ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ಮರುಕಳಿಕೆ

Last Updated 29 ಜುಲೈ 2013, 19:59 IST
ಅಕ್ಷರ ಗಾತ್ರ

ಯಾವುದೇ ವ್ಯಕ್ತಿಗೆ ತನ್ನ ಹಳೆಯ ನೆನಪುಗಳು ಅವಿಸ್ಮರಣೀಯ. ಹಳೆಯ ನೆನಪುಗಳು ಸದಾ ಕಾಲ ಮನಸ್ಸಿಗೆ ಮಧುರ ಅನುಭವವನ್ನೇ ನೀಡುತ್ತಿರುತ್ತವೆ. ಟಿ. ಜಾನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಭೆ ಇಂಥದ್ದೊಂದು ನೆನಪುಗಳ ಮರುಕಳಿಕೆಗೆ ಸಾಕ್ಷಿಯಾಯಿತು.

ಕಿರಿಯ ವಿದ್ಯಾರ್ಥಿಗಳ ಸ್ವಾಗತದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕಾಲೇಜಿನ 70 ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನೆಚ್ಚಿನ ಗೆಳೆಯ ಗೆಳತಿಯರು, ಪ್ರಾಧ್ಯಾಪಕರನ್ನು ಬಹುದಿನದ ನಂತರ ಭೇಟಿ ಮಾಡಿದ ಖುಷಿ ಹಳೆಯ ವಿದ್ಯಾರ್ಥಿಗಳ ಮೊಗದಲ್ಲಿ ಕಾಣಿಸುತ್ತಿತ್ತು.

ಹಳೆಯ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಡೆದುಕೊಂಡ ತಮ್ಮ ಹಳೆಯ ಅನುಭವಗಳು ಹಾಗೂ ಕಾಲೇಜಿನ ಸಂಭ್ರಮದ ಕ್ಷಣಗಳನ್ನು ನೆನಪು ಮಾಡಿಕೊಂಡು ಸಂತಸ ಪಟ್ಟರು. ಇದಾದ ನಂತರ ಭರ್ಜರಿ ಊಟ ಹಾಗೂ ಹಲವು ಮನರಂಜನಾ ಚಟುವಟಿಕೆಗಳು ನಡೆದವು.

`ನಾನು ಓದಿದ ಕಾಲೇಜು ಸಮಾಜದ ಅಭಿವೃದ್ಧಿಗೆ ಶ್ರಮಿಸುವಂಥ ಉತ್ತಮ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡುತ್ತಿರುವುದಕ್ಕೆ ತುಂಬ ಸಂತಸವಾಗುತ್ತಿದೆ. ಕಾಲೇಜಿನ ಆವರಣ, ಇಲ್ಲಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಎಲ್ಲರನ್ನೂ ನೋಡುತ್ತಿದ್ದರೆ ಮನಸ್ಸು ರೋಮಾಂಚಿತವಾಗುತ್ತಿದೆ' ಎಂದು ಕಾಲೇಜಿನ ಹಳೆಯ ವಿದ್ಯಾರ್ಥಿಯೊಬ್ಬರು ತಮ್ಮ ಅನುಭವ ಹಂಚಿಕೊಂಡರು.

ಹಳೆಯ ವಿದ್ಯಾರ್ಥಿಗಳ ಸಂಘದ ಸಂಯೋಜಕ ರಾಜೇಶ್ ನಾಯಕ್ ಹಾಗೂ ವಸೀಗರನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲ ಅವಶ್ಯಕ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಡಿಎಕೆ ಯೋಹಾನ್, ಕ್ಯಾಂಪಸ್ ನಿರ್ದೇಶಕ ವಿಂಗ್ ಕಮಾಂಡರ್ (ನಿವೃತ್ತ) ಪಿ. ಸಾಂಬಶಿವನ್, ಪ್ರಾಂಶುಪಾಲರು, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಟಿ. ಜಾನ್ ಕಾಲೇಜಿನ ಮುಖ್ಯಸ್ಥರು ಸಮಾರಂಭದಲ್ಲಿ ಹಾಜರಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT