಿತಿವೆ ಎಂದು ಆರೋಪಿಸಿ ಗ್ರಾಮಸ್ಥರು ಶನಿವಾರ ಉದ್ರಿ ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

400ಕ್ಕೂ ಹೆಚ್ಚು ಮನೆ ಇರುವ ವಡ್ಡಿಗೆರೆ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಇಲ್ಲದೇ ಕುಡಿಯುವ ನೀರಿನ ಪಂಪ್‌ಸೆಟ್ ಕೆಲಸ ಮಾಡುತ್ತಿಲ್ಲ. ಈ ಕುರಿತು ಗಮನಕ್ಕೆ ತಂದು ಒಂದು ವಾರ ಕಳೆದರೂ ಯಾವುದೇ ಪ್ರಯೋಜನ ಉಂಟಾಗಿಲ್ಲ. ಬದಲಿಗೆ ಗ್ರಾ.ಪಂ. ಹಾಗೂ ಮೆಸ್ಕಾಂ ಅಧಿಕಾರಿಗಳು ಒಬ್ಬರ ಮೆಲೆ ಒಬ್ಬರು ಆರೋಪ ಮಾಡುತ್ತಾ ಕೈ ಚೆಲ್ಲಿ ಕುಳಿತಿದ್ದಾರೆ.

ಮಂಚಿ ಮೊದಲಾದ ಗ್ರಾಮಗಳಿಗೆ ಎತ್ತಿನ ಗಾಡಿ, ಬೈಸಿಕಲ್, ಟ್ರ್ಯಾಕ್ಟರ್ ಮೇಲೆ ತೆರಳಿ ಕಲುಷಿತ ನೀರು ತಂದು ಬಳಸುವ ದುಸ್ಥಿತಿ ಒದಗಿದೆ. ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಚೇರಿ ಸಿಬ್ಬಂದಿ ಒಳಗೆ ಹೋಗದಂತೆ ತಡೆದು ಬೀಗ ಹಾಕಿದರು. ಗ್ರಾ.ಪಂ. ಆಡಳಿತ ಅವ್ಯವಹಾರದಲ್ಲಿ ಮುಳುಗಿದೆ ಎಂದು ಇದೇ ವೇಳೆ ಆರೋಪಿಸಿ, ವಡ್ಡಿಗೆರೆ ಶಾಲೆಗೆ 12ನೇ ಹಣಕಾಸು ಯೋಜನೆ ಅಡಿ ಮಂಜೂರಾಗಿರುವ ್ಙ 30 ಸಾವಿರ  ಗಳನ್ನು ಕೆಲಸ ಮಾಡದೇ ಬಿಡುಗಡೆ ಮಾಡಿಸಿಕೊಳ್ಳಅಾಗಿದೆ.
 
ಹಳೆಯ ಪೈಪ್‌ಲೈನ್ ತೋರಿಸಿ, ಹೊಸದನ್ನು ಅಳವಡಿಸಲಾಗಿದೆ ಎಂದು ಸುಳ್ಳು ಮಾಹಿತಿ ನೀಡಿ ಅನುದಾನ ಪಡೆದಿದ್ದಾರೆ. ರಾಮಲಿಂಗನ ವಡ್ಡು ನಿರ್ಮಾಣದ ಹೆಸರಿನಲ್ಲಿ ್ಙ 16 ಸಾವಿರ ವಂಚನೆ ಆಗಿದೆ. 30ಕ್ಕೂ ಹೆಚ್ಚು ಕೆಲಸಗಾರರಿಗೆ ಖಾತ್ರಿ ಯೋಜನೆಯ ಕೂಲಿ ನೀಡಿಲ್ಲ.

ಉದ್ಯೋಗ ಖಾತ್ರಿ ಯೋಜನೆಯ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ, ಕೂಲಿ ಹಣ, ಚೆಕ್‌ಗಳನ್ನು ಮನಸ್ಸಿಗೆ ಬಂದಂತೆ ನೀಡಲಾಗುತ್ತಿದೆ. ಎಂಜಿನಿಯರ್ ಕಾಮಗಾರಿಗಳನ್ನು ಪರಿಶೀಲಿಸಿಯೇ ಇಲ್ಲ ಎಂದು ದೂರಿದರು.
ವಿದ್ಯುತ್ ಹಾಗೂ ಕುಡಿಯುವ ನೀರಿನ ಪೂರೈಕೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಅವ್ಯವಹಾರ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಶಾಲಾ ಸಮಿತಿ ಅಧ್ಯಕ್ಷ ಮಲ್ಲಿಕೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಫಕೀರಪ್ಪ, ಶಿವಮೂರ್ತಪ್ಪ, ಬಸವಣ್ಯಪ್ಪ, ವೀರಭದ್ರಪ್ಪ, ನಾಗಪ್ಪ, ಸುರೇಶ್, ಮಾರುತಿ, ಭೀಮೇಶ್, ಹನುಮಂತಪ್ಪ, ಯಲ್ಲಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT