ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೂ ಬನ್ನಿ ಎಂದ ತಹ್ಮಿನಾ!

Last Updated 3 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಎಎಫ್‌ಪಿ): ಒಲಿಂಪಿಕ್ಸ್ ಕೂಟದಲ್ಲಿ ಪಾಲ್ಗೊಂಡ ಆಫ್ಘಾನಿಸ್ತಾನದ ಏಕಮಾತ್ರ ಮಹಿಳಾ ಅಥ್ಲೀಟ್ ತಹ್ಮಿನಾ ಕೊಹಿಸ್ತಾನಿ ಅವರು ತಮ್ಮ ದೇಶದ ಇತರ ಮಹಿಳೆಯರಿಗೆ `ನೀವು ಬನ್ನಿ ನನ್ನೊಂದಿಗೆ ಸೇರಿಕೊಳ್ಳಿ~ ಎಂದು ಸಂದೇಶ ನೀಡಿದ್ದಾರೆ.

100 ಮೀ. ಓಟದ ಸ್ಪರ್ಧೆಯ ಹರ್ಡಲ್ಸ್‌ನಲ್ಲಿ ವೈಯಕ್ತಿಕ ಉತ್ತಮ ಪ್ರದರ್ಶನ (14.42 ಸೆ.) ನೀಡಿದ ಅವರು ತಮ್ಮ ದೇಶದ ಇನ್ನಷ್ಟು ಮಹಿಳಾ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬೇಕೆಂದು ಆಶಿಸಿದ್ದಾರೆ.
ಮದ್ದು ಪರೀಕ್ಷೆ: ಐವಾನ್‌ಗೆ ಸ್ಪರ್ಧಿಸುವ ಅವಕಾಶವಿಲ್ಲ

ಲಂಡನ್ (ಎಪಿ): 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಪಡೆದಿದ್ದ ಸ್ಯಾಂಪಲ್‌ಗಳ ಮರುಪರೀಕ್ಷೆಯಲ್ಲಿ ಬೆಲಾರಸ್‌ನ ಹ್ಯಾಮರ್ ಥ್ರೋ ಸ್ಪರ್ಧಿ ಐವಾನ್ ತ್ಸಿಖಾನ್ ತಪ್ಪಿತಸ್ಥ ಎನ್ನುವುದು ಸಾಬೀತಾಗಿದೆ, ಆದ್ದರಿಂದ ಲಂಡನ್ ಕೂಟದಲ್ಲಿ ಅವರಿಗೆ ಸ್ಪರ್ಧಿಸುವ ಅವಕಾಶವಿಲ್ಲ.

ಕ್ಸಿಯಾಂಗ್‌ಗೆ ಗಾಯ
ಲಂಡನ್ (ಐಎಎನ್‌ಎಸ್):
ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಪುರುಷರ 110 ಮೀ. ಹರ್ಡಲ್ಸ್‌ನಲ್ಲಿ ಚಾಂಪಿಯನ್ ಆಗಿದ್ದ ಚೀನಾದ ಲಿಯು ಕ್ಸಿಯಾಂಗ್ ಅವರು ಗಾಯಗೊಂಡಿದ್ದಾರೆ. `ಪಾದದ ನೋವಿನಿಂದ ಕ್ಸಿಯಾಂಗ್ ಬಳಲಿದ್ದಾರೆ. ಆದ್ದರಿಂದ ನಾವೀಗ ಸ್ವಲ್ಪ ಆತಂಕಗೊಂಡಿದ್ದೇವೆ~ ಎಂದು ಕೋಚ್ ಸುನ್ ಹೈಪಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT