ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಬಳಕೆದಾರರ ಸಂಘ ಸಬಲೀಕರಣಕ್ಕೆ ಒತ್ತಾಯ

Last Updated 3 ಜುಲೈ 2013, 7:40 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: 2001ರಲ್ಲಿ ಆರಂಭಿಸಲಾದ ನೀರು ಬಳಕೆದಾರರ ಸಹಕಾರ ಸಂಘಗಳು ಅಗತ್ಯ ಸಂಪನ್ಮೂಲದ ಕೊರತೆಯಿಂದ ನಿಷ್ಕ್ರಿಯವಾಗುತ್ತಿದ್ದು, ಸಂಘಗಳ ಸಬಲೀಕರಣಕ್ಕೆ ಸರ್ಕಾರ ಅಗತ್ಯ ನೆರವು ನೀಡಬೇಕು ಎಂದು ಕೆಆರ್‌ಎಸ್, ಹೇಮಾವತಿ ಹಾಗೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಂಘಗಳ ಮಂಡಳದ ಪದಾಧಿಕಾರಿಗಳು ಒತ್ತಾಯಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಮೂರೂ ಜಲಾಶಯಗಳ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾ ಮಂಡಳದ ಪದಾಧಿಕಾರಿಗಳ ಸಭೆಯಲ್ಲಿ ಈ ಒತ್ತಾಯ ಮಾಡಿದರು. ಎಚ್.ಕೆ. ಪಾಟೀಲ್ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ ಆರಂಭಿಸಲಾದ ಸಂಘಗಳಿಗೆ ಉತ್ತೇಜನ ಸಿಗುತ್ತಿಲ್ಲ. ನೀರಿನ ಕರ ವಸೂಲಿ ಆದೇಶವನ್ನು ಜಾರಿಗೆ ತರಬೇಕು.

ಸಂಘಗಳ ಗೋದಾಮು ಮತ್ತು ಕಚೇರಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು. ಒಡಂಬಡಿಕೆಯಾದ ಸಂಘಗಳಿಗೆ ರೂ 3 ಲಕ್ಷ ಬೀಜಧನ ನೀಡಬೇಕು. ಪ್ರತಿ ಸಂಘಗಳಿಗೆ ಪೀಠೋಪಕರಣ ಖರೀದಿಸಲು ರೂ 25 ಸಾವಿರ ಬಿಡುಗಡೆ ಮಾಡಬೇಕು. ಮಂಡಳಗಳಿಗೆ ತಲಾ ರೂ10 ಲಕ್ಷ ನಿಖರು ಠೇವಣಿ ಹಣ ನೀಡುತ್ತಿದ್ದು, ಅದನ್ನು ರೂ 50 ಲಕ್ಷಕ್ಕೆ ಏರಿಸಬೇಕು.

ನೀರು ಬಳಕೆದಾರರ ಸಂಘಗಳಿಗೆ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅಧಿಕಾರ ನೀಡಬೇಕು ಎಂದು ಒತ್ತಾಯಿಸಿ ಕೆಆರ್‌ಎಸ್ ವ್ಯಾಪ್ತಿಯ ಮಂಡಳದ ಅಧ್ಯಕ್ಷ ಪಂಚಲಿಂಗೇಗೌಡ, ಹಾರಂಗಿ ಮಂಡಳದ ಅಧ್ಯಕ್ಷ ಚೌಡೇಗೌಡ, ಹೇಮಾವತಿ ಮಂಡಳದ ಅಧ್ಯಕ್ಷ ಆರ್.ಎ.ನಾಗಣ್ಣ ಇತರರು ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ, ನೀರನ್ನು ರಾಜಸ್ತಾನದ ಮಾದರಿಯಲ್ಲಿ ಆದ್ಯತಾ ವಲಯ ಎಂದು ಘೋಷಿಸಬೇಕು. ಹಳೇ ಮೈಸೂರು ಭಾಗದಲ್ಲಿ ನೀರಿನ ಮೂಲಗಳು ಇದ್ದರೂ ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ.

ಗ್ರಾಮ ಪಂಚಾಯಿತಿಗಳನ್ನು ಸರ್ಕಾರ ಎಂದು ಘೋಷಿಸಿ ಅವುಗಳಿಗೆ ನೀರು ನಿರ್ವಹಣೆಯ ಹೊಣೆ ನೀಡಬೇಕು ಎಂದ ಅವರು, ಈ ಬಗ್ಗೆ ಸದನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ತಿಳಿಸಿದರು. ಚನ್ನರಾಯಪಟ್ಟಣದ ಶೆಟ್ಟಿಗೌಡ, ಟಿ.ಎಂ.ಹೊಸೂರು ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT