ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಗಡಿಯೇ? ಮೂಗು ಹಿಂಡಬೇಡಿ

Last Updated 15 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಕೆಲವರಿಗೆ ಚಳಿಗಾಲ ಮುಗಿಯುವವರೆಗೂ ನೆಗಡಿಯ ಕಾಟ ತಪ್ಪಿದ್ದಲ್ಲ. ಏನು ಮಾಡಿದರೂ ನೀಗದ ಉಪದ್ರವ ಅದು. ಅಂತಹವರು ಊಟ-ಉಪಚಾರದಲ್ಲಿ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ನೆಗಡಿ, ಶೀತದ ತೊಂದರೆಗಳಿಂದ ಮುಕ್ತರಾಗಬಹುದು.

ಇಲ್ಲಿವೆ ಕೆಲವು ಮಾರ್ಗಗಳು-
*ಮುಂಜಾನೆ ಎದ್ದ ಕೂಡಲೇ ಒಂದು ಲೋಟ ಬಿಸಿ ನೀರಿಗೆ ಅರ್ಧ ನಿಂಬೆ ಹಣ್ಣಿನ ರಸ, ಚಿಟಿಕೆ ಉಪ್ಪು, ಒಂದು ಚಮಚ ಚ್ಯವನ್‌ಪ್ರಾಶ್ ಲೇಹ್ಯವನ್ನು ಸೇರಿಸಿ ಬಿಸಿಯಾಗಿರುವಾಗಲೇ ಕುಡಿಯಿರಿ.

*11 ಗಂಟೆಗೆ ಗ್ರೀನ್ ಟೀ ಅಥವಾ ಕಶಾಯದ ಪುಡಿಯನ್ನು ನೀರಿನಲ್ಲಿ ಕುದಿಸಿ, ಶೋಧಿಸಿ ಕುಡಿಯಿರಿ.
(ಕಶಾಯ ಹೀಗೆ ತಯಾರಿಸಿ: ಸಾಮಗ್ರಿ- ಜೀರಿಗೆ ಅರ್ಧ ಬಟ್ಟಲು, ಮೆಣಸು, ದನಿಯಾ, ಗಸಗಸೆ ಕಾಲು ಬಟ್ಟಲು. ವಿಧಾನ- ಎಲ್ಲ ಸಾಮಗ್ರಿಗಳನ್ನೂ ಹುರಿದು ಪುಡಿ ಮಾಡಿ, ಅದರ ಜೊತೆಗೆ ಸ್ವಲ್ಪ ಬೆಲ್ಲ ಸೇರಿಸಿ ಇಟ್ಟುಕೊಂಡರೆ ಬೇಕಾದಾಗ ಅದನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು.)

*ಒಂದು ನೆಲ್ಲಿಕಾಯಿಯನ್ನು ಬೇಯಿಸಿ ಬೀಜ ತೆಗೆದು ಮೊಸರಿಗೆ ಸೇರಿಸಿ. ಅದಕ್ಕೆ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಕಲಸಿ. ಒಣಮೆಣಸಿನಕಾಯಿ, ಸಾಸಿವೆ ಒಗ್ಗರಣೆ ಮಾಡಿ ತುಸು ಉಪ್ಪು ಹಾಕಿ ಊಟದ ಜೊತೆ ಸೇವಿಸಿ.

*ವಾರಕ್ಕೆ ಎರಡು ದಿನವಾದರೂ ಮೆಣಸು, ಜೀರಿಗೆ, ಬೆಳ್ಳುಳ್ಳಿ ಹಾಕಿದ ರಸಂ ಅನ್ನು ಬಿಸಿ ಅನ್ನದೊಂದಿಗೆ ಸೇವಿಸಿ.
*ಮೆಂತೆ, ಪಾಲಕ್ ಅಥವಾ ಪುದೀನ ಸೊಪ್ಪಿನ ಸೂಪ್ ಅನ್ನು ಸಂಜೆಯ ಹೊತ್ತು ಕುಡಿಯಿರಿ.

*ರಾತ್ರಿ ಊಟದ ನಂತರ ಅರ್ಧ ಲೋಟ ಹಾಲು, ಅರ್ಧ ಲೋಟ ನೀರು ಸೇರಿಸಿ ಕಾಲು ಚಮಚ ಅರಿಶಿಣ ಹಾಕಿ ಕುದಿಸಿ ಬಿಸಿಯಾಗಿರುವಾಗಲೇ ಕುಡಿಯಿರಿ.
-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT