ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಮೂಲ ಮಾರಾಟ

Last Updated 4 ಅಕ್ಟೋಬರ್ 2012, 18:55 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯದ ನೀರಿನ ಮೂಲಗಳನ್ನು ಸರ್ಕಾರ ವಿದೇಶಿ ಕಂಪೆನಿಗಳಿಗೆ ಮಾರಿಕೊಳ್ಳುತ್ತಿದೆ~ ಎಂದು ನೀರಿನ ಹಕ್ಕಿಗಾಗಿ ಜನಾಂದೋಲನ-ಕರ್ನಾಟಕ ಸಂಘಟನೆಯ ಸಂಚಾಲಕ ಈಶ್ವರಪ್ಪ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ನಮ್ಮ ನೆಲದ ನೀರನ್ನು ವಿದೇಶಿ ಕಂಪೆನಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಇಲ್ಲಿಯ ನೀರನ್ನೇ ಬಾಟಲಿನಲ್ಲಿ ತುಂಬಿಸಿ, ಆ ಕಂಪೆನಿಗಳು ಮಾರುತ್ತಿವೆ. ನಮ್ಮ ನೀರು ಮತ್ತು ಸಂಪತ್ತನ್ನು ಲೂಟಿ ಮಾಡಲು ಸರ್ಕಾರಗಳೇ ಅನುಮತಿ ನೀಡಿವೆ~ ಎಂದರು.

`ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಗುಲ್ಬರ್ಗ, ವಿಜಾಪುರ, ಚಿತ್ರದುರ್ಗ ಸೇರಿದಂತೆ ಈಗಾಗಲೇ ಅನೇಕ ನಗರಗಳಲ್ಲಿ ನೀರಿನ ಖಾಸಗೀಕರಣವಾಗಿದೆ. ಭೂಮಿ, ನೀರು, ಕಾಡು ಮತ್ತು ಇತರೆ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಣೆ ಮಾಡಬೇಕಾಗಿದ್ದ ಸರ್ಕಾರಗಳೇ ನಿರ್ಲಕ್ಷ್ಯ ಮಾಡುತ್ತಿವೆ~ ಎಂದು ಆರೋಪಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT