ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ರಗಳೆಗಳ ರಚನೆಕಾರ ಹರಿಹರ

Last Updated 1 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನೆಲಮಂಗಲ: `ಶಿವ ಭಕ್ತರ ಚರಿತೆಗಳನ್ನು ಕಾವ್ಯವಸ್ತುವಾಗಿಸಿಕೊಂಡ ಹರಿಹರ ನರರನ್ನು ಸ್ತುತಿಸುವುದಿಲ್ಲ. ಶಿವನ ಹೊರತು ಬೇರಾವುದಕ್ಕೂ ತಲೆಬಾಗುವುದಿಲ್ಲ ಎಂದು ಉದ್ಘೋಷಿಸಿ ಅದರಂತೆ ನಡೆದ ನೂರಾರು ರಗಳೆಗಳ ರಚನೆಕಾರ ಹರಿಹರ ಇಂದಿನ ಗೋಮುಖರಿಗೆ ಮಾದರಿಯಾಗಿದ್ದಾನೆ~ ಎಂದು ವಚನ ಸಂಸ್ಕೃತಿ ಅಧ್ಯಯನ ಕೇಂದ್ರದ ಅಧ್ಯಕ್ಷ ಎಸ್.ಪಿನಾಕಪಾಣಿ ತಿಳಿಸಿದರು.

ಬೆಂಗಳೂರಿನ ವಚನ ಜ್ಯೋತಿ ಬಳಗವು ತಾಲ್ಲೂಕಿನ ಕಂಬಾಳು ಮಠದ ಮರುಳ ಸಿದ್ದೇಶ್ವರ ಅಂಗಳದಲ್ಲಿ `ಮನೆಯಿಂದ ಮನಕ್ಕೆ ಸಂಸ್ಕೃತಿ ಸಂಚಾರ~ದ 10ನೇ ದಿನದ ಉಪನ್ಯಾಸ ಮಾಲಿಕೆಯಲ್ಲಿ `ಕವಿ ಹರಿಹರನ~ ಕುರಿತು ಅವರು ಮಾತನಾಡಿದರು.

ಕಂಬಾಳು ಮಠದ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ನೂತನ ಪೀಠಾಧ್ಯಕ್ಷ ಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ಜನರಲ್ಲಿ ನೈತಿಕತೆಯನ್ನು ಹೆಚ್ಚಿಸಲು ಮಠದಲ್ಲಿ ವಚನಜ್ಯೋತಿ ಬಳಗದ ವತಿಯಿಂದ ಚಿಂತನಾಗೋಷ್ಠಿಗಳನ್ನು ಆಯೋಜಿಸಬೇಕು ಎಂದು ಸಲಹೆ ಮಾಡಿದರು.

ಉದ್ಯಮಿ ಜಿ.ಎನ್.ರಾಜಶೇಖರ್, ವಿಜ್ಞಾನಿ ಡಾ.ಶಿವಕುಮಾರಸ್ವಾಮಿ, ಕಸಾಪ ಜಿಲ್ಲಾ ಕಾರ್ಯದರ್ಶಿ ಕೆ.ಬಿ.ಸದಾನಂದಾರಾಧ್ಯ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಶಂಕರ್ ವೇದಿಕೆಯಲ್ಲಿದ್ದರು. ಗಾಯಕ ಆಂಜನೇಯ ಗದ್ದಿ ಮತ್ತು ಮಂಜುನಾಥ ಎಮ್ಮಿಗನೂರು ಹಿಂದುಸ್ಥಾನಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ತಿಗಳರ ಸಂಘದಿಂದ ಪ್ರತಿಭಾ  ಪುರಸ್ಕಾರ: ತಾಲ್ಲೂಕು ತಿಗಳರ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ತನ್ನ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು.

 ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ಶೇ 70ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ಮಾಹಿತಿಗೆ ಸಂಪರ್ಕಿಸುವ ಮೊಬೈಲ್ ಸಂಖ್ಯೆಗಳು 9986053319, 9844919930.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT