ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಪೂರೈಕೆಗೆ ಆಗ್ರಹಿಸಿ ರಸ್ತೆ ತಡೆ

Last Updated 1 ಅಕ್ಟೋಬರ್ 2011, 9:15 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಜನರು ಕುಡಿಯುವ ನೀರಿಗಾಗಿ ಒತ್ತಾಯಿಸಿ ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ನಡೆಯಿತು. 

  ಸೆ.26ರಂದು ನೀರಿಗಾಗಿ ಪಟ್ಟಣದ ಜನತೆ ಪುರಸಭೆಗೆ ಕೀಲಿ ಹಾಕಿ ಪ್ರತಿಭಟನೆ ನಡೆಸಿದ್ದರು. ಆದರೆ ಶುಕ್ರವಾರ ಮತ್ತೆ ಕುಡಿಯಲು ನೀರು ದೊರೆಯದೆ ಇದ್ದಾಗ ಜನರು ಆಕ್ರೋಶಗೊಂಡು ಒಂದು ತಿಂಗಳಾದರೂ ಪುರಸಭೆ ನೀರು ಪೂರೈಸಲು ವಿಫಲಗೊಂಡಿದೆ~ ಎಂದು ಆರೋಪಿಸಿ ಪಟ್ಟಣದ 14ನೇ ವಾರ್ಡ್‌ನ ಆಜಾದ್‌ಗಲ್ಲಿಯ ನಿವಾಸಿಗಳು ಶುಕ್ರವಾರ ವಾರ್ಡ್‌ನ ಸದಸ್ಯೆ ಕಮಲಮ್ಮ ಪಾಟೀಲ ಅವರ ನೇತೃತ್ವದಲ್ಲಿ ಬಜಾರ ರಸ್ತೆ ತಡೆ ನಡೆಸಿದರು.

ನೀರು ಪೂರೈಸುವಂತೆ ಪುರಸಭೆಗೆ ನಿತ್ಯ ಒತ್ತಾಯಿಸಿ ಸಾಕಾದ ಗಲ್ಲಿಯ ಜನತೆ ಶುಕ್ರವಾರ ಬೆಳಿಗ್ಗೆ ಬಜಾರ್ ರಸ್ತೆ ಮಧ್ಯ ಜಮಾಯಿಸಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆಗೆ ಇಳಿದರು. ಸಮರ್ಪಕವಾಗಿ ನೀರು ಪೂರೈಸದಿರುವ ಪುರಸಭೆ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರು ಪಾದಗಟ್ಟೆವರೆಗಿನ ಎಲ್ಲ ಅಂಗಡಿಗಳನ್ನು ಮುಚ್ಚಿಸಿದರು.

`ವಾರ್ಡ್‌ನಲ್ಲಿ ನೀರಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ನೀರು ಪೂರೈಸುವಂತೆ ಪುರಸಭೆಗೆ ಅನೇಕ ಬಾರಿ ಮನವಿ ಮಾಡಿದರೂ ಜನತೆಯ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ. ಕಳೆದ ಒಂದು ತಿಂಗಳಿನಿಂದ ಇದೇ ರೀತಿ ನೀರಿನ ಅವ್ಯವಸ್ಥೆ ಮುಂದುವರಿದಿದ್ದು ಸಮರ್ಪಕ ನೀರಿನ ಪೂರೈಕೆ ಕುರಿತು ಪುರಸಭೆ ಸರಿಯಾದ ಕ್ರಮಕೈಗೊಳ್ಳುತ್ತಿಲ್ಲ ಎಂದು ಪುರಸಭೆ ಸದಸ್ಯೆ ಕಮಲಮ್ಮ ಪಾಟೀಲ ದೂರಿದರು.

ಸ್ಥಳಕ್ಕೆ ಆಗಮಿಸಿದ ಪುರಸಭೆ ಅಧ್ಯಕ್ಷೆ ಜಯಕ್ಕ ಕಳ್ಳಿ ಹಾಗೂ ಮಾಜಿ ಅಧ್ಯಕ್ಷ ಎನ್.ಜಿ. ಹೊಂಬಳ `ನೀರು ಪೂರೈಕೆ ವಿಷಯದಲ್ಲಿ ಪುರಸಭೆ ಎಂದೂ ನಿರ್ಲಕ್ಷ ತೋರಿಲ್ಲ. ಆದರೆ ಮೇವುಂಡಿಯಲ್ಲಿನ ವಿದ್ಯುತ್ ಸಮಸ್ಯೆಯೇ ನೀರು ಪೂರೈಕೆಗೆ ಅಡ್ಡಿಯಾಗಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಮುಂದೆ ನೀರಿನ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗುವುದು~ ಎಂದರು.

ಎಚ್. ಅಬೀದಾ, ಮಮತಾಜ್ ಧರೂಬಾಯಿ, ಸುವರ್ಣ ಜಾಧವ, ರುಕ್ಮಿಣಿ ನವಲೆ, ತ್ರಿವೇಣಿ ನವಲೆ, ಜಯಾಬುದ್ದೀನ್ ಕಣವಿ, ಎಚ್. ಕೈರೂನ್, ಬಸೀರಾಬೇಗಂ ಹಳಮನಿ, ಅಕ್ಕಮ್ಮ ವಾಲಗೇರಿಮಠ, ಖಾದರ್‌ಸಾಬ್ ಹಳಮನಿ, ನಾಗರಾಜ ಚಿಂಚಲಿ, ಸತೀಶ ಮೆಕ್ಕಿ, ಮಂಜುನಾಥ ಮಾಗಡಿ, ಮಲ್ಲಿಕ್‌ಸಾಬ್ ಕಣವಿ, ಗಫಾರ್‌ಸಾಬ್ ರಿತ್ತಿ, ಇಕ್ಬಾಲ್ ಧರೂಬಾಯಿ, ಅಶೋಕಕುಮಾರ ಪ್ರಜಾಪತಿ, ಸೋಮು ಫಕ್ಕೀರಸ್ವಾಮಿಮಠ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT