ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ ಚಿಕಿತ್ಸೆಗೂ ತರಬೇತಿ

Last Updated 24 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಇಂದಿನ ಒತ್ತಡದ ಜೀವನ ದೇಹಾರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಹೊರಬರಲು ಜನರು ಪ್ರಾಕೃತಿಕ, ಆರ್ಯುವೇದ ಹೀಗೆ ಬಗೆಬಗೆಯ ಚಿಕಿತ್ಸೆಗಳತ್ತ ಮುಖ ಮಾಡಿದ್ದಾರೆ. ನೃತ್ಯ ಕೂಡ ಚಿಕಿತ್ಸೆಯ ಒಂದು ಪರಿಣಾಮಕಾರಿ ವಿಧಾನವಾಗಿ ಜನಪ್ರಿಯವಾಗುತ್ತಿರುವುದು ಹೊಸ ಬೆಳವಣಿಗೆ.

ಸ್ಮಾರ್ಟ್ ಮತ್ತು ಪರಿವರ್ತನಾ ಸಂಸ್ಥೆಗಳು ಈಗ ಸ್ಟುಡಿಯೋ ಫಾರ್ ಮೂವ್‌ಮೆಂಟ್ ಆರ್ಟ್ ಅಂಡ್ ಥೆರಪಿಸ್ ಸಹಯೋಗದಲ್ಲಿ  ಎಫ್‌ಸಿಎಟಿ (ಫೌಂಡೇಷನ್ ಕೋರ್ಸ್ ಇನ್ ಕ್ರಿಯೇಟಿವ್ ಆರ್ಟ್ಸ್ ಥೆರಪಿ) ಕ್ರಿಯಾತ್ಮಕ ನೃತ್ಯ ಚಿಕಿತ್ಸಾ ಶಿಬಿರ ಆಯೋಜಿಸಿವೆ. ಈ  ಮೂಲಕ ಕ್ರಿಯಾತ್ಮಕ ಹಾಗೂ ಹೆಚ್ಚು ಪ್ರಾಯೋಗಿಕವಾಗಿ ಚಿಕಿತ್ಸೆ ತರಬೇತಿ ಕೊಡುವುದು ಇದರ ಉದ್ದೇಶ. ಇಲ್ಲಿ ಕಲಿತವರು ಸ್ವತಂತ್ರವಾಗಿ ಬೇರೆಯವರಿಗೆ ಚಿಕಿತ್ಸೆ ನೀಡಬಹುದು.

ಭಾರತದ ನೃತ್ಯ ಚಿಕಿತ್ಸಾ ಸಂಸ್ಥೆಯಾದ ಸ್ಮಾರ್ಟ್ ಮತ್ತು ಪರಿವರ್ತನ ಸಮೂಹ ಅಭಿವೃದ್ಧಿಪಡಿಸಿದ ಈ ಚಿಕಿತ್ಸಾ ತರಬೇತಿ  ಒಂದು ವರ್ಷದ ಅವಧಿಯದು.

ಸಮಾಲೋಚನೆ ಮತ್ತು ಚಿಕಿತ್ಸಾ ಕೌಶಲ್ಯ, ನೃತ್ಯ ಚಿಕಿತ್ಸೆ, ಕಲೆ ಚಿಕಿತ್ಸೆ ಮತ್ತು ನಾಟಕ ಚಿಕಿತ್ಸೆ ಎಂಬ ನಾಲ್ಕು ವಿಭಾಗಗಳನ್ನು ಹೊಂದಿದೆ ಎಂದು ಸ್ಮಾರ್ಟ್ ಸಂಸ್ಥೆಯ ಬೃಂದಾ ಜಾಕೋಬ್ ತಿಳಿಸುತ್ತಾರೆ.

 ನೃತ್ಯ, ಚಿತ್ರ ಬಿಡಿಸುವುದು, ನಾಟಕ ಅಭಿನಯ ಹೀಗೆ ಪ್ರಾಯೋಗಿಕ ಶಿಕ್ಷಣದ ಮೂಲಕ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಅನೇಕ ಅತಿಥಿ ಉಪನ್ಯಾಸಗಳು, ಕಾರ್ಯಗಾರಗಳು ನಡೆಯಲಿದ್ದು, ಅಭ್ಯರ್ಥಿಗಳು  ಮ್ಮ ಆಸಕ್ತಿಗೆ ಅನುಗುಣವಾಗಿ ಯಾವುದೇ ರೀತಿಯ ಚಿಕಿತ್ಸಾ ವಿಧಾನ ಆರಿಸಿಕೊಳ್ಳಬಹುದು.

ಶಿಬಿರ ಅಕ್ಟೋಬರ್‌ನಿಂದ ಪ್ರಾರಂಭ, ಪ್ರವೇಶಕ್ಕೆ ವಯೋಮಿತಿ ಇಲ್ಲ. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಂಡು ಕಲಿಕೆ ಪೂರ್ಣ ಗೊಂಡ ನಂತರ ಪ್ರಮಾಣ ಪತ್ರ ನೀಡಲಾಗುವುದು. ಮಾಹಿತಿಗೆ: 98452 36242.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT