ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಸಮಸ್ಯೆ ನೀಗಿಸಲು ಕ್ರಮ

Last Updated 24 ಫೆಬ್ರುವರಿ 2012, 9:50 IST
ಅಕ್ಷರ ಗಾತ್ರ

ಗೌರಿಬಿದನೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಶೀಲಿಸುವ ಉದ್ದೇಶ ದಿಂದ ಗುರುವಾರ ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎಸ್.ಶೇಖರಪ್ಪ ಮತ್ತಿತರರು ಆಯಾ ಗ್ರಾಮಗಳಿಗೆ ಭೇಟಿ ನೀಡಿದರು.

ಗ್ರಾಮಗಳಾದ ಗೆದರೆ, ದಿಮ್ಮ ಗಟ್ಟನಹಳ್ಳಿ, ಹೊಸೂರು ಹೋಬಳಿಯ  ಕುಂದಿಹಳ್ಳಿ, ಜಾಲಹಳ್ಳಿ, ಉಪ್ಪಾರ ಹಳ್ಳಿ, ಡಿ.ಪಾಳ್ಯ ಹೋಬಳಿಯ ನಾಮ ಗೊಂಡ್ಲು, ಮಂಚೇನಹಳ್ಳಿ ಹೋಬ ಳಿಯ ಜರಬಂಡಹಳ್ಳಿ ಗೊಲ್ಲ ಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ, ಗ್ರಾಮ ಸ್ಥರೊಂದಿಗೆ ಸಂವಾದ ನಡೆಸಿದರು.

`ಜಾಲಹಳ್ಳಿ ಮತ್ತು ಕುಂದಿಹಳ್ಳಿ ಗ್ರಾಮಗಳಲ್ಲಿ ಕೊಳವೆಬಾವಿಗಳ ಮೂಲಕ ತಾತ್ಕಾಲಿಕವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಯಾವುದೇ ಗ್ರಾಮದಲ್ಲೂ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳಲಾಗಿದೆ.
 
ದನಕರುಗಳಿಗೆ  ಮೇವಿನ ಕೊರತೆ ನೀಗಿಸಲು ಮೇವಿನ ಬೀಜಗಳಿಗಾಗಿ ಪ್ರತಿ  ತಾಲ್ಲೂಕಿಗೆ 4 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ರೇಷ್ಮೆ  ಬೆಳೆಗೆ  ಕೀಟಬಾಧೆ  ತಗುಲಿ ನಷ್ಟ ಅನುಭಸಿದ ರೈತರಿಗೆ 30 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ~ ಎಂದು ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ತಿಳಿಸಿದರು.

ತಾಲ್ಲೂಕಿನಲ್ಲಿ ಬರಪೀಡಿತ  ಗ್ರಾಮ ಗಳಲ್ಲಿ ಶೇ 50ರಷ್ಟು ಬೆಳೆ ನಷ್ಟ ವಾಗಿರುವ ರೈತರನ್ನು 120 ಗ್ರಾಮ ಗಳಲ್ಲಿ ಗುರುತಿಸಿದ್ದು,  ಆಯಾ ಗ್ರಾಮದ ರೈತರಿಗೆ ಶೀಘ್ರವೇ ಪರಿಹಾರ ಧನ ನೀಡ ಲಾಗುವುದು. ಸಮಸ್ಯೆಗಳನ್ನು ಪರಿ ಹರಿಸಲು ಅಗತ್ಯ ಕ್ರಮ ಕೈಗೊ ಲಾಗು ವುದು ಎಂದು ಅವರು ತಿಳಿಸಿದರು.

ತಹಶೀಲ್ದಾರ್ ಡಾ.ಬಿ.ಸುಧಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ರಾಘವೇಂದ್ರಹನುಮಾನ್, ಕೇಶವ ರೆಡ್ಡಿ, ಸಿ.ಆರ್.ನರಸಿಂಹ ಮೂರ್ತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT