ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆ ವಿವಾದ: ಕೊಣಾಜೆ ಪಂಚಾಯಿತಿಯಲ್ಲಿ ಮಾರಾಮಾರಿ

Last Updated 14 ಸೆಪ್ಟೆಂಬರ್ 2011, 10:05 IST
ಅಕ್ಷರ ಗಾತ್ರ

ಮುಡಿಪು: ಕುಡಿಯುವ ನೀರಿಗೆ ಸಂಬಂಧಿಸಿದಂತೆ ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಸಭೆಯ ವೇಳೆ ಮಾರಾಮಾರಿ ನಡೆದು ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣ ನಂತರ ಕೊಣಾಜೆ ಠಾಣೆಯಲ್ಲಿ ರಾಜಿಯಲ್ಲಿ ಇತ್ಯರ್ಥಗೊಂಡಿತು.

ಸಭೆಯಲ್ಲಿ ಒಂದನೇ ವಾರ್ಡ್ ಹಾಗೂ ಐದನೇ ವಾರ್ಡ್‌ಗೆ ಕುಡಿಯುವ ನೀರು ಪೂರೈಸುವ ವಿಚಾರದಲ್ಲಿ  ಮಹಮ್ಮದ್ ಹಾಗೂ ಪಂಚಾಯಿತಿ ಸದಸ್ಯ ಸೂಫಿಕುಂಞಿ ಅವರ ನಡುವೆ ಮಾತಿಗೆ ಮಾತು ಬೆಳೆದು ನಂತರ ಹೊಡೆದಾಟ ನಡೆಯಿತು ಎನ್ನಲಾಗಿದೆ.

`ನನಗೆ ಪಂಚಾಯಿತಿ ಸದಸ್ಯ ಸೂಫಿ ಕುಂಞಿ ಹಾಗೂ ಅಬ್ಬಾಸ್ ಎಂಬವರು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆ~ ಎಂದು ಈ ಬಗ್ಗೆ ಮಹಮ್ಮದ್ ಎಂಬವರು ಕೊಣಾಜೆ ಠಾಣೆಗೆ ದೂರು ನೀಡಿ, ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಾಗಿದ್ದರು.

ಇದಕ್ಕೆ ಪ್ರತಿಯಾಗಿ ಪಂಚಾಯಿತಿ ಸದಸ್ಯ ಸೂಫಿಕುಂಞಿ ಹಾಗೂ ಅಬ್ಬಾಸ್, `ನಾವು ನೀರಿನ ಪೂರೈಕೆಯನ್ನು ಸರಿಯಾಗಿ ಮಾಡಲು ತಿಳಿಸಿದ್ದಕ್ಕೆ ಮಹಮದ್ ಏಕಾಏಕಿ ನಮ್ಮ ಮೇಲೆ ಹಲ್ಲೆ ನಡೆಸಿದರು~ ಎಂದು ಕೊಣಾಜೆ ಠಾಣೆಗೆ ದೂರು ನೀಡಿದರು. ಇವರಿಬ್ಬರೂ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ದಾಖಲಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT