ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೃತ್ಯ-ಸಂಗೀತ ಕಲಾಕೇಂದ್ರದ 53ನೇ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ

Last Updated 9 ಜನವರಿ 2012, 10:10 IST
ಅಕ್ಷರ ಗಾತ್ರ

ದಾವಣಗೆರೆ: ಕಲೆ, ಸಂಗೀತ, ನಾಟಕ, ಸಿನಿಮಾಗಳಿಂದ ಮನಸ್ಸಿಗೆ ಮನರಂಜನೆ ಸಿಗುತ್ತದೆ; ಆದರೆ, ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳಿಂದ ಆತ್ಮ ಸಾಕ್ಷಾತ್ಕಾರ ಆಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗುಂಡಿಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 53ನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಎಸ್. ಶಿವಶಂಕರ್ ಮಾತನಾಡಿ, ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿಯವರಲ್ಲಿದ್ದ ನಾಟ್ಯಶ್ರದ್ಧೆ ಇದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, 53 ವರ್ಷಗಳ ಹಿಂದೆ ದಾವಣಗೆರೆ ಸಾಧಾರಣ ನಗರವಾಗಿತ್ತು. ಆಗ ನಗರಕ್ಕೆ ಆಗಮಿಸಿ ಶಾಸ್ತ್ರೀಯ ಸಂಗೀತ ನಾಟ್ಯ ಗುರುಗಳಾಗಿ ಅಪಾರ ಜನಮನ್ನಣೆ ಗಳಿಸಿದರು. ಈಗ ಕಲಾಕೇಂದ್ರ ಈಗ ಅವರ ಕನಸಿನ ಕೂಸಾಗಿ ಬೆಳೆಯುತ್ತಿದೆ. ಈಗ ನಗರದಲ್ಲಿ ನಾಟ್ಯ ಪಾಠಶಾಲೆ ಹೆಸರಲ್ಲಿ ಅನೇಕ ಕೇಂದ್ರಗಳು ಹುಟ್ಟಿವೆ. ಆದರೆ, ಅವು ಶಾಸ್ತ್ರೀಯವಾಗಿ ಎಷ್ಟು ಸದೃಢವಾಗಿವೆಯೋ ಗೊತ್ತಿಲ್ಲ. ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರ ಮಾತ್ರ ಕಳೆದ 53 ವರ್ಷಗಳಿಂದ ಶಾಸ್ತ್ರೋಕ್ತವಾಗಿ ನಾಟ್ಯಪಾಠ ಹೇಳುತ್ತಾ ಬಂದಿವೆ ಎಂದರು.

ಇದೇ ಸಂದರ್ಭದಲ್ಲಿ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಪ್ರಶಸ್ತಿಯನ್ನು ವಿದ್ವಾನ್ ಚಂದ್ರಶೇಖರ ಶೆಟ್ಟಿ ಅವರಿಗೆ ಹಾಗೂ ವಿದುಷಿ ಲಕ್ಷ್ಮೀ ದೇವಮ್ಮ ಪ್ರಶಸ್ತಿಯನ್ನು ಸಂಗೀತ ಕಲಾವಿದೆ ಜಯಲಕ್ಷ್ಮೀ ಚಂದ್ರಶೇಖರ್ ಅವರಿಗೆ ಪ್ರದಾನ ಮಾಡಲಾಯಿತು.

2008 ಜಗದ್ಗುರು ಸಿದ್ದಲಿಂಗೇಶ್ವರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರದ ಗೌರವ ಅಧ್ಯಕ್ಷ ಎಚ್.ಬಿ. ಮಂಜುನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ ಮೋತಿ ಪಿ. ರಾಮರಾವ್, ದಿನೇಶ್ ಕೆ. ಶೆಟ್ಟಿ, ರಜನಿ ರಘುನಾಥ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT