ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೇ ಮೊಟ್ಟೆ ಬೇಯಿಸಿ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ):  ನೀರಿನ ಸಹಾಯವಿಲ್ಲದೇ ಮೊಟ್ಟೆಯನ್ನು ಬೇಯಿಸುವ ಸಾಮರ್ಥ್ಯ ಹೊಂದಿರುವ ರಟ್ಟಿನಿಂದ ಮಾಡಿದ ವಿಶಿಷ್ಟವಾದ ಪೆಟ್ಟಿಗೆಯನ್ನು ವಿಜ್ಞಾನಿಗಳು ರೂಪಿಸಿದ್ದಾರೆ.

ಈ ರಟ್ಟಿನ ಪೆಟ್ಟಿಗೆಯು ರಾಸಾಯನಿಕ ಪದರವನ್ನು ಹೊಂದಿದ್ದು, ಇದು ಶಾಖವನ್ನು ಉತ್ಪಾದಿಸಿ ಒಳಗಿರುವ ಮೊಟ್ಟೆಯನ್ನು ಎರಡು ನಿಮಿಷಗಳಲ್ಲಿ ಬೇಯಿಸುತ್ತದೆ.

ನೀರಲ್ಲಿ ಮೊಟ್ಟೆ ಬೇಯಲು ತೆಗೆದುಕೊಳ್ಳುವ ಅರ್ಧಕ್ಕಿಂತಲೂ ಕಡಿಮೆ ಸಮಯದಲ್ಲಿ ಈ ಪೆಟ್ಟಿಗೆಯು ಮೊಟ್ಟೆಯನ್ನು ಬೇಯಿಸುತ್ತದೆ. 

ರಷ್ಯಾದಲ್ಲಿ ದೊರಕುವ ಮೊಟ್ಟೆಯಿಂದ ಮಾಡುವ `ಗೊಗೊಲ್ ಮೊಗೊಲ್' ಎಂಬ ತಿನಿಸಿನ ಹೆಸರನ್ನು ಈ ಪೆಟ್ಟಿಗೆಗೆ ಇಡಲಾಗಿದೆ. `ಕೆಐಎಎನ್' ಎಂಬ ರಷ್ಯಾದ ತಜ್ಞರ ತಂಡ ವಿಶಿಷ್ಟ ಪೆಟ್ಟಿಗೆಯನ್ನು ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT