ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೆ ತತ್ವಾರ: ನಗರಸಭೆಗೆ ಬೀಗ ಜಡಿದು ಆಕ್ರೋಶ

Last Updated 8 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ಚಾಮರಾಜನಗರ: ಅಧ್ಯಕ್ಷೆ ಹಾಗೂ ಪೌರಾಯುಕ್ತರ ನಡುವಿನ ಮುಸುಕಿನ ಗುದ್ದಾಟದಿಂದ ಆಯುಧಪೂಜೆ ಹಾಗೂ ವಿಜಯದಶಮಿ ಹಬ್ಬಕ್ಕೆ ನೀರು ಪೂರೈಕೆ ಮಾಡಿಲ್ಲ ಎಂದು ಆರೋಪಿಸಿ ಶುಕ್ರವಾರ ಬಿಜೆಪಿ ನಗರ ಘಟಕದ ಕಾರ್ಯಕರ್ತರು ನಗರಸಭೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಕಳೆದ ಮೂರು ದಿನದಿಂದಲೂ ಕುಡಿಯುವ ನೀರು ಪೂರೈಕೆ ಮಾಡಿಲ್ಲ. ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಪೌರಾ ಯುಕ್ತರ ನಡುವೆ ಹೊಂದಾಣಿಕೆ ಇಲ್ಲ. ವೈಯಕ್ತಿಕ ಪ್ರತಿಷ್ಠೆಯಿಂದಾಗಿ ನಾಗರಿಕರು ತೊಂದರೆ ಅನುಭವಿಸು ವಂತಾಗಿದೆ ಎಂದು ದೂರಿದರು.

ನಗರಸಭೆ ಆಡಳಿತ ಕಚೇರಿಗೆ ತೆರಳುವ ಎರಡು ದ್ವಾರಗಳಿಗೆ ಬೀಗ ಜಡಿದ ಪ್ರತಿಭಟನಾಕಾರರು, ಧಿಕ್ಕಾರ ಕೂಗಿದರು. ಆಡಳಿತ ನಡೆಸುವಲ್ಲಿ ಅಧ್ಯಕ್ಷೆ ಅಸಮರ್ಥರಾಗಿದ್ದಾರೆ. ಉಪಾಧ್ಯಕ್ಷೆ ಕೂಡ ಇದರಿಂದ ಹೊರತಲ್ಲ. ಜತೆಗೆ, ಅಧಿಕಾರಿಗಳ ಮೂಲಕ ಕೆಲಸ ಮಾಡಿಸುವಲ್ಲಿ ಪೌರಾಯುಕ್ತರು ಸಹ ವಿಫಲರಾಗಿದ್ದಾರೆ. ಕೂಡಲೇ, ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಬೇಕು ಎಂದು ಪಟ್ಟುಹಿಡಿದರು.

ದ್ವಾರಗಳಿಗೆ ಬೀಗ ಜಡಿದ ಪರಿಣಾಮ ಕಚೇರಿಯೊಳಗಿದ್ದ ನಾಗರಿಕರು ಪರ ದಾಡುವಂತಾಯಿತು. ಪೌರಾಯುಕ್ತರು ಮತ್ತು ಅಧ್ಯಕ್ಷೆಯ ಕೊಠಡಿಯತ್ತ ತೆರಳಲು ಮುಂದಾದ ಪ್ರತಿಭಟನಾಕಾರ ರನ್ನು ಪೊಲೀಸರು ತಡೆದರು. ಕೊನೆಗೆ, ಅಧ್ಯಕ್ಷೆ ಹಾಗೂ ಪೌರಾಯುಕ್ತರು ಸ್ಥಳಕ್ಕೆ ಆಗಮಿಸಿ ಅಹವಾಲು ಕೇಳಲು ಮುಂದಾದರು. ಈ ವೇಳೆ ಇಬ್ಬರನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.

ಕನಿಷ್ಠ ಹಬ್ಬಗಳ ದಿನದಂದು ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಮುಂದಾಗಿಲ್ಲ. ಸ್ವಚ್ಛತೆಗೆ ಒತ್ತು ನೀಡಿಲ್ಲ. ನಗರಸಭೆ ಅಕ್ಕಪಕ್ಕದಲ್ಲಿಯೇ ತ್ಯಾಜ್ಯ ಸಂಗ್ರಹ ವಾಗಿದೆ. ಇದನ್ನು ವಿಲೇವಾರಿ ಮಾಡಿಲ್ಲ. ಎಲ್ಲ ವಾರ್ಡ್‌ಗಳ ಕಸವನ್ನು ಹೇಗೆ ವಿಲೇವಾರಿ ಮಾಡುತ್ತೀರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸದಸ್ಯರಾದ ಸಿ.ಎಸ್. ಮಹದೇವ ನಾಯಕ ಹಾಗೂ ಸುಂದರರಾಜ್ ಮಾತನಾಡಿ, `ತಿ.ನರಸೀಪುರದ ನೀರು ಪೂರೈಕೆ ಘಟಕದಲ್ಲಿ ವಿದ್ಯುತ್ ಪರಿ ವರ್ತಕ ಕೆಟ್ಟುಹೋಗಿದೆಯೆಂದು ಹೇಳು ತ್ತಿದ್ದಾರೆ. ಈ ಬಗ್ಗೆ ಸದಸ್ಯರ ಗಮನಕ್ಕೆ ತಂದಿಲ್ಲ. ಇಂದಿಗೂ ಅಲ್ಲಿಗೆ ಸದಸ್ಯರನ್ನು ಕರೆದೊಯ್ದು ವಾಸ್ತವಾಂಶ ತಿಳಿಸುವ ಪ್ರಯತ್ನ ಮಾಡಿಲ್ಲ. ಅಸಮರ್ಥ ಅಧ್ಯಕ್ಷೆ ಹಾಗೂ ಪೌರಾಯುಕ್ತರ ನಡುವಿನ ಸಂವಹನದ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸು ವಂತಾಗಿದೆ~ ಎಂದು ದೂರಿದರು.

ಪೌರಾಯುಕ್ತ ಬಿ.ಡಿ. ಬಸವರಾಜಪ್ಪ ಮಾತನಾಡಿ, `ತಿ.ನರಸೀಪುರ ಘಟಕದಲ್ಲಿ ವಿದ್ಯುತ್ ಪರಿವರ್ತಕ ಕೆಟ್ಟುಹೋಗಿದೆ. ಇದರಿಂದ ಹಬ್ಬದಂದು ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಕಳೆದ ಒಂದು ವಾರದಿಂದಲೂ ಸುವರ್ಣಾವತಿ ಜಲಾಶಯದಿಂದ ನೀರು ಪೂರೈಕೆ ಸ್ಥಗಿತ ಗೊಂಡಿದೆ. ಪ್ರಸ್ತುತ ಪರಿವರ್ತಕ ದುರಸ್ತಿ ಪಡಿಸಲಾಗಿದೆ. ಗಾಳಿಪುರ ಮತ್ತು ಹೌಸಿಂಗ್ ಬೋರ್ಡ್ ಟ್ಯಾಂಕ್‌ಗೆ ನೀರು ಪೂರೈಸಲಾಗುತ್ತಿದೆ. ಸಂಜೆ ವೇಳೆಗೆ ನೀರು ಸರಬರಾಜು ಮಾಡಲಾಗುವುದು~ ಎಂದು ಭರವಸೆ ನೀಡಿದರು.

ಅಧ್ಯಕ್ಷೆ ಭಾಗ್ಯಮ್ಮ ಮಾತನಾಡಿ, `ಅಭಿವೃದ್ಧಿ ವಿಷಯದಲ್ಲಿ ಪೌರಾಯುಕ್ತ ರೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸ ಲಾಗುವುದು~ ಎಂದು ತಿಳಿಸಿದರು.

ನಂತರ, ಪ್ರತಿಭಟನೆ ವಾಪಸ್ ಪಡೆಯಲಾಯಿತು. ಬಿಜೆಪಿ ಮುಖಂಡರಾದ ಬಾಲಸುಬ್ರಹ್ಮಣ್ಯ, ಕುಮಾರ್, ಬಾಬು, ಚಂದ್ರಶೇಖರ್, ಕೃಷ್ಣ, ಶಂಕರನಾಯ್ಕ, ನಂದೀಶ, ಕಾಂತರಾಜು ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT