ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಸರಬರಾಜು ಯೋಜನೆಗೆ ಆಯ್ಕೆ

Last Updated 17 ಜುಲೈ 2013, 9:51 IST
ಅಕ್ಷರ ಗಾತ್ರ

ಮುಳಬಾಗಿಲು: ಕೇಂದ್ರ ಸರ್ಕಾರವು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ತಾಲ್ಲೂಕಿನಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಿದೆ ಎಂದು ಜಿಲ್ಲಾ ಪಂಚಾಯಿತಿ ಕಿರಿಯ ಎಂಜಿನಿಯರ್ ಗೋವಿಂದಪ್ಪ ತಿಳಿಸಿದರು.

ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿ ಸೋಮವಾರ ನಡೆದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಜಲಮೂಲ ರಕ್ಷಣೆ ಮತ್ತು ವಿವೇಚಿತ ಬಳಕೆಗೆ ಈ ಯೋಜನೆ ನೆರವಾಗಲಿದೆ ಎಂದರು.

ಯೋಜನೆಯ ಅನುಷ್ಠಾನಕ್ಕೆ ಗ್ರಾಮಸ್ಥರು ಅಧಿಕಾರಿಗಳೊಂದಿಗೆ ಸಹಕರಿಸಬೇಕು. ನೀರಿನ ಮೂಲ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕುಡಿಯುವ ನೀರಿನ ಅಭಾವ ಬಾರದಂತೆ ತಡೆಯಬೇಕು. ಅನಗತ್ಯವಾಗಿ ನೀರು ಪೋಲು ಮಾಡಬಾರದು ಎಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ಇನ್ನು ಮುಂದೆ ನೀರಿನ ಮೀಟರ್ ಅಳವಡಿಸಿ, ನೀರಿನ ಕಂದಾಯ ವಸೂಲಿಗೆ ಸೂಚಿಲಾಗುವುದು. ನೀರಿನ ಭದ್ರತಾ ಯೋಜನೆಯ ಅನುಕೂಲಗಳನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.

ನೋಡೆಲ್ ಅಧಿಕಾರಿ ಎನ್.ಶ್ರೀನಿವಾಸ್ ಮಾತನಾಡಿ, ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ರೂ 9200 ಸಹಾಯಧನ ನೀಡುತ್ತದೆ. ಫಲಾನುಭವಿಗಳು ರೂ 800 ವಂತಿಗೆ ಭರಿಸಿ, ರೂ 10 ಸಾವಿರ ವೆಚ್ಚದಲ್ಲಿ ಉತ್ತಮ ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂದರು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭವಾನಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಮಾತನಾಡಿದರು. ಅರಣ್ಯ ಇಲಾಖೆಯಿಂದ ವಿವಿಧ ಜಾತಿಯ ಸಸಿಗಳನ್ನು ಗ್ರಾಮಸ್ಥರಿಗೆ ಪಂಚಾಯಿತಿ ಉಚಿತವಾಗಿ ವಿತರಿಸಲಾಯಿತು.

ರೇಷ್ಮೆ ಇಲಾಖೆಯ ಚಂದ್ರು, ವೈದ್ಯಾಧಿಕಾರಿ ಡಾ.ಮಂಜುನಾಥ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ್ ತೋಟಗಾರಿಕೆ ಇಲಾಖೆಯ ಸುಕನ್ಯಾ, ಅಂಗನವಾಡಿ ಇಲಾಖೆಯ ಭಾರತಿ ದೇವಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಶಂಕರಪ್ಪ, ಉಪಾಧ್ಯಕ್ಷೆ ವರಲಕ್ಷ್ಮಮ್ಮ, ಕಾರ್ಯದರ್ಶಿ ಈರಪ್ಪ, ಗ್ರಾ.ಪಂ. ಸದಸ್ಯರಾದ ಜಿ.ಕೆ.ವೆಂಕಟರಾಮಯ್ಯ, ಕೆ.ಮುನಿಯಪ್ಪ, ಚೋಟೆಸಾಬಿ, ರಮೇಶ್, ನಾರಾಯಣಮ್ಮ, ನಗೀನಬೇಗಂ, ಸೋಮಶೇಖರ್, ಷಮೀವುಲ್ಲಾ, ಮುನಿರತ್ನಮ್ಮ, ಘಟ್ಟಪ್ಪ, ಕೃಷ್ಣಮ್ಮ, ಮುನಿಸ್ವಾಮಿಗೌಡ, ವಿಜಯಕುಮಾರ್, ನಾರಾಯಣಸ್ವಾಮಿ, ಬಿಲ್ ಕಲೆಕ್ಟರ್‌ಗಳಾದ ಕೃಷ್ಣಪ್ಪ, ಶಂಕರಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT