ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಲಿ ಚಿತ್ರ ವೀಕ್ಷಣೆ- ಪಕ್ಷಕ್ಕೆ ಮುಜುಗರ ಇಲ್ಲ: ಬಿಎಸ್‌ವೈ

Last Updated 10 ಫೆಬ್ರುವರಿ 2012, 6:40 IST
ಅಕ್ಷರ ಗಾತ್ರ

ಪುತ್ತೂರು: ವಿಧಾನಸಭೆಯಲ್ಲಿ ಸಚಿವರು ನೀಲಿಚಿತ್ರ ವೀಕ್ಷಿಸಿರುವುದರಿಂದ ಪಕ್ಷ ಹಾಗೂ ಸರ್ಕಾರ ಮುಜುಗರಕ್ಕೊಳಗಾಗಿಲ್ಲ. ಆದರೆ ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ಅನಗತ್ಯವಾಗಿ ಈ ವಿಚಾರವನ್ನು ಕೆದಕುತ್ತಿವೆ ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿಡಿಕಾರಿದರು.

ಪುತ್ತೂರು ತಾಲ್ಲೂಕಿನ ಚಾರ್ವಾಕ ಗ್ರಾಮದ ಕರಂದ್ಲಾಜೆಯಲ್ಲಿ ಗುರುವಾರ ಸಚಿವೆ ಶೋಭಾ ಕರಂದ್ಲಾಜೆ ಅವರ ತಂದೆಯ ವೈಕುಂಠ ಸಮಾರಾಧನೆಯಲ್ಲಿ ಪಾಲ್ಗೊಂಡಿದ್ದ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ಆರೋಪ ಬಂದಾಕ್ಷಣ ಸಚಿವ ಸ್ಥಾನಕ್ಕೆ ಸ್ವತಃ ರಾಜೀನಾಮೆ ಸಲ್ಲಿಸುವ ಮೂಲಕ ನೈತಿಕತೆ ಉಳಿಸಿಕೊಂಡಿರುವುದು ದೇಶದ ಇತಿಹಾಸದಲ್ಲಿಯೇ ಪ್ರಥಮ ಎಂದು ಹೇಳಿದರು. ನೀಲಿಚಿತ್ರ ವೀಕ್ಷಣೆ ಕುರಿತು ತನಿಖೆಗೆ ಮೂರೂ ಪಕ್ಷದವರು ಇರುವ ಸದನ ಸಮಿತಿ ರಚಿಸಲಾಗಿದೆ. ಇದರಿಂದ ಬಿಜೆಪಿ ಮುಜುಗರದಿಂದ ಹೊರಬಂದಿದೆ. ತನಿಖೆ ಪೂರ್ಣಗೊಂಡ ಬಳಿಕ ಸತ್ಯಾಂಶ ಹೊರಬೀಳಲಿದೆ. ಆವರೆಗೆ ಯಾವುದೇ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದರು.

`ರಾಜ್ಯದ ನಾಯಕತ್ವ ವಿಚಾರ ಬಿಜೆಪಿ ಹೈಕಮಾಂಡ್‌ಗೆ ಬಿಟ್ಟಿದ್ದು~ ಎಂದ ಯಡಿಯೂರಪ್ಪ, ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನತೆಗೆ ಹತ್ತಿರವಾಗಿದೆ. ಹೀಗಾಗಿ ರಾಜ್ಯದ ಜನತೆ ಬಿಜೆಪಿ ಮೇಲೆ ವಿಶ್ವಾಸವಿರಿಸಿದ್ದಾರೆ ಎಂದರು.

ನಾಯಕರ ದಂಡು:
ರಾಜ್ಯ ಅಬಕಾರಿ ಸಚಿವ ರೇಣುಕಾಚಾರ್ಯ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳಾ,  ಶಾಸಕರಾದ ಹಾಲಪ್ಪ, ವಿಶ್ವನಾಥ್, ಲಕ್ಷ್ಮಿನಾರಾಯಣ , ಕರಾವಳಿ ಪ್ರಾಧಿಕಾರ ಅಧ್ಯಕ್ಷ ನಾಗರಾಜ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. 


`ರಾಜಕೀಯ ಲಾಭಕ್ಕಾಗಿ~

ಪುತ್ತೂರು: ರಾಜ್ಯದಲ್ಲಿ ಸತ್ತು ಹೋಗಿರುವ ವಿರೋಧಪಕ್ಷಗಳು ಸದನದಲ್ಲಿ ನೀಲಿಚಿತ್ರ ವೀಕ್ಷಿಸಿದ ಪ್ರಕರಣವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಅಬಕಾರಿ ಸಚಿವ ರೇಣುಕಾಚಾರ್ಯ ಕಿಡಿಕಾರಿದರು.

ರಾಜ್ಯದ ಅಭಿವೃದ್ಧಿ ಬಗ್ಗೆ, ಬರಗಾಲದ ಬಗ್ಗೆ , ರಾಜ್ಯದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಬೇಕಾಗಿದ್ದ ಮತ್ತು ಸಹಾಯಕ್ಕೆ ಬರಬೇಕಾಗಿದ್ದ ವಿರೋಧಪಕ್ಷಗಳು ಮುಗಿದುಹೋಗಿರುವ ನೀಲಿಚಿತ್ರ ಪ್ರಕರಣವನ್ನು ವಿನಾ ಕಾರಣ ಕೆದಕು್ತüಿವೆ. ರಾ್ಯüದ ಅಭಿವೃ್ಧüಿಯಿಂದ ಅವರಿಗೆ ಇದುವೇ ಮು್ಯüವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT